ಕೆಆರ್‌ಎಸ್ ಬಿರುಕು ಬಿಟ್ಟಿರುವುದು ಸತ್ಯ, ಕೆಆರ್‌ಎಸ್‌ ಸುತ್ತ ಗಣಿಗಾರಿಕೆ ನಿಷೇಧಿಸಲು ಸಂಸದೆ ಸುಮಲತಾ ಒತ್ತಾಯ | ಜನತಾ ನ್ಯೂಸ್

14 Jul 2021
383

ಮಂಡ್ಯ : ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ನ ಕಾವೇರಿ ಸಭಾಂಗಣದಲ್ಲಿ ಸುಮಲತಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಅಪಾಯ ಆಗುವ ಮುನ್ನ ಎಚ್ಚೆತ್ತುಕೊಳ್ಳುವುದು ಜವಾಬ್ದಾರಿ. ನಾವೆಲ್ಲರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅಪಾಯ ನಿಶ್ಚಿತ. ಕೆಆರ್​ಎಸ್ ಡ್ಯಾಂನಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕಾಗಿದೆ. ಈ ಸಂಬಂಧ ಗಣಿ ಮತ್ತು ಭೂವಿಜ್ಞಾನ ಸಚಿವರಿಗೆ ಆಗ್ರಹಿಸುವೆ ಎಂದು ಅವರು ಹೇಳಿದ್ದಾರೆ.

ಡ್ಯಾಂ ಎಷ್ಟು ಲೈನ್ ಇದೆ, ಎಷ್ಟು ವಿಸ್ತಾರವಿದೆ ಎನ್ನುವುದು ಎಲ್ಲರಿಗೂ ಗೊತ್ತು. ಅದರಲ್ಲಿ ಸಣ್ಣಪುಟ್ಟ ಬಿರುಕು ಕೂಡ ಆಗುತ್ತೆ. ಏರ್ ಕ್ರ್ಯಾಕ್ ಅಂತಾ ಕೂಡ ಹೇಳ್ತಾರೆ. ಗ್ರೌಟಿಂಗ್ ಮೂಲಕ ಅದನ್ನು ಮುಚ್ಚುತ್ತಾರೆ. ಆದರೆ ಬಿರುಕಾಗಿರೋದು ಸತ್ಯ, ಅದನ್ನು ಗ್ರೌಟಿಂಗ್ ಮೂಲಕ ಮುಚ್ಚುತ್ತಿದ್ದಾರೆ ಎಂದು ತಿಳಿಸಿದರು.

ಅಪಾಯ ಪ್ರಮಾಣ ಪತ್ರದ ಬಗ್ಗೆ ಸರ್ಟಿಫಿಕೇಟ್ ಕೊಡುವ ಅಧಿಕಾರಿ ನಾವಲ್ಲ ಅಂತಾ ನೀರಾವರಿ ಅಧಿಕಾರಿಗಳು ಹೇಳಿದ್ದಾರೆ. ಸರ್ಟಿಫಿಕೇಟ್ ಕೊಡಲೂ ನಮ್ಮಲ್ಲಿ ಯಾರಿಗೂ ಅಧಿಕಾರವಿಲ್ಲ. ಅವರದ್ದೆ ಆದ ಟೆಕ್ನಿಕಲ್ ಕಮಿಟಿ ಬರಬೇಕಿದೆ. ಕ್ರ್ಯಾಕ್ ಆಗುವ ಮುಂಚೆ ಎಚ್ಚರಿಕೆ ವಹಿಸಬೇಕಿದೆ. ಕೊರೊನಾ ಬಂದು 10 ದಿನದ ನಂತರ ಆಸ್ಪತ್ರೆಗೆ ಹೋದ್ರೆ ಏನು ಪ್ರಯೋಜನ? ಮೊದಲೇ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು. ಹಾಗೆ ಇದು ಕೂಡ ಇವತ್ತು, ನಾಳೆ ಅಪಾಯ ಇಲ್ಲ. ಐದು, ಹತ್ತು ವರ್ಷದ ನಂತರ ಅಪಾಯವಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಮೊದಲೇ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು. ಹಾಗೆ ಇದು ಕೂಡ ಇವತ್ತು, ನಾಳೆ ಅಪಾಯ ಇಲ್ಲ. ಐದು, ಹತ್ತು ವರ್ಷದ ನಂತರ ಅಪಾಯವಾದರೆ ಯಾರು ಹೊಣೆ. ಕೆಆರ್‍ಎಸ್ ಅಣೆಕಟ್ಟೆಯ 20 ಕಿ.ಮೀ. ರೆಡಿಯಸ್ ನಲ್ಲಿ ಗಣಿಗಾರಿಕೆ ನಡೆಯಬಾರದು.

ಈಗಾಗಲೇ ಈ ಬಗ್ಗೆ ಮೈನಿಂಗ್ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ನಾನು ಲೀಗಲ್ ಆಗಿರೋ ಗಣಿಗಾರಿಕೆ ರದ್ದು ಮಾಡಿ ಅಂತಾ ಹೇಳಿಲ್ಲ. ಕೆಆರ್‍ಎಸ್ ಅಣೆಕಟ್ಟೆಗೆ ಅಪಾಯವಾಗುವ ರೀತಿ ಇದ್ದರೆ ಗಣಿಗಾರಿಕೆ ಬೇಡ ಎಂದು ಹೇಳಿದ್ದೇನೆ. ಆರಂಭದಿಂದಲೂ ನನ್ನ ಹೇಳಿಕೆಯನ್ನು ತಿರುಚಲಾಗುತ್ತಿದೆ. ನನ್ನ ವೈಯಕ್ತಿಕ ತೇಜೋವಧೆ ಮಾಡಲಾಗುತ್ತಿದೆ ಎಂದು ಹೇಳಿದರು.

ನನ್ನ ಹೇಳಿಕೆಗೆ ಬೇರೆ ಬೇರೆ ಅರ್ಥ ಕಲ್ಪಿಸುತ್ತಿರುವುದು ಯಾಕೆ? ಕನ್ನಂಬಾಡಿ ಕಟ್ಟೆಯಲ್ಲಿ ಬಿರುಕು ಬಿಟ್ಟಿದ್ದಕ್ಕೆ ದುರಸ್ತಿ ಮಾಡಿದ್ದಾರೆ. ಗ್ರೌಟಿಂಗ್​ ಮಾಡಿ ಬಿರುಕು ಮುಚ್ಚಿದ್ದಾರೆ. ಕನ್ನಂಬಾಡಿ ಕಟ್ಟೆ ನಿರ್ಮಿಸಿ 100 ವರ್ಷ ಕಳೆದ್ರೂ ಭದ್ರವಾಗಿದೆ. ಮಹಾರಾಜರ ದೂರಾಲೋಚನೆಗೆ ದೇಗುಲ ಕಟ್ಟಿ ಪೂಜಿಸಬೇಕು. ಆದರೆ, ನಮ್ಮಲ್ಲಿ ಬರೀ ದುರಾಲೋಚನೆಯೇ ತುಂಬಿದೆ. ಕೆಆರ್​ಎಸ್​ ಅಣೆಕಟ್ಟೆ ಬಗ್ಗೆ ಹಲವರ ಪ್ರತಿಕ್ರಿಯೆಗೆ ಬೇಸರ ಉಂಟಾಗಿದೆ. ಜನರ ಗಮನ ಬೇರೆಡೆ ಸೆಳೆಯಲು ಹೀಗೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸುಮಲತಾ ತಿಳಿಸಿದ್ದಾರೆ.

ನಮಗಿರುವ ಆತಂಕ ವ್ಯಕ್ತಪಡಿಸಿದರೆ ವಾಗ್ದಾಳಿ ಮಾಡುತ್ತಾರೆ. ನಾನು ಧ್ವನಿ ಎತ್ತಿದ್ದಕ್ಕೆ ತಾನೆ ವಾಸ್ತವ ವಿಚಾರ ಗೊತ್ತಾಯಿತು. ಪ್ರತಿಯೊಬ್ರೂ ಸಾಮಾಜಿಕ ಜವಾಬ್ದಾರಿಯಿಂದ ನಡೆಯಬೇಕು. ಆಗ ಮಾತ್ರ ಎಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತೆ. ಟ್ರಯಲ್ ಬ್ಲಾಸ್ಟ್​ ನಡೆಸಿ ಪರಿಶೀಲನೆ ಮಾಡುವುದು ಸೂಕ್ತ. ಜಾರ್ಖಂಡ್​ನ ತಜ್ಞರ ತಂಡದಿಂದ ಪರಿಶೀಲನೆ ಮಾಡ್ಬೇಕು. ಕೆಆರ್​ಎಸ್ ಅಣೆಕಟ್ಟೆ ಸುರಕ್ಷತೆ ಬಗ್ಗೆ ವರದಿ ನೀಡುವುದು ಸೂಕ್ತ ಎಂದು ಸುಮಲತಾ ಹೇಳಿಕೆ ನೀಡಿದ್ದಾರೆ.

RELATED TOPICS:
English summary :Sumalatha Ambareesh

ಬೆಂಗಳೂರಲ್ಲಿ ಹಾಡಹಗಲೇ ತಲೆ ಮೇಲೆ ಕಲ್ಲು ಹಾಕಿ ರೌಡಿಶೀಟರ್ ಭೀಕರ ಕೊಲೆ | ಜನತಾ ನ್ಯೂ&#
ಬೆಂಗಳೂರಲ್ಲಿ ಹಾಡಹಗಲೇ ತಲೆ ಮೇಲೆ ಕಲ್ಲು ಹಾಕಿ ರೌಡಿಶೀಟರ್ ಭೀಕರ ಕೊಲೆ | ಜನತಾ ನ್ಯೂ&#
ಎಸ್.ಆರ್. ಬೊಮ್ಮಾಯಿ ಗುಣ ಮಗನಿಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ: ಸಿದ್ದರಾಮಯ್ಯ | ಜನತಾ ನ್ಯೂ&#
ಎಸ್.ಆರ್. ಬೊಮ್ಮಾಯಿ ಗುಣ ಮಗನಿಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ: ಸಿದ್ದರಾಮಯ್ಯ | ಜನತಾ ನ್ಯೂ&#
ನಾನು ಸಂಪುಟ ಸೇರಲ್ಲ, ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ : ಜಗದೀಶ್ ಶೆಟ್ಟರ್ | ಜನತಾ ನ್ಯೂ&#
ನಾನು ಸಂಪುಟ ಸೇರಲ್ಲ, ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ : ಜಗದೀಶ್ ಶೆಟ್ಟರ್ | ಜನತಾ ನ್ಯೂ&#
ನಾಳೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಹಪೀಡಿತ ಸ್ಥಳಗಳಿಗೆ ಬಸವರಾಜ ಬೊಮ್ಮಾಯಿ ಭೇಟಿ | ಜನತಾ ನ್ಯೂ&#
ನಾಳೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಹಪೀಡಿತ ಸ್ಥಳಗಳಿಗೆ ಬಸವರಾಜ ಬೊಮ್ಮಾಯಿ ಭೇಟಿ | ಜನತಾ ನ್ಯೂ&#
₹15 ಲಕ್ಷ ಲಂಚ ಪಡೆಯುತ್ತಿದ್ದಾಗ ಬೀದರ್ ತಹಶೀಲ್ದಾರ್ ಗಂಗಾದೇವಿ ಎಸಿಬಿ ಬಲೆಗೆ | ಜನತಾ ನ್ಯೂ&#
₹15 ಲಕ್ಷ ಲಂಚ ಪಡೆಯುತ್ತಿದ್ದಾಗ ಬೀದರ್ ತಹಶೀಲ್ದಾರ್ ಗಂಗಾದೇವಿ ಎಸಿಬಿ ಬಲೆಗೆ | ಜನತಾ ನ್ಯೂ&#
ಪ್ರಿಯಕರನೊಂದಿಗೆ ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ನೇಣಿಗೆ ಶರಣು! | ಜನತಾ ನ್ಯೂ&#
ಪ್ರಿಯಕರನೊಂದಿಗೆ ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ನೇಣಿಗೆ ಶರಣು! | ಜನತಾ ನ್ಯೂ&#
ಕಳೆದೆರಡು ವರ್ಷದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ನೂತನ ಸಿಎಂ ಬೊಮ್ಮಾಯಿ ಸರಿಪಡಿಸಲಿ: ಡಿ.ಕೆ. ಶಿವಕುಮಾರ್ | ಜನತಾ ನ್ಯೂ&#
ಕಳೆದೆರಡು ವರ್ಷದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ನೂತನ ಸಿಎಂ ಬೊಮ್ಮಾಯಿ ಸರಿಪಡಿಸಲಿ: ಡಿ.ಕೆ. ಶಿವಕುಮಾರ್ | ಜನತಾ ನ್ಯೂ&#
ರೈತ ಮಕ್ಕಳಿಗೆ ವಿಶೇಷ ಶಿಷ್ಯವೇತನ, ನೂತನ ಸಿಎಂ ಬೊಮ್ಮಾಯಿ ಘೋಷಣೆ | ಜನತಾ ನ್ಯೂ&#
ರೈತ ಮಕ್ಕಳಿಗೆ ವಿಶೇಷ ಶಿಷ್ಯವೇತನ, ನೂತನ ಸಿಎಂ ಬೊಮ್ಮಾಯಿ ಘೋಷಣೆ | ಜನತಾ ನ್ಯೂ&#
ಕರ್ನಾಟಕ ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಶುಭಹಾರೈಸಿದ ಪ್ರಧಾನಿ ನರೇಂದ್ರ ಮೋದಿ! | ಜನತಾ ನ್ಯೂ&#
ಕರ್ನಾಟಕ ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಶುಭಹಾರೈಸಿದ ಪ್ರಧಾನಿ ನರೇಂದ್ರ ಮೋದಿ! | ಜನತಾ ನ್ಯೂ&#
ಯಡಿಯೂರಪ್ಪನವರ ಕೆಲಸ, ಕೊಡುಗೆ ಬಗ್ಗೆ ಮಾತನಾಡಲು ಪದಗಳಿಲ್ಲ ಎಂದ ಪ್ರಧಾನಿ ಮೋದಿ! | ಜನತಾ ನ್ಯೂ&#
ಯಡಿಯೂರಪ್ಪನವರ ಕೆಲಸ, ಕೊಡುಗೆ ಬಗ್ಗೆ ಮಾತನಾಡಲು ಪದಗಳಿಲ್ಲ ಎಂದ ಪ್ರಧಾನಿ ಮೋದಿ! | ಜನತಾ ನ್ಯೂ&#
ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೊಮ್ಮಾಯಿ | ಜನತಾ ನ್ಯೂ&#
ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೊಮ್ಮಾಯಿ | ಜನತಾ ನ್ಯೂ&#
ಇಂದು ದೇಶಾದ್ಯಂತ 43,654 ಹೊಸ ಪ್ರಕರಣಗಳು ಪತ್ತೆ, 640 ಮಂದಿ ಸಾವು | ಜನತಾ ನ್ಯೂ&#
ಇಂದು ದೇಶಾದ್ಯಂತ 43,654 ಹೊಸ ಪ್ರಕರಣಗಳು ಪತ್ತೆ, 640 ಮಂದಿ ಸಾವು | ಜನತಾ ನ್ಯೂ&#

ನ್ಯೂಸ್ MORE NEWS...