july24-20.jpeg

ಕೆಲವರು ನಮ್ಮ ಧರ್ಮ ಅಂತಾರೆ, ನಿಮ್ಮ ಧರ್ಮ ನೀವು ಇಟ್ಕೊಳ್ಳಿ, ಬೇರೆ ಧರ್ಮ ವಿರೋಧ ಮಾಡಬೇಡಿ | ಜನತಾ ನ್ಯೂಸ್

13 Jul 2021
335

ಬಾಗಲಕೋಟೆ : ಓದಿದವರು ಜಾತಿಗಳ ಬಗ್ಗೆ ಮಾತನಾಡಬಾರದುಸಮಾಜದಲ್ಲಿ ಜಾತಿ ವ್ಯವಸ್ಥೆ ಇದೆ. ಓದಿದವರು ಹಳ್ಳಿಯಲ್ಲಿ ಹೋಗಿ ಜಾತಿ ಮಾಡ್ತಾರೆ. ದಯವಿಟ್ಟು ಓದಿದವರು ಜಾತಿ ಮಾಡಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೀತಿಪಾಠ ಮಾಡಿದರು.

ಕೆಲವರು ನಮ್ಮ ಧರ್ಮ ನಮ್ಮ ಧರ್ಮ ಅಂತಾರೆ, ನಿಮ್ಮ ಧರ್ಮ ನೀವು ಇಟ್ಕೊಳ್ಳಿ ಆದ್ರೆ ಬೇರೆ ಧರ್ಮ ವಿರೋಧ ಮಾಡಬೇಡಿ ಎಂದು ಪರೋಕ್ಷವಾಗಿ ಹಿಂದೂ ಪರ ಸಂಘಟನೆಗಳು ಮತ್ತು ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಬಾದಾಮಿ ಕ್ಷೇತ್ರ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಸರ್ಕಾರಿ ಪ್ರಥಮ ದರ್ಜೆ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಿದರು.

ಬಾದಾಮಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಕ್ಕಳಿಗೆ ಟ್ಯಾಬ್ ವಿತರಿಸಿ ಮಾತನಾಡಿದ ಅವರು, ನೀವೆಲ್ಲ ಪದವಿ ಶಿಕ್ಷಣ ಪಡೆಯುತ್ತಿದ್ದೀರಿ ಮೊದಲು ಮನುಷ್ಯತ್ವ ಬೆಳೆಸಿಕೊಳ್ಳಿ. ಕೆರೂರನಲ್ಲಿ ಇಲ್ಲಿಯವರೆಗೆ ಪ್ರಥಮ ದರ್ಜೆ ಕಾಲೇಜ್ ಗೆ ಹೊಸ ಕಟ್ಟಡ ಇರಲಿಲ್ಲ. ಜಾಗ ಇಲ್ಲದ ಕಾರಣ ಕಟ್ಟಡ ಇರಲಿಲ್ಲ. ಕೆಐಎಡಿಬಿ ಇಂದ 29 ಎಕರೆ ಜಾಗ ಕೊಡಿಸಿದ್ದೀನಿ. ಅದು ಕೋರ್ಟ್‍ಗೆ ಹೋಗಿತ್ತು, ನಾನು ಹೈ ಕೋರ್ಟ್ ಗೆ ಹೋಗಿ ನಂತರ ಆ ಜಾಗ ಕೆಐಎಡಿಬಿಗೆ ಬಂತು. ನಾನು ಕೆಐಎಡಿಬಿಯಿಂದ ಕಾಲೇಜ್ ಗೆ 29 ಎಕರೆ ಜಾಗ ಕೊಡಿಸಿದ್ದೀನಿ, ದುಡ್ಡು ಕೊಡಿಸಿದ್ದೀನಿ. ನಾಳೆಯಿಂದಲೇ ಸರ್ಕಾರಿ ಪ್ರಥಮದರ್ಜೆ ಕಾಲೇಜ್ ಕಟ್ಟಡ ಕಾಮಗಾರಿ ಆರಂಭವಾಗುತ್ತೆ ಎಂದರು.

ನಮ್ಮ ಜಾತಿ ನಮ್ಮ ಜಾತಿ ಅಂತ ಓದಿಕೊಂಡು ಹೋದವರೇ ಹಳ್ಳಿಯಲ್ಲಿ ಜಾತಿ ಮಾಡೋದು. ಬಸವಣ್ಣನವರ ವಚನ ಈಗ ಹೇಳೋ ಬದನೆಕಾಯಿ ಆಗಿಬಿಟ್ಟಿದೆ. ಇವನಾರವ ಇವನಾರವ ಅನ್ನೋದು. ಇವ ನಮ್ಮವ ಇವ ನಮ್ಮವ ಅನ್ರಪ್ಪ ಅಂದ್ರೆ, ನೀನು ಯಾವ ಜಾತಿಯವನಯ್ಯ ಯಾವ ಜಾತಿಯಲ್ಲಿ ಹುಟ್ಟಿದಿಯಪ್ಪ ಅನ್ನೋದು ಇದೆ.

ಇದು ಹೋಗಬೇಕು ಬಸವಣ್ಣನವರು ಎಂಟು ನೂರು ವರ್ಷಗಳ ಹಿಂದೆ ಹೇಳಿದ್ದಾರೆ. ಇವನಾರು ಇವನಾರು ಅಂತ ಕೇಳಬೇಡಯ್ಯ, ಇವರೆಲ್ಲ ನಮ್ಮವರು ನಮ್ಮವರು ಅಂತ ಅನ್ರಯ್ಯ ಅಂತ ಹೇಳಿದ್ದಾರೆ. ಶಿಕ್ಷಣ ಪಡೆಯೋದು ನಮ್ಮ ಜಾತಿಯವರು ಅನ್ನೋದಕ್ಕಾ?

ಮೌಢ್ಯಗಳು ಇರಬಾರದು, ಕಂದಾಚಾರ ಇರಬಾರದು ನಮ್ಮ ಸರ್ಕಾರದಲ್ಲಿ ಮೌಢ್ಯ ನಿಷೇಧ ತಂದಿದ್ವಿ. ಕೆಲವರು ಯಾಕಯ್ಯಾ ಬಟ್ಟೆ ಹರ್ದೋಗಿದೆ, ಚಡ್ಡಿ ಹರ್ದೋಗಿದೆ ಅಂದ್ರೆ ನಮ್ಮ ಹಣೆ ಬರಹ ಅಂತಾರೆ. ಒಂದು ವೇಳೆ ಹಣೆಯಲ್ಲಿ ಬರೆದಿದ್ದರೆ ದೇವರು ಚಡ್ಡಿ ಹಾಕೋಬೇಡ ಅಂತ ಬರೆದಿರುತ್ತಾನಾ. ಹಾಗೆ ಬರೆದರೆ ಅವನೆಂತ ದೇವರು? ಚಡ್ಡಿ ಇಲ್ದೆ, ಊಟ ಇಲ್ದೆ ಬದುಕು ಅಂದ್ರೆ ಅವನು ದೇವ್ರೇ ಅಲ್ಲ.

ಎಲ್ಲರಿಗೂ ರಕ್ಷಣೆ ಕೊಡೋನು ದೇವರು. ಎಲ್ಲರನ್ನೂ ಸಮಾನವಾಗಿ ಕಾಣುವವನು ದೇವರು. ಒಬ್ಬರಿಗೆ ಚಡ್ಡಿ ಇಲ್ಲ, ಒಬ್ಬರಿಗೆ ಅಂಗಿ ಇಲ್ಲ, ಒಬ್ಬರಿಗೆ ದೋತಿ ಇಲ್ಲ. ಇನ್ನ ಕೆಲವರಿಗೆ ಸೂಟ್ ಹಾಕೊಂಡಿರು ಅಂತ ಹಣೆ ಬರೆದಿದ್ದಾರೆ ದೇವರು? ಇದು ಮೂಢನಂಬಿಕೆ ಕಂದಾಚಾರ ಎಂದು ಮೌಢ್ಯ ಆಚರಣೆ ಕುರಿತು ಬೋಧನೆ ಮಾಡಿದರು.

logo
RELATED TOPICS:
English summary :Siddaramaiah

ಕೋವಿಡ್-19 ನಿಂದ ರಾಜ್ಯಾದ್ಯಂತ 22 ಸಾವು, 1,001 ಹೊಸ ಪ್ರಕರಣ : ಬೆಂಗಳೂರಿನಲ್ಲಿ 165 | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 22 ಸಾವು, 1,001 ಹೊಸ ಪ್ರಕರಣ : ಬೆಂಗಳೂರಿನಲ್ಲಿ 165 | ಜನತಾ ನ್ಯೂ&#
ಹಿಮಾಚಲ ಪ್ರದೇಶದಲ್ಲಿ ಬಂಡೆಗಳೊಂದಿಗೆ ಭೂಕುಸಿತ : 9 ಪ್ರವಾಸಿಗಳ ಸಾವು, ಹಲವರಿಗೆ ಗಾಯ | ಜನತಾ ನ್ಯೂ&#
ಹಿಮಾಚಲ ಪ್ರದೇಶದಲ್ಲಿ ಬಂಡೆಗಳೊಂದಿಗೆ ಭೂಕುಸಿತ : 9 ಪ್ರವಾಸಿಗಳ ಸಾವು, ಹಲವರಿಗೆ ಗಾಯ | ಜನತಾ ನ್ಯೂ&#
ಮೂರು ತಿಂಗಳಲ್ಲಿ 6 ಕೋಟಿ ಜನರಿಗೆ ಕೋವಿಡ್ ಲಸಿಕೆ: ಡಾ.ಕೆ.ಸುಧಾಕರ್  | ಜನತಾ ನ್ಯೂ&#
ಮೂರು ತಿಂಗಳಲ್ಲಿ 6 ಕೋಟಿ ಜನರಿಗೆ ಕೋವಿಡ್ ಲಸಿಕೆ: ಡಾ.ಕೆ.ಸುಧಾಕರ್ | ಜನತಾ ನ್ಯೂ&#
ಬಾಕಿ ಪರಿಹಾರ ಬಿಡುಗಡೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ | ಜನತಾ ನ್ಯೂ&#
ಬಾಕಿ ಪರಿಹಾರ ಬಿಡುಗಡೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ | ಜನತಾ ನ್ಯೂ&#
ಬೆಳಗಾವಿ ಜಿಲ್ಲೆಯಲ್ಲಿ 1,240 ಮನೆಗಳಿಗೆ ಹಾನಿ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ | ಜನತಾ ನ್ಯೂ&#
ಬೆಳಗಾವಿ ಜಿಲ್ಲೆಯಲ್ಲಿ 1,240 ಮನೆಗಳಿಗೆ ಹಾನಿ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ | ಜನತಾ ನ್ಯೂ&#
ರಾಜ್ಯದಲ್ಲಿ ಭಾರೀ ಮಳೆ: ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಹದಿಂದ 81 ಗ್ರಾಮಗಳಿಗೆ ಹಾನಿ | ಜನತಾ ನ್ಯೂ&#
ರಾಜ್ಯದಲ್ಲಿ ಭಾರೀ ಮಳೆ: ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಹದಿಂದ 81 ಗ್ರಾಮಗಳಿಗೆ ಹಾನಿ | ಜನತಾ ನ್ಯೂ&#
ನಾಯಕತ್ವ ಬದಲಾವಣೆ ವಿಚಾರ ಕೇವಲ ಊಹಾಪೋಹವಷ್ಟೆ : ಬೊಮ್ಮಾಯಿ | ಜನತಾ ನ್ಯೂ&#
ನಾಯಕತ್ವ ಬದಲಾವಣೆ ವಿಚಾರ ಕೇವಲ ಊಹಾಪೋಹವಷ್ಟೆ : ಬೊಮ್ಮಾಯಿ | ಜನತಾ ನ್ಯೂ&#
ಮಾಸ್ಕ್ ಇಲ್ಲದೆ ಸೈಕಲ್ ತುಳಿದ ಸಂಸದ ತೇಜಸ್ವಿ ಸೂರ್ಯ: ಸಾಮಾಜಿಕ ಜಾಲತಾಣದಲ್ಲಿ ಜನರ ಪ್ರಶ್ನೆ | ಜನತಾ ನ್ಯೂ&#
ಮಾಸ್ಕ್ ಇಲ್ಲದೆ ಸೈಕಲ್ ತುಳಿದ ಸಂಸದ ತೇಜಸ್ವಿ ಸೂರ್ಯ: ಸಾಮಾಜಿಕ ಜಾಲತಾಣದಲ್ಲಿ ಜನರ ಪ್ರಶ್ನೆ | ಜನತಾ ನ್ಯೂ&#
ಹೈ ಕಮಾಂಡ್‍ನಿಂದ ಇನ್ನೂ ಸಂದೇಶ ಬಂದಿಲ್ಲ: ಸಿಎಂ ಯಡಿಯೂರಪ್ಪ | ಜನತಾ ನ್ಯೂ&#
ಹೈ ಕಮಾಂಡ್‍ನಿಂದ ಇನ್ನೂ ಸಂದೇಶ ಬಂದಿಲ್ಲ: ಸಿಎಂ ಯಡಿಯೂರಪ್ಪ | ಜನತಾ ನ್ಯೂ&#
ನಾನು ರಾಜಕಾರಣದಲ್ಲಿ ಖುಷಿ ಕಂಡವ ಅಲ್ಲ; ರಾಜಕೀಯಕ್ಕೆ ಬರುವ ಇಚ್ಛೆ ಇರಲಿಲ್ಲ: ಕಟೀಲ್ | ಜನತಾ ನ್ಯೂ&#
ನಾನು ರಾಜಕಾರಣದಲ್ಲಿ ಖುಷಿ ಕಂಡವ ಅಲ್ಲ; ರಾಜಕೀಯಕ್ಕೆ ಬರುವ ಇಚ್ಛೆ ಇರಲಿಲ್ಲ: ಕಟೀಲ್ | ಜನತಾ ನ್ಯೂ&#
ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ: ಕೋಟ ಶ್ರೀನಿವಾಸ ಪೂಜಾರಿ | ಜನತಾ ನ್ಯೂ&#
ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ: ಕೋಟ ಶ್ರೀನಿವಾಸ ಪೂಜಾರಿ | ಜನತಾ ನ್ಯೂ&#
ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗೋಣ ಬನ್ನಿ: ಬಿಜೆಪಿಗೆ ಡಿ.ಕೆ. ಶಿವಕುಮಾರ್ ಸವಾಲು | ಜನತಾ ನ್ಯೂ&#
ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗೋಣ ಬನ್ನಿ: ಬಿಜೆಪಿಗೆ ಡಿ.ಕೆ. ಶಿವಕುಮಾರ್ ಸವಾಲು | ಜನತಾ ನ್ಯೂ&#
ಟ್ರ್ಯಾಕ್ಟರ್ ನಲ್ಲಿ ಬಂದು ಪಾಲಿಕೆ ಆಯುಕ್ತರ ಮನೆ ಮುಂದೆ ಕಸ ಸುರಿದ ಬಿಜೆಪಿ ಶಾಸಕ! | ಜನತಾ ನ್ಯೂ&#
ಟ್ರ್ಯಾಕ್ಟರ್ ನಲ್ಲಿ ಬಂದು ಪಾಲಿಕೆ ಆಯುಕ್ತರ ಮನೆ ಮುಂದೆ ಕಸ ಸುರಿದ ಬಿಜೆಪಿ ಶಾಸಕ! | ಜನತಾ ನ್ಯೂ&#
ಟೋಕಿಯೊ ಒಲಿಂಪಿಕ್ಸ್: ಪ್ರಿ ಕ್ವಾರ್ಟರ್ ಫೈನಲ್ ತಲುಪಿದ ಮೇರಿ ಕೋಮ್ | ಜನತಾ ನ್ಯೂ&#
ಟೋಕಿಯೊ ಒಲಿಂಪಿಕ್ಸ್: ಪ್ರಿ ಕ್ವಾರ್ಟರ್ ಫೈನಲ್ ತಲುಪಿದ ಮೇರಿ ಕೋಮ್ | ಜನತಾ ನ್ಯೂ&#
ಪ್ರಧಾನಿ ಮೋದಿ ಯವರ ಮನ್ ಕಿ ಬಾತ್‌  ಮುಖ್ಯಾಂಶ | ಜನತಾ ನ್ಯೂ&#
ಪ್ರಧಾನಿ ಮೋದಿ ಯವರ ಮನ್ ಕಿ ಬಾತ್‌ ಮುಖ್ಯಾಂಶ | ಜನತಾ ನ್ಯೂ&#

ನ್ಯೂಸ್ MORE NEWS...