ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ: ಮೂವರ ವಿರುದ್ಧ ಎಫ್‍ಐಆರ್ | ಜನತಾ ನ್ಯೂಸ್

11 Jul 2021
389

ಬೆಂಗಳೂರು : ನಟ ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ದರ್ಶನ್ ಬಳಿ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ಬಂದಿದ್ದ ಮಹಿಳೆ ಸೇರಿದಂತೆ ಇನ್ನಿಬ್ಬರ ಹೆಸರು ಎಫ್‍ಐಆರ್ ನಲ್ಲಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ನಕಲಿ ಬ್ಯಾಂಕ್​ ಸಿಬ್ಬಂದಿ ಅರುಣಾ ಎನ್ನುವವರು ದರ್ಶನ್​ ಬಳಿ ತೆರಳಿದ್ದರು. ನಿಮ್ಮ​ ಹೆಸರಿನಲ್ಲಿ ಲೋನ್​ಗೆ ಸ್ನೇಹಿತರು ಅರ್ಜಿ ಹಾಕಿದ್ದಾರೆ ಎಂದು ಮಹಿಳೆ ಹೇಳಿದ್ದರು. ನಾನು ಬ್ಯಾಂಕ್ ಮ್ಯಾನೇಜರ್ ಎಂದೇ ಆಕೆ ಪರಿಚಯಿಸಿಕೊಂಡಿದ್ದರು. "ನಿಮ್ಮ ಸ್ನೇಹಿತರಿಂದ ನಿಮ್ಮ ಶ್ಯೂರಿಟಿಯಲ್ಲಿ ಸಾಲಕ್ಕೆ ಅರ್ಜಿ ಹಾಕಿದ್ದಾರೆ. ₹25 ಕೋಟಿ ಲೋನ್‌ಗೆ ಬೇಡಿಕೆ ಇಟ್ಟಿದ್ದಾರೆ" ಎಂದು ಅರುಣಾ ಹೆಳಿದ್ದರು. ಈ ಬಗ್ಗೆ ಪರಿಶೀಲಿಸಿದಾಗ ಲೋನ್‌ಗೆ ಯಾರು ಅರ್ಜಿ ಸಲ್ಲಿಸಿಲ್ಲ ಎಂಬುದು ಗೊತ್ತಾಗಿದೆ.

ಎರಡು ದಿನದ ಹಿಂದೆ ನಟ ದರ್ಶನ್ ಸ್ನೇಹಿತರು ಈ ಬಗ್ಗೆ ಮೈಸೂರಿನ ಹೆಬ್ಬಾಳ ಠಾಣೆಗೆ ದೂರು ನೀಡಿದ್ದಾರೆ. ನಟ ದರ್ಶನ್​ ಸ್ನೇಹಿತರ ದೂರನ್ನು ಆಧರಿಸಿ ಮಹಿಳೆ ವಶಕ್ಕೆ ಪಡೆಯಲಾಗಿದೆ.

ಲೋನ್ ಕೊಡಿಸುತ್ತೇನೆ ಎಂದು ಹೇಳಿದ ಮಹಿಳೆ ನನಗೆ ಪರಿಚಯವೇ ಇರಲಿಲ್ಲ ಎಂದು "ರಾಬರ್ಟ್" ಚಿತ್ರ ನಿರ್ಮಾಪಕ ಉಮಾಪತಿ ಸ್ಪಷ್ಟನೆ ನೀಡಿದ್ದಾರೆ. ಒಂದು ತಿಂಗಳ ಹಿಂದೆ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯ ಮಾಡಿಕೊಂಡಿದ್ದ ಮಹಿಳೆ, ಬ್ಯಾಂಕ್ ಸಾಲ ಕೊಡಿಸುತ್ತೇನೆ ಎಂದು ಹೇಳಿದ್ದಾರೆ. ಲೋನ್ ತೆಗೆದುಕೊಳ್ಳುತ್ತಿದ್ದೀರಾ?, ಯಾರಿಗಾದರೂ ಶ್ಯೂರಿಟಿ ಹಾಕಿದ್ದೀರಾ? ಅಂತಾ ಕೇಳಿದ್ರು. ನನಗೆ ಅನುಮಾನ ಬಂದು‌ ಕಳೆದ ತಿಂಗಳು ನನ್ನ ಕಚೇರಿ ವ್ಯಾಪ್ತಿಯಲ್ಲಿರುವ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿ ಎನ್.ಸಿ.ಆರ್ ಪಡೆದಿದ್ದೇನೆ ಎಂದರು.

ದರ್ಶನ್, ಹರ್ಷ ಹಾಗೂ ನನ್ನ ಸಹಿಗಳು ನಕಲಿಯಾಗಿವೆ. ಆಸ್ತಿ ಪತ್ರಗಳು ನಕಲಿಯಾಗಿವೆ ಎಂಬ ಮಾಹಿತಿ ಸಿಕ್ಕಿದ್ದರಿಂದ ಮೈಸೂರಿನಲ್ಲಿ ದೂರು ಕೊಟ್ಟಿದ್ದೇನೆ. ಈ ವಿಚಾರವನ್ನು ಆರಂಭದಲ್ಲೇ ದರ್ಶನ್ ಅವರ ಗಮನಕ್ಕೂ ತಂದಿದ್ದೆ. ಮೈಸೂರು ಅಸ್ತಿ‌ ಪತ್ರಗಳು ನಕಲಿ ಆಗಿದ್ದರಿಂದ ಇಲ್ಲಿ‌ ದೂರು ಕೊಟ್ಟರೆ ಒಳ್ಳೆಯದು ಅಂತಾ ದರ್ಶನ್ ಅವರೇ ಸಲಹೆ ಕೊಟ್ಟರು.

ಅದರಂತೆ ಪೊಲೀಸರು ಇಂದು ವಿಚಾರಣೆಗೆ ಕರೆದಿದ್ದರು. ಹಾಗಾಗಿ ವಿಚಾರಣೆಗೆ ಹಾಜರಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಅರುಣಾ ಕುಮಾರಿ ಎಂಬ ಮಹಿಳೆ ನನಗೆ ಮುಂಚೆಯಿಂದ ಪರಿಚಯ ಇರಲಿಲ್ಲ. ಆಕೆ ಬಗ್ಗೆ ನನಗೆ ಅನುಮಾನ ಬಂದಿದ್ದರಿಂದಲೇ ತಕ್ಷಣ ಪೊಲೀಸರಿಗೆ ದೂರು ನೀಡಿದ್ದೇನೆ. ಹೀಗಿರುವಾಗ ಆಕೆಯನ್ನು ದರ್ಶನ್ ಅವರಿಗೆ ಪರಿಚಯ ಮಾಡಿಸಲು ಸಾಧ್ಯವೇ?. ಈ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಅನ್ನೋದನ್ನ ಪೊಲೀಸರೇ ಪತ್ತೆ ಹಚ್ಚಬೇಕು. ಸತ್ಯ ಹೊರಬರಬೇಕಿದೆ ಎಂದು ಉಮಾಪತಿ ತಿಳಿಸಿದರು.

RELATED TOPICS:
English summary :Darshan

ಒಲಂಪಿಕ್ಸ್ : 49 ವರ್ಷಗಳ ನಂತರ ಪುರುಷರ ಹಾಕಿ ಸೆಮಿಫೈನಲ್ ತಲುಪಿದ ಭಾರತೀಯ ತಂಡ | ಜನತಾ ನ್ಯೂ&#
ಒಲಂಪಿಕ್ಸ್ : 49 ವರ್ಷಗಳ ನಂತರ ಪುರುಷರ ಹಾಕಿ ಸೆಮಿಫೈನಲ್ ತಲುಪಿದ ಭಾರತೀಯ ತಂಡ | ಜನತಾ ನ್ಯೂ&#
ಒಲಂಪಿಕ್ಸ್ : ಕಂಚು ಗೆದ್ದ ಪಿ.ವಿ.ಸಿಂಧು, 2 ಪದಕ ಗೆದ್ದ ಪ್ರಥಮ ಭಾರತೀಯ ಮಹಿಳೆ | ಜನತಾ ನ್ಯೂ&#
ಒಲಂಪಿಕ್ಸ್ : ಕಂಚು ಗೆದ್ದ ಪಿ.ವಿ.ಸಿಂಧು, 2 ಪದಕ ಗೆದ್ದ ಪ್ರಥಮ ಭಾರತೀಯ ಮಹಿಳೆ | ಜನತಾ ನ್ಯೂ&#
ವಿಹಾರಕ್ಕೆ ಬಂದಿದ್ದ ಸ್ನೇಹಿತರ ತಂಡ, ಯುವತಿಯೋರ್ವಳು ನೀರುಪಾಲು, ಮೂವರ ರಕ್ಷಣೆ | ಜನತಾ ನ್ಯೂ&#
ವಿಹಾರಕ್ಕೆ ಬಂದಿದ್ದ ಸ್ನೇಹಿತರ ತಂಡ, ಯುವತಿಯೋರ್ವಳು ನೀರುಪಾಲು, ಮೂವರ ರಕ್ಷಣೆ | ಜನತಾ ನ್ಯೂ&#
ರಾಜಕೀಯ ಮುಖ್ಯವಲ್ಲ, ಜನರ ಹಿತವೇ ನನಗೆ ಮುಖ್ಯ: ಎಂ.ಪಿ.ರೇಣುಕಾಚಾರ್ಯ | ಜನತಾ ನ್ಯೂ&#
ರಾಜಕೀಯ ಮುಖ್ಯವಲ್ಲ, ಜನರ ಹಿತವೇ ನನಗೆ ಮುಖ್ಯ: ಎಂ.ಪಿ.ರೇಣುಕಾಚಾರ್ಯ | ಜನತಾ ನ್ಯೂ&#
ಪ್ರವಾಹ: ರಾಜ್ಯ ಸರ್ಕಾರದಿಂದ 510 ಕೋಟಿ ರೂ. ಬಿಡುಗಡೆ, ಸಿಎಂ ಬೊಮ್ಮಾಯಿ ಘೋ‍ಷಣೆ | ಜನತಾ ನ್ಯೂ&#
ಪ್ರವಾಹ: ರಾಜ್ಯ ಸರ್ಕಾರದಿಂದ 510 ಕೋಟಿ ರೂ. ಬಿಡುಗಡೆ, ಸಿಎಂ ಬೊಮ್ಮಾಯಿ ಘೋ‍ಷಣೆ | ಜನತಾ ನ್ಯೂ&#
ವಿದ್ಯಾರ್ಥಿನಿಯರಿಗೆ ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ ಆರೋಪ! | ಜನತಾ ನ್ಯೂ&#
ವಿದ್ಯಾರ್ಥಿನಿಯರಿಗೆ ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ ಆರೋಪ! | ಜನತಾ ನ್ಯೂ&#
ಮುಖ್ಯಮಂತ್ರಿ ಆಗಬೇಕೆಂದು ಗಡ್ಡಬಿಟ್ಟಿದ್ದಲ್ಲ: ಸಿ.ಟಿ.ರವಿ | ಜನತಾ ನ್ಯೂ&#
ಮುಖ್ಯಮಂತ್ರಿ ಆಗಬೇಕೆಂದು ಗಡ್ಡಬಿಟ್ಟಿದ್ದಲ್ಲ: ಸಿ.ಟಿ.ರವಿ | ಜನತಾ ನ್ಯೂ&#
2022ರ ಮಾರ್ಚ್​ನಲ್ಲಿ
2022ರ ಮಾರ್ಚ್​ನಲ್ಲಿ "ಗಡ್ಡಧಾರಿ ವ್ಯಕ್ತಿ" ರಾಜ್ಯದ ಸಿಎಂ ಆಗ್ತಾರೆ: ಕುತೂಹಲ ಮೂಡಿಸಿದ ಭವಿಷ್ಯವಾಣಿ | ಜನತಾ ನ್ಯೂ&#
ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಷ್ಟಕಾಲ ಬಂದ್ರೆ ನನ್ನ ಸಪೋರ್ಟ್ ಇದೆ : ಹೆಚ್​​ಡಿಡಿ | ಜನತಾ ನ್ಯೂ&#
ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಷ್ಟಕಾಲ ಬಂದ್ರೆ ನನ್ನ ಸಪೋರ್ಟ್ ಇದೆ : ಹೆಚ್​​ಡಿಡಿ | ಜನತಾ ನ್ಯೂ&#
ಬೊಮ್ಮಾಯಿಗೆ ಹೈಕಮಾಂಡ್ ದಿಢೀರ್ ಬುಲಾವ್: ಮತ್ತೆ ದೆಹಲಿಗೆ ತೆರಳಿದ ಸಿಎಂ ಬೊಮ್ಮಾಯಿ | ಜನತಾ ನ್ಯೂ&#
ಬೊಮ್ಮಾಯಿಗೆ ಹೈಕಮಾಂಡ್ ದಿಢೀರ್ ಬುಲಾವ್: ಮತ್ತೆ ದೆಹಲಿಗೆ ತೆರಳಿದ ಸಿಎಂ ಬೊಮ್ಮಾಯಿ | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 37 ಸಾವು, 1,987 ಹೊಸ ಪ್ರಕರಣ : ಬೆಂಗಳೂರಿನಲ್ಲಿ 450 | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 37 ಸಾವು, 1,987 ಹೊಸ ಪ್ರಕರಣ : ಬೆಂಗಳೂರಿನಲ್ಲಿ 450 | ಜನತಾ ನ್ಯೂ&#
ಕೋವಿಡ್ 3ನೇ ಅಲೆ: ಗಡಿಗಳಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ! | ಜನತಾ ನ್
ಕೋವಿಡ್ 3ನೇ ಅಲೆ: ಗಡಿಗಳಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ! | ಜನತಾ ನ್

ನ್ಯೂಸ್ MORE NEWS...