ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತಂದು, ಅವರಿಗೆ ಸ್ಮಾರಕ ನಿರ್ಮಾಣ ಮಾಡಿದೆ | ಜನತಾ ನ್ಯೂಸ್

08 Jul 2021
387

ಮಂಡ್ಯ : ಸಂಸದೆ ಸುಮಲತಾ ಅಂಬರೀಶ್ ಅವರ ಅಂಬರೀಶ್ ವಿಚಾರ ಚರ್ಚಿಸಿದರೆ ಮಣ್ಣಾಗುತ್ತಾರೆಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿರುಗೇಟನ್ನೂ ನೀಡಿದ್ದಾರೆ.

ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಗ್ರಾಮದಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಕ್ಕೆ ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯಗೆ ತಂದು ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟೆ, ಬೆಂಗಳೂರಿನಲ್ಲಿ ಅಂಬರೀಶ್ ಅವರ ಸಮಾಧಿಗೆ ಜಾಗ ನೀಡಿದೆ. ಆದರೆ ವಿಷ್ಣುವರ್ಧನ್ ಅವರು ನಿಧನರಾದಾಗ ಬಿಜೆಪಿ ಸರ್ಕಾರ ಹೇಗೆ ನಡೆದುಕೊಂಡಿದೆ ಎನ್ನುವುದು ಎಲ್ಲರಿಗೂ ಗೋತ್ತು. ಇಂದಿಗೂ ಸಹ ವಿಷ್ಟುವರ್ಧನ್ ಅವರಿಗೆ ಸರಿಯಾಗಿ ಸ್ಮಾರಕ ಕಟ್ಟಲು ಆಗಿಲ್ಲ. ಇದನ್ನು ಸುಮಲತಾ ಅವರು ಅರ್ಥ ಮಾಡಿಕೊಳ್ಳಬೇಕು. ಈ ರೀತಿ ಮಣ್ಣಾಗಿ ಹೋಗುತ್ತಾರೆ ಎಂದು ಹೇಳಲು ಹೋಗಬಾರದು ಎಂದರು.

ಬೇರೆ ಮಹಿಳೆಯರ ಬಗ್ಗೆ ಬೇಕಾದರೆ ಚರ್ಚೆ ಮಾಡೋಣ. ಇಂತಹ ವಿಶೇಷವಾದ ಮಹಿಳೆಗೆ ನಮಸ್ಕಾರ. ವಿಷ್ಣುವರ್ಧನ್ ಸ್ಮಾರಕ ಏನಾಯಿತು ಎಲ್ಲರಿಗೂ ಗೊತ್ತಿರೋದೆ. ಬಿಜೆಪಿ ಸರ್ಕಾರದವರು ಈವರೆಗೆ ಏನಾದರೂ ಮಾಡಿದರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಹಿರಿಯರಾದ ಜಿ.ಮಾದೇಗೌಡ ಆರೋಗ್ಯ ವಿಚಾರಿಸಲು ಮಂಡ್ಯಕ್ಕೆ ಬಂದಿದ್ದೇನೆ. ಈ ಸಂದರ್ಭದಲ್ಲಿ ಬೇರೆಯವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ನಾನು ಅವರ ಬಗ್ಗೆ ಏಕೆ ಮಾತಾಡಲಿ, ಸುಮಲತಾ ಹೇಳಿಕೆ ಬಗ್ಗೆ ಮೈಸೂರು ಸಂಸದ ಪ್ರತಾಪ್​ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಅಕ್ರಮ ಗಣಿಗಾರಿಕೆ ವಿಚಾರವಾಗಿ ಗಣಿ ಸಚಿವ ನಿರಾಣಿ ಸ್ಪಷ್ಟನೆ ನೀಡಿದ್ದಾರೆ ಎಂದರು.

ಅಕ್ರಮ ಗಣಿಗಾರಿಕೆ ನಿಷೇಧಿಸಿದ್ದೇವೆಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗಿ ಅಕ್ರಮ ಗಣಿಗಾರಿಕೆ ಬಂದ್ ಮಾಡಿಸಿದ್ದೆ. ನನ್ನನ್ನು ಫಿನಿಶ್​ ಮಾಡುತ್ತೇವೆ ಎಂದು ತಿಳಿದುಕೊಂಡಿದ್ದರೆ ಅದು ಆಗಲ್ಲ. ಇನ್ನು 100 ವರ್ಷ ಆದರೂ ಕೆಆರ್​ಎಸ್​ ಡ್ಯಾಂಗೆ ಏನೂ ಆಗಲ್ಲ. ನನ್ನ ಅವಧಿಯಲ್ಲಿ ಕೆಆರ್​ಎಸ್ ಸುತ್ತಮುತ್ತಲ 20 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ ಮಾಡಿದ್ದೆ. ಮನ್ಮುಲ್​, ಮೈಶುಗರ್​ ವಿಚಾರದಲ್ಲಿ ಅನ್ಯಾಯ ಆಗಲು ಬಿಡಲ್ಲ ಎಂದು ಘೋಷಿಸಿದರು.

ಸುಮಲತಾ ಅವರ ಬಗ್ಗೆ ಸಂಸದ ಪ್ರತಾಪ್ ಸಿಂಹ ಅವರು ಸುಧೀರ್ಘವಾಗಿ ಮಾತನಾಡಿದ್ದಾರೆ. ನನ್ನ ತೇಜೋವಧೆ ಮಾಡಿದರು ಸಹ ಯಾರೂ ನನ್ನ ಮುಗಿಸಲು ಸಾಧ್ಯವಿಲ್ಲ. ನಾವು ಸದಾ ಜನರು ಮತ್ತು ರೈತರ ಪರವಾಗಿ ಇರುತ್ತೇನೆ, ಜನರ ಆಶೀರ್ವಾದ ನನ್ನ ಮೇಲೆ ಇದೆ ಎಂದು ಕುಮಾರಸ್ವಾಮಿ ಹೇಳಿದರು.

RELATED TOPICS:
English summary :HD Kumaraswamy

ಒಲಂಪಿಕ್ಸ್ : 49 ವರ್ಷಗಳ ನಂತರ ಪುರುಷರ ಹಾಕಿ ಸೆಮಿಫೈನಲ್ ತಲುಪಿದ ಭಾರತೀಯ ತಂಡ | ಜನತಾ ನ್ಯೂ&#
ಒಲಂಪಿಕ್ಸ್ : 49 ವರ್ಷಗಳ ನಂತರ ಪುರುಷರ ಹಾಕಿ ಸೆಮಿಫೈನಲ್ ತಲುಪಿದ ಭಾರತೀಯ ತಂಡ | ಜನತಾ ನ್ಯೂ&#
ಒಲಂಪಿಕ್ಸ್ : ಕಂಚು ಗೆದ್ದ ಪಿ.ವಿ.ಸಿಂಧು, 2 ಪದಕ ಗೆದ್ದ ಪ್ರಥಮ ಭಾರತೀಯ ಮಹಿಳೆ | ಜನತಾ ನ್ಯೂ&#
ಒಲಂಪಿಕ್ಸ್ : ಕಂಚು ಗೆದ್ದ ಪಿ.ವಿ.ಸಿಂಧು, 2 ಪದಕ ಗೆದ್ದ ಪ್ರಥಮ ಭಾರತೀಯ ಮಹಿಳೆ | ಜನತಾ ನ್ಯೂ&#
ವಿಹಾರಕ್ಕೆ ಬಂದಿದ್ದ ಸ್ನೇಹಿತರ ತಂಡ, ಯುವತಿಯೋರ್ವಳು ನೀರುಪಾಲು, ಮೂವರ ರಕ್ಷಣೆ | ಜನತಾ ನ್ಯೂ&#
ವಿಹಾರಕ್ಕೆ ಬಂದಿದ್ದ ಸ್ನೇಹಿತರ ತಂಡ, ಯುವತಿಯೋರ್ವಳು ನೀರುಪಾಲು, ಮೂವರ ರಕ್ಷಣೆ | ಜನತಾ ನ್ಯೂ&#
ರಾಜಕೀಯ ಮುಖ್ಯವಲ್ಲ, ಜನರ ಹಿತವೇ ನನಗೆ ಮುಖ್ಯ: ಎಂ.ಪಿ.ರೇಣುಕಾಚಾರ್ಯ | ಜನತಾ ನ್ಯೂ&#
ರಾಜಕೀಯ ಮುಖ್ಯವಲ್ಲ, ಜನರ ಹಿತವೇ ನನಗೆ ಮುಖ್ಯ: ಎಂ.ಪಿ.ರೇಣುಕಾಚಾರ್ಯ | ಜನತಾ ನ್ಯೂ&#
ಪ್ರವಾಹ: ರಾಜ್ಯ ಸರ್ಕಾರದಿಂದ 510 ಕೋಟಿ ರೂ. ಬಿಡುಗಡೆ, ಸಿಎಂ ಬೊಮ್ಮಾಯಿ ಘೋ‍ಷಣೆ | ಜನತಾ ನ್ಯೂ&#
ಪ್ರವಾಹ: ರಾಜ್ಯ ಸರ್ಕಾರದಿಂದ 510 ಕೋಟಿ ರೂ. ಬಿಡುಗಡೆ, ಸಿಎಂ ಬೊಮ್ಮಾಯಿ ಘೋ‍ಷಣೆ | ಜನತಾ ನ್ಯೂ&#
ವಿದ್ಯಾರ್ಥಿನಿಯರಿಗೆ ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ ಆರೋಪ! | ಜನತಾ ನ್ಯೂ&#
ವಿದ್ಯಾರ್ಥಿನಿಯರಿಗೆ ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ ಆರೋಪ! | ಜನತಾ ನ್ಯೂ&#
ಮುಖ್ಯಮಂತ್ರಿ ಆಗಬೇಕೆಂದು ಗಡ್ಡಬಿಟ್ಟಿದ್ದಲ್ಲ: ಸಿ.ಟಿ.ರವಿ | ಜನತಾ ನ್ಯೂ&#
ಮುಖ್ಯಮಂತ್ರಿ ಆಗಬೇಕೆಂದು ಗಡ್ಡಬಿಟ್ಟಿದ್ದಲ್ಲ: ಸಿ.ಟಿ.ರವಿ | ಜನತಾ ನ್ಯೂ&#
2022ರ ಮಾರ್ಚ್​ನಲ್ಲಿ
2022ರ ಮಾರ್ಚ್​ನಲ್ಲಿ "ಗಡ್ಡಧಾರಿ ವ್ಯಕ್ತಿ" ರಾಜ್ಯದ ಸಿಎಂ ಆಗ್ತಾರೆ: ಕುತೂಹಲ ಮೂಡಿಸಿದ ಭವಿಷ್ಯವಾಣಿ | ಜನತಾ ನ್ಯೂ&#
ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಷ್ಟಕಾಲ ಬಂದ್ರೆ ನನ್ನ ಸಪೋರ್ಟ್ ಇದೆ : ಹೆಚ್​​ಡಿಡಿ | ಜನತಾ ನ್ಯೂ&#
ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಷ್ಟಕಾಲ ಬಂದ್ರೆ ನನ್ನ ಸಪೋರ್ಟ್ ಇದೆ : ಹೆಚ್​​ಡಿಡಿ | ಜನತಾ ನ್ಯೂ&#
ಬೊಮ್ಮಾಯಿಗೆ ಹೈಕಮಾಂಡ್ ದಿಢೀರ್ ಬುಲಾವ್: ಮತ್ತೆ ದೆಹಲಿಗೆ ತೆರಳಿದ ಸಿಎಂ ಬೊಮ್ಮಾಯಿ | ಜನತಾ ನ್ಯೂ&#
ಬೊಮ್ಮಾಯಿಗೆ ಹೈಕಮಾಂಡ್ ದಿಢೀರ್ ಬುಲಾವ್: ಮತ್ತೆ ದೆಹಲಿಗೆ ತೆರಳಿದ ಸಿಎಂ ಬೊಮ್ಮಾಯಿ | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 37 ಸಾವು, 1,987 ಹೊಸ ಪ್ರಕರಣ : ಬೆಂಗಳೂರಿನಲ್ಲಿ 450 | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 37 ಸಾವು, 1,987 ಹೊಸ ಪ್ರಕರಣ : ಬೆಂಗಳೂರಿನಲ್ಲಿ 450 | ಜನತಾ ನ್ಯೂ&#
ಕೋವಿಡ್ 3ನೇ ಅಲೆ: ಗಡಿಗಳಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ! | ಜನತಾ ನ್
ಕೋವಿಡ್ 3ನೇ ಅಲೆ: ಗಡಿಗಳಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ! | ಜನತಾ ನ್

ನ್ಯೂಸ್ MORE NEWS...