ಬೆಂಗಳೂರಿನಲ್ಲಿ 2 ಸಾವಿರ ಮನೆಗಳ ಮೇಲೆ ದಾಳಿ, 1500 ರೌಡಿಗಳು ವಶಕ್ಕೆ. | ಜನತಾ ನ್ಯೂಸ್
ಬೆಂಗಳೂರು : ನಗರದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಸಿಸಿಬಿ ಪೊಲೀಸರು ದಾಳಿ ಮಾಡಿ, ರೌಡಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಅಲ್ಲದೇ ಅವರಿಂದ ಮಾರಕಾಸ್ತ್ರ ಸೇರಿದಂತೆ ಜಮೀನಿನ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಗೂಂಡಾ ಆಯಕ್ಟ್ ಅಡಿಯಲ್ಲಿ 31 ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿರುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರು ಬೆಳ್ಳಂಬೆಳಗ್ಗೆ 2 ಸಾವಿರ ಮನೆಗಳ ಮೇಲೆ ದಾಳಿ ನಡೆಸಿದ್ದು, 1500 ರೌಡಿಗಳನ್ನು ವಶಕ್ಕೆ ಪಡೆದಿದ್ದಾರೆ. ಕಾನೂನುಸುವ್ಯವಸ್ಥೆ ನಿಟ್ಟಿನಲ್ಲಿ ವಿಶೇಷ ಅಭಿಯಾನ ಅಂಗವಾಗಿ ಬೆಂಗಳೂರಿನ ಪೊಲೀಸರು ಈ ದಾಳಿ ಕೈಗೊಂಡಿದ್ದಾರೆ.
ರಾಜಧಾನಿಯ ಎಲ್ಲ ಡಿಸಿಪಿಗಳ ನೇತೃತ್ವದಲ್ಲಿ ಮಹಾನಗರದಾದ್ಯಂತ ಬೆಳಗಿನ ಜಾವವೇ ಈ ದಾಳಿಯನ್ನು ನಡೆಸಿದ್ದು, ರೌಡಿ ಶೀಟರ್ಗಳಿಗೆ ಸಂಬಂಧಿಸಿದ 2000 ಮನೆಗಳ ಮೇಲೆ ಏಕಾಏಕಿ ದಾಳಿ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ 1,500 ರೌಡಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.
ಇಂದು ಬೆಂಗಳೂರಿನ ಬೆಂಗಳೂರು ಸಿಟಿ ಹಾಗೂ ಸೆಂಟ್ರಲ್ ಜೈಲ್ ಮೇಲೆ ರೌಡಿ ಚಟುವಟಿಕೆಗಳ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ. 1,548 ರೌಡಿಗಳನ್ನು ಠಾಣೆಗೆ ಕರೆಸಿ, ರೌಡಿ ಚಟುವಟಿಕೆಗಳಿಂದ ದೂರ ಇರುವಂತೆ ವಾರ್ನಿಂಗ್ ಮಾಡಲಾಗಿದೆ ಎಂದರು.
ಇಂದಿನ ದಾಳಿಯಲ್ಲಿ 91 ಲಾಂಗ್, ಮಚ್ಚು, ಮಾರಕಾಸ್ತ್ರ, ಡ್ರಗ್ಸ್ ಹಾಗೂ ಜಮೀನಿನ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಜಮೀನಿನ ದಾಖಲೆಗಳನ್ನು ಯಾಕೆ ಇಟ್ಟುಕೊಂಡಿದ್ದಾಗಿಯೂ ರೌಡಿಗಳನ್ನು ಪ್ರಶ್ನಿಸಲಾಗಿದೆ. ಮಾರಕಾಸ್ತ್ರಗಳನ್ನು ಇಟ್ಟುಕೊಂಡು ರೌಡಿ ಚಟುವಟಿಕೆಗಳಿಗೆ ಮುಂದಾಗಿದ್ದಂತ 48 ಜನರನ್ನು ಬಂಧಿಸಲಾಗಿದೆ ಎಂದರು.
ಇವೆಲ್ಲದರ ಸಂಬಂಧ ವಿಸ್ತೃತ ವಿಚಾರಣೆ ನಡೆಯಲಿದ್ದು, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಕಂಡುಬಂದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ತಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ. ಮಾತ್ರವಲ್ಲ ಬೆಂಗಳೂರು ಪೊಲೀಸರ ವ್ಯವಸ್ಥಿತವಾದ ಈ ಮಹಾ ಕಾರ್ಯಾಚರಣೆಗೆ ಮೆಚ್ಚುಗೆಯನ್ನೂ ಸೂಚಿಸಿದ್ದಾರೆ.
In an early morning special drive, @BlrCityPolice teams led by the jurisdictional DCPs have conducted raids on the homes of rowdies and history-sheeters across the city. The police raided more than 2,000 houses and 1,500 rowdy-sheeters have been detained for questioning. (1/3)
— Kamal Pant, IPS (@CPBlr) July 10, 2021