ಸುಮಲತಾಗೆ ಯಾರೂ ಇಲ್ಲ ಅಂದ್ಕೋಬೇಡಿ, ಜೂ. ರೆಬೆಲ್ ಸ್ಟಾರ್ ಇದ್ದಾನೆ: ರಾಕ್‍ಲೈನ್ ವೆಂಕಟೇಶ್ | ಜನತಾ ನ್ಯೂಸ್
ಬೆಂಗಳೂರು : ಸುಮಲತಾಗೆ ಯಾರೂ ಇಲ್ಲ ಅಂದುಕೊಂಡಿದ್ದೀರಾ? ನನ್ನಂತ ಸಾವಿರಾರು ಜನ ಸುಮಲತಾ ಜೊತೆ ಇದ್ದಾರೆ. ಜೂನಿಯರ್ ರೆಬೆಲ್ ಸ್ಟಾರ್ ಇದ್ದಾನೆ ಎಂದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಕ್ ಲೈನ್ ವೆಂಕಟೇಶ್, ಹೆಚ್.ಡಿ.ಕುಮಾರಸ್ವಾಮಿ ಅವರು ಅಂಬರೀಶ್ ವಿಚಾರವಾಗಿ ಮಾತನಾಡುವಾಗ ಪ್ರಜ್ಞೆ ಇರಲಿ, ಭ್ರಷ್ಟಾಚಾರ ಅಂಆರೆ ಮತ್ತೊಂದು ಕಡೆ ಸ್ನೇಹಿತ ಅಂತಾರೆ. ಚಿತ್ರರಂಗದ ಬಗ್ಗೆ ಮಾತನಾಡುತ್ತೀರಾ ಅಲ್ವಾ? ಚಿತ್ರರಂಗದಿಂದ ನೀವೂ ಲಾಭ ಮಾಡಿಕೊಂಡಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಂಬರೀಶ್ ವಿಷಯ ಮಾತಾಡೋವಾಗ ಪ್ರಜ್ಞೆ ಇಟ್ಟುಕೊಂಡು ಮಾತನಾಡಿ. ಚಿತ್ರರಂಗ ನಿಮಗೇನು ಮೋಸ ಮಾಡಿದೆ. ಹೇಗೆ ಲಾಭ ಮಾಡಿಕೊಂಡಿದ್ದೀರಾ ಎಲ್ಲರಿಗೂ ಗೊತ್ತು. ಯಾಕೆ ಚಿತ್ರರಂಗಕ್ಕೆ ಬೈತೀರಾ. ನೀವು ಸಿಎಂ ಆಗಿದ್ದಾಗ ಚಿತ್ರರಂಗಕ್ಕೆ ಏನ್ ಮಾಡಿದ್ದೀರಾ.? ಅಂಬರೀಶ್ ಮೇಲೆ ಯಾಕೆ ಇಷ್ಟು ಆಪಾದನೆ ಮಾಡ್ತಿದ್ದೀರಾ. ಅವರು ಬದುಕಿದ್ದಾಗ ಮಾತಾಡಬೇಕಿತ್ತು. ಅವರು ಹೋದ ಮೇಲೆ ಯಾಕೆ ಇಂತಹ ಹೇಳಿಕೆ ಕೊಡುತ್ತಿದ್ದೀರಾ? ಇದು ನಮಗೆ ಬೇಜಾರು ತರುವ ವಿಷಯವಾಗಿದೆ ಎಂದು ಕಿಡಿಕಾರಿದ್ದಾರೆ.
ಮಂಡ್ಯಕ್ಕೆ ಅಂಬರೀಷ್ ಅವರ ದೇಹವನ್ನು ಸೇನಾ ಹೆಲಿಕಾಪ್ಟರ್ನಲ್ಲಿ ತೆಗೆದುಕೊಂಡು ಹೋಗಲು ಮುಖ್ಯಮಂತ್ರಿಯಾಗಿ ನಾನೇ ಸಹಾಯ ಮಾಡಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭಿಷೇಕ್ ಒತ್ತಾಯ ಮಾಡಿ ತಮ್ಮ ತಂದೆ ಅಂಬರೀಷ್ರ ಮೃತದೇಹವನ್ನ ತಾಯ್ನೆಲ ಮಂಡ್ಯಕ್ಕೆ ಕೊಂಡೊಯ್ಯಲು ಹೇಳಿದ್ರು. ಅಂಥದ್ದರಲ್ಲಿ ಸಾವಿನ ರಾಜಕಾರಣ ಯಾಕೆ ಮಾಡಲು ಹೋಗ್ತಿದ್ದೀರಾ..? ದಾರಿಯಲ್ಲಿ ಹೋಗ್ತಿದ್ದ ದಾಸಪ್ಪ ಸಿಎಂ ಆಗಿದ್ದರೂ ಆ ಕೆಲಸ ಮಾಡ್ತಿದ್ರು. ನೀವು ಮಾತನಾಡಿದ್ದು ತುಂಬಾ ನೋವಾಗುತ್ತೆ ಕುಮಾರಣ್ಣ. ಅಂಬಿ ಕುಟುಂಬಕ್ಕೆ ನಾನು ಎಷ್ಟು ಆಪ್ತ ಅನ್ನೋದು ನಿಮಗೂ ಗೊತ್ತು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜಕೀಯದ ವಿಚಾರದಲ್ಲಿ ನಾನು ಏನೂ ಮಾತಾಡೋದಿಲ್ಲ. ಆದ್ರೆ, ಅಂಬರೀಶ್ ಅಂದ್ರೆ ನಮಗೆ ಪ್ರಾಣ. ಹೀಗಿರುವಾಗ ಒಂದು ಕಡೆ ಅಂಬಿ ಅವರನ್ನು ಕುಮಾರಸ್ವಾಮಿ ಬೈತಾರೆ, ಮತ್ತೊಂದು ಕಡೆ ಹೊಗಳುತ್ತಾರೆ. ಈ ತರಹ ಮಾತಾಡೋಕೆ ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ರಾಕ್‌ಲೈನ್ ಪ್ರಶ್ನಿಸಿದರು.