ಸ್ಮಾರಕ ಸಂಬಂಧ ಭೇಟಿ ಮಾಡಿದಾಗ ಮುಖಕ್ಕೆ ಪೇಪರ್ ಎಸೆದಿದ್ದನ್ನು ನೆನಪಿಸಿಕೊಳ್ಳಲಿ: ಸುಮಲತಾ | ಜನತಾ ನ್ಯೂಸ್

09 Jul 2021
455

ಬೆಂಗಳೂರು : ಬೆಂಗಳೂರಿನಲ್ಲಿ ಸಂಸದೆ ಸುಮಲತಾ ಅಂಬರೀಶ್ ದಿಢೀರ್ ಸುದ್ದಿಗೋಷ್ಠಿ ನಡೆಸಿ, ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂಬರೀಶ್ ಹೆಸರು ಹೇಳಲೂ ಅವರಿಗೆ ಯೋಗ್ಯತೆಯಿಲ್ಲ. ಅಂಬರೀಶ್ ಕಾಲದಲ್ಲಿ ಅಕ್ರಮ ನಡೆದಿದ್ದರೆ ದಾಖಲೆ ತರಲಿ. ಇಷ್ಟು ವರ್ಷ ಯಾಕೆ ಸುಮ್ಮನಿದ್ದರು? ಎಂದು ಕಿಡಿಕಾರಿರುವ ಸುಮಲತಾ, ಅಂಬರೀಶ್ ಹೆಸರು ದುರ್ಬಳಕೆ ಬಗ್ಗೆ ಬೇಸರ ವ್ಯಕ್ತಪಡಿಸಿ, ಭಾವುಕರಾಗಿ ಮಾತನಾಡಿದ್ದಾರೆ.

ಅಂಬರೀಶ್ ಹೆಸರು ಹೇಳಲು ಯೋಗ್ಯತೆ ಇಲ್ಲದವರು ಇಂದು ಹೆಸರು ಬಳಸಿ ರಾಜಕೀಯ ಮಾಡುತ್ತಿದ್ದಾರೆ. ಅಂಬರೀಶ್ ಕಾಲದಲ್ಲೇ ಅಕ್ರಮ ನಡೆದಿತ್ತು ಎಂದು ಆರೋಪ ಮಾಡುತ್ತಿದ್ದಾರೆ.. ಅಂಬರೀಶ್ ಕಾಲದಲ್ಲಿ ಅಕ್ರಮ ನಡೆದಿದ್ದರೆ ದಾಖಲೆ ಸಮೇತ ದೂರು ನೀಡಲಿ, ಇಷ್ಟು ದಿನ ಸುಮ್ಮನೆ ಇದ್ದಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಅಂಬರೀಶ್ ಸ್ಮಾರಕ ವಿಚಾರವಾಗಿ ದೊಡ್ಡಣ್ಣ, ಶಿವರಾಮಣ್ಣ ಹೋಗಿದ್ದಾಗ ಇವರು ಮಾತನಾಡಿದ್ದು ಸ್ವಲ್ಪ ನೆನಪು ಮಾಡಿಕೊಳ್ಳಲಿ, ಹಾಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಹಿ ಹಾಕಿದ್ದು ನನಗೆ ನೆನಪಿದೆ. ಸ್ಮಾರಕ ನಿರ್ಮಾಣ ಅಭಿಮಾನಗಳ ಬೇಡಿಕೆ ಅದಕ್ಕೆ ಅಂದಿನ ಸರ್ಕಾರ ಸ್ಪಂದಿಸಿದ ರೀತಿ ಜನರಿಗೆ ಗೊತ್ತಿದೆ ಎಂದರು.

ಅಂಬರೀಶ್ ಸ್ಮಾರಕವನ್ನು ಕುಮಾರಸ್ವಾಮಿ ಮಾಡಿಸಿದ್ದಲ್ಲ. ಹಾಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಹಿ ಮಾಡಿ ಒಪ್ಪಿಗೆ ನೀಡಿದ್ದಾರೆ. ಸ್ಮಾರಕ ಸಂಬಂಧ ಹೆಚ್‌.ಡಿ.ಕುಮಾರಸ್ವಾಮಿ ಭೇಟಿಗೆ ಹೋಗಿದ್ದಾಗ ಅವರು ಯಾವ ರೀತಿ ವರ್ತಿಸಿದ್ದಾರೆಂದು ನೆನಪಿಸಿಕೊಳ್ಳಲಿ. ಆಗ ಏಕವಚನದಲ್ಲಿ ಮಾತನಾಡಿ ಪೇಪರ್ ಮುಖಕ್ಕೆ ಎಸೆದಿದ್ದರು. ಅವರದ್ದು ಸಾಧನೆ ಏನು ಎಂದು ಮಾತನಾಡಿದ್ದರು. ಈ ಘಟನೆಯಿಂದ ಬೇಸರವಾಗಿ ನಟ ದೊಡ್ಡಣ್ಣ ಕೂಡಾ ಕಣ್ಣೀರು ಹಾಕಿದ್ದಾರೆ. ಇಷ್ಟಕ್ಕೂ ಯಾರೇ ಸಿಎಂ ಆಗಿದ್ದರೂ ಅಂಬರೀಶ್ ಸ್ಮಾರಕ ಮಾಡ್ತಿದ್ದರು. ಅದು ಅವರ ಕರ್ತವ್ಯ ಎಂದು ಸುಮಲತಾ ಉತ್ತರಿಸಿದ್ದಾರೆ.

ಅಂಬರೀಶ್​ ಸ್ಮಾರಕಕ್ಕೂ ಮೊದಲೇ ವಿಷ್ಣುವರ್ಧನ್ ಸ್ಮಾರಕ ಸಿದ್ಧವಾಗುತ್ತದೆ. ಅವರ ಸ್ಮಾರಕದ ಕೆಲಸವೂ ಆರಂಭವಾಗಿದೆ. ಆದರೆ, ಜಾಗದ ಸಮಸ್ಯೆಯಿಂದ ಸ್ವಲ್ಪ ಗೊಂದಲವಾಗಿತ್ತು ಅಷ್ಟೆ ಎಂದಿರುವ ಸುಮಲತಾ, ಯಾವುದೇ ಹಿರಿಯ ವ್ಯಕ್ತಿತ್ವಗಳ ಬಗ್ಗೆ ಮಾತನಾಡುವುದಕ್ಕೂ ಮುನ್ನ ಆ ಯೋಗ್ಯತೆ ಅವರಿಗಿದೆಯಾ ಎಂದು ಯೋಚಿಸಲಿ ಎಂದು ಜೆಡಿಎಸ್​ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಡಾ.ರಾಜ್​ಕುಮಾರ್​ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಏನಾಯಿತು? ಆಗ ಮುಖ್ಯಮಂತ್ರಿ ಯಾರಿದ್ದರು? ಈಗ ಇದೆಲ್ಲಾ ಮಾತನಾಡುವುದಕ್ಕೆ ಅವರಿಗೆ ನೈತಿಕತೆ ಇದೆಯಾ ಎಂದು ಸಿಟ್ಟಾಗಿದ್ದಾರೆ.

ಕುಮಾರಸ್ವಾಮಿ ಟೆಲಿಪೋನ್ ಟ್ಯಾಪಿಂಗ್ ಮಾಡಿಲ್ಲ ಎಂದಿದ್ದಾರೆ. ಕಳ್ಳ ತಾನು‌ ಕಳ್ಳತನ ಮಾಡಿದ್ದಾನೆ ಎಂದು ಒಪ್ಪಿಕೊಳ್ಳಲ್ಲ.. ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಬಗ್ಗೆ ‌ಮಾತನಾಡಲು ಸಂಸ್ಕಾರ ಇರಬೇಕು. ಡಾ.ರಾಜ್ ನಿಧನರಾಗಿದ್ದಾಗ ಯಾರು‌ ಮುಖ್ಯಮಂತ್ರಿಯಾಗಿದ್ದರು? ಕೀಳುಮಟ್ಟದ ರಾಜಕೀಯಕ್ಕೆ ಅಂಬರೀಶ್ ಹೆಸರು ಬಳಸಿಕೊಳ್ಳಬಾರದು ಎಂದರು.

ಡೀಲಿಂಗ್ ಮಾಡೋದಕ್ಕೆ ಯಾರನ್ನು ನಾನು ಎಡ ಬಲ ಇಟ್ಟುಕೊಂಡಿಲ್ಲ, ಪಿಎಂಜಿಎಸ್ ವೈ ಅನುಷ್ಠಾನಗೊಳಿಸುವುದು ಸಂಸದರ ಕೆಲಸ, ಈ ಬಗ್ಗೆ ಪ್ರಶ್ನಿಸಿದರೆ ಭ್ರಷ್ಟಾಚಾರ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಉಲ್ಟಾ ಛೋರ್ ಕೊತ್ವಾಲ್ ಗೋ ಡಾಟೆ, ಕಳ್ಳನಾದವನು ಪೊಲೀಸರ ವಿರುದ್ಧವೇ ದೂರು ನೀಡುತ್ತಾನೆ ಎಂಬ ಮಾತಿದೆ. ನಾನು ಅಕ್ರಮ ಗಣಿಗಾರಿಕೆ, ಕೆಆರ್ ಎಸ್ ಅಣೆಕಟ್ಟಿಗೆ ಅಪಾಯ ಇರುವ ಬಗ್ಗೆ ಕಳವಳ ವ್ಯಕ್ತ

ಫೋನ್ ಟ್ಯಾಪಿಂಗ್ ಬಗ್ಗೆ ಸೂಕ್ತ ದಾಖಲೆಯಿದೆ. ಯಾವುದೇ ಒತ್ತಡಕ್ಕೆ ಒಳಗಾಗದೆ ತನಿಖೆ ನಡೆಸುತ್ತೇವೆ ಎಂದು ಪೊಲೀಸರ ಅಧಿಕಾರಗಳು ನನ್ನ ಬಳಿ ಹೇಳಿದ್ದಾರೆ. ಶ್ರೀಗಳ ಫೋನ್ ಟ್ಯಾಪ್ ಮಾಡಿದ್ದರು ಎಂದು ಸುಮಲತಾ ಹೇಳಿದರು.

2+2=4 ಆಗುತ್ತೆ 2+2 = 5 ಆಗಲ್ಲ, ಸುಳ್ಳು ಹೆಚ್ಚು ದಿನ ನಿಲ್ಲಲ್ಲ, ಜನಕ್ಕೆ ಯಾರು ಏನು ಎಂಬುದು ಗೊತ್ತಾಗುತ್ತದೆ. ಬೇನಾಮಿ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಈ ಬಗ್ಗೆ ಸಿಎಂ ಯಡಿಯೂರಪ್ಪರ ಬಳಿ ಮಾತನಾಡುವೆ ಎಂದು ಸುಮಲತಾ ಹೇಳಿದರು.

RELATED TOPICS:
English summary :Sumalatha Ambareesh

ಅಮೆಜಾನ್ ಗೋಡನ್ ಕಳ್ಳತನ: ₹10 ಲಕ್ಷ ಹಣವಿದ್ದ ಲಾಕರ್​ ಪತ್ತೆ ಹಚ್ಚಿದ ಡಾಗ್​ ಸ್ಕ್ವಾಡ್ | ಜನತಾ ನ್ಯೂ&#
ಅಮೆಜಾನ್ ಗೋಡನ್ ಕಳ್ಳತನ: ₹10 ಲಕ್ಷ ಹಣವಿದ್ದ ಲಾಕರ್​ ಪತ್ತೆ ಹಚ್ಚಿದ ಡಾಗ್​ ಸ್ಕ್ವಾಡ್ | ಜನತಾ ನ್ಯೂ&#
ಆಡುವ ವೇಳೆ ಗಣೇಶ ಮೂರ್ತಿಯನ್ನೇ ನುಂಗಿದ ಮೂರು ವರ್ಷದ ಮಗು! | ಜನತಾ ನ್ಯೂ&#
ಆಡುವ ವೇಳೆ ಗಣೇಶ ಮೂರ್ತಿಯನ್ನೇ ನುಂಗಿದ ಮೂರು ವರ್ಷದ ಮಗು! | ಜನತಾ ನ್ಯೂ&#
ಮನೆಯಲ್ಲಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಎಎಸ್​ಐ ಆತ್ಮಹತ್ಯೆಗೆ ಶರಣು! | ಜನತಾ ನ್ಯೂ&#
ಮನೆಯಲ್ಲಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಎಎಸ್​ಐ ಆತ್ಮಹತ್ಯೆಗೆ ಶರಣು! | ಜನತಾ ನ್ಯೂ&#
ಇರುವಕ್ಕಿ ನೂತನ ಕೃಷಿ ಮತ್ತು ತೋಟಗಾರಿಕಾ ವಿವಿಗೆ
ಇರುವಕ್ಕಿ ನೂತನ ಕೃಷಿ ಮತ್ತು ತೋಟಗಾರಿಕಾ ವಿವಿಗೆ "ಕೆಳದಿ ಶಿವಪ್ಪ ನಾಯಕ" ಹೆಸರು ಘೋಷಿಸಿದ ಬಿಎಸ್ ಯಡಿಯೂರಪ್ಪ | ಜನತಾ ನ್ಯೂ&#
ಯಡಿಯೂರಪ್ಪ ಬಳಿಕ ಮತ್ತೊಬ್ಬ ಭ್ರಷ್ಟ ಸಿಎಂ ಬರುತ್ತಾರೆ: ಸಿದ್ದರಾಮಯ್ಯ | ಜನತಾ ನ್ಯೂ&#
ಯಡಿಯೂರಪ್ಪ ಬಳಿಕ ಮತ್ತೊಬ್ಬ ಭ್ರಷ್ಟ ಸಿಎಂ ಬರುತ್ತಾರೆ: ಸಿದ್ದರಾಮಯ್ಯ | ಜನತಾ ನ್ಯೂ&#
ಕೇರಳದಲ್ಲಿ ಹೆಚ್ಚಿದ ಪ್ರಕರಣ, ಗಡಿ ಚೆಕ್ ಪೋಸ್ಟ್‌ಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದ ತಮಿಳುನಾಡು ಸರ್ಕಾರ | ಜನತಾ ನ್ಯೂ&#
ಕೇರಳದಲ್ಲಿ ಹೆಚ್ಚಿದ ಪ್ರಕರಣ, ಗಡಿ ಚೆಕ್ ಪೋಸ್ಟ್‌ಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದ ತಮಿಳುನಾಡು ಸರ್ಕಾರ | ಜನತಾ ನ್ಯೂ&#
Tokyo Olympics: ವೇಯ್ಟ್​​​ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು! | ಜನತಾ ನ್ಯೂ&#
Tokyo Olympics: ವೇಯ್ಟ್​​​ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು! | ಜನತಾ ನ್ಯೂ&#
ಗುರು ಪೂರ್ಣಿಮೆ 2021: ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ | ಜನತಾ ನ್ಯೂ&#
ಗುರು ಪೂರ್ಣಿಮೆ 2021: ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ | ಜನತಾ ನ್ಯೂ&#
ಪ್ರವಾಹ ಪರಿಸ್ಥಿತಿ ಅವಲೋಕನ: ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ‌ ಬೆಳಗಾವಿ ಪ್ರವಾಸ! | ಜನತಾ ನ್ಯೂ&#
ಪ್ರವಾಹ ಪರಿಸ್ಥಿತಿ ಅವಲೋಕನ: ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ‌ ಬೆಳಗಾವಿ ಪ್ರವಾಸ! | ಜನತಾ ನ್ಯೂ&#
ಬೈಕ್​ ಉಳಿಸಿಕೊಳ್ಳಲು ಹೋದ ಯುವಕ ತಾನೇ ಕೊಚ್ಚಿಹೋದ! | ಜನತಾ ನ್ಯೂ&#
ಬೈಕ್​ ಉಳಿಸಿಕೊಳ್ಳಲು ಹೋದ ಯುವಕ ತಾನೇ ಕೊಚ್ಚಿಹೋದ! | ಜನತಾ ನ್ಯೂ&#
ರಾಜ್ಯದಲ್ಲಿ ಇನ್ನೂ 3 ದಿನ ಮಳೆ:  9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್! | ಜನತಾ ನ್ಯೂ&#
ರಾಜ್ಯದಲ್ಲಿ ಇನ್ನೂ 3 ದಿನ ಮಳೆ: 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್! | ಜನತಾ ನ್ಯೂ&#
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಶವ ಪತ್ತೆ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ | ಜನತಾ ನ್ಯೂ&#
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಶವ ಪತ್ತೆ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ | ಜನತಾ ನ್ಯೂ&#

ನ್ಯೂಸ್ MORE NEWS...