ಆಸಿಡ್​ ದಾಳಿ, ನಾಲ್ವರಿಗೆ ಜೀವಾವಧಿ ಶಿಕ್ಷೆ: ಈ ತೀರ್ಪು ಉಸಿರಾಡುವಂತೆ ಮಾಡಿದೆ: ಸಂತ್ರಸ್ತೆ | ಜನತಾ ನ್ಯೂಸ್

15 Jul 2021
308

ಶೃಂಗೇರಿ : ಶೃಂಗೇರಿ ಮಹಿಳೆ ಮೇಲೆ ಆಯಸಿಡ್ ದಾಳಿ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 20 ಲಕ್ಷ ರೂ. ದಂಡ ವಿಧಿಸಿ ಚಿಕ್ಕಮಗಳೂರಿನ 2ನೇ ಜೆಎಂಎಫ್ ಸಿ ನ್ಯಾಯಲಯ ತೀರ್ಪು ನೀಡಿದೆ.

ನ್ಯಾಯಾಧೀಶ ಮಂಜುನಾಥ್ ಸಂಗ್ರೇಶಿ ಈ ಆದೇಶ ಹೊರಡಿಸಿದ್ದು, ಆರೋಪಿಗಳಾದ ಗಣೇಶ್ ಅಲಿಯಾಸ್ ಗಣಿ (36), ಮಹಮ್ಮದ್ ಕಬೀರ್ (31), ವಿನೋದ್ ಕುಮಾರ್(38), ಹಾಗೂ ಅಬ್ದುಲ್ ವಾಜೀದ್(37) ಅವರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.

ಶಿಕ್ಷೆಗೆ ಒಳಗಾದವರು ಗಣೇಶ್, ಕಬೀರ್, ವಿನೋದ್, ಅಬ್ದುಲ್ ಮಜೀದ್. ಈ ನಾಲ್ವರು 2015ರ ಏಪ್ರಿಲ್ 18ರಂದು ಮೆಣಸೆಯಲ್ಲಿ ಮಹಿಳೆಯೊಬ್ಬರ ಮೇಲೆ ಆಸಿಡ್​ ದಾಳಿ ನಡೆಸಿದ್ದರು. 6 ವರ್ಷದಿಂದ ಸುದೀರ್ಘ ವಿಚಾರಣೆ ನಡೆದ ಬಳಿಕ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಮಂಜುನಾಥ್ ಸಂಗ್ರೇಶಿ ಅವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, 20 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.

ತೀರ್ಪು ಪ್ರಕಟಗೊಂಡ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಂತ್ರಸ್ತೆ ಸುಮನಾ, ಈ ತೀರ್ಪು ನನಗೆ ಉಸಿರಾಡುವ ಹಾಗೆ ಆಗಿದೆ. ಇಲ್ಲಿಯವರೆಗೆ ನಾನು ಸತ್ತಂಗೆ ಇದ್ದೆ, ಸದ್ಯ ನನಗೆ ತೃಪ್ತಿ ಸಿಕ್ಕಿದೆ ಎಂದಿದ್ದಾರೆ.

ಘಟನೆ -
ಗಣೇಶ್ ಎಂಬಾತ ಮದುವೆಯಾಗುವಂತೆ ವಿಚ್ಚೇದಿತ ಮಹಿಳೆ ಸುಮನಾಳ ಹಿಂದೆ ಬಿದ್ದಿದ್ದ. ಇವರಿಬ್ಬರೂ ಒಂದೇ ಗ್ರಾಮದ ನಿವಾಸಿಗಳಾಗಿದ್ದ ಕಾರಣ ಇವರಿಗೆ ಪರಿಚಯವಿತ್ತು. ಮಹಿಳೆ ಮದುವೆಯಾಗಲು ತಿರಸ್ಕರಿದಕ್ಕೆ ಗಣೇಶ ಆಕೆಗೆ ಬೆದರಿಕೆ ಹಾಕಿದ್ದ. ಗಣೇಶನ ಯಾವ ಬೆದರಿಕೆಗೂ ಮಹಿಳೆ ಬಗ್ಗಲಿಲ್ಲ ಎಂದು ಗಣೇಶ ತನ್ನ ಸ್ನೇಹಿತರ ಜೊತೆ ಸೇರಿ ಆಯಸಿಡ್ ದಾಳಿ ನಡೆಸಲು ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ.

ಏಪ್ರಿಲ್ 18ರ ರಾತ್ರಿ ಮಹಿಳೆ ಬ್ಯೂಟಿ ಪಾರ್ಲರ್ ಕೆಲಸ ಮುಗಿಸಿ ಮನೆಗೆ ಮರಳುತ್ತಿರುವಾಗ ಹಿಂದಿನಿಂದ ಬೈಕ್ನಲ್ಲಿ ಬಂದ ಆರೋಪಿಗಳು ವಿಳಾಸ ಕೇಳುವ ಸೋಗಿನಲ್ಲಿ ಮಹಿಳೆಯನ್ನು ಮಾತನಾಡಿಸಿ ಆಯಸಿಡ್ ಎರಚಿ ಪರಾರಿಯಾಗಿದ್ದರು. ಆಯಸಿಡ್ ದಾಳಿಯಲ್ಲಿ ಮಹಿಳೆಯ ಬಲಗಣ್ಣು ಪೂರ್ಣ ಸುಟ್ಟಿದ್ದು ಎಡಗಣ್ಣು ಭಾಗಶಃ ಹಾನಿಯಾಗಿದೆ. ಮೈ ಕೈ ಕಾಲು ಸುಟ್ಟಿದೆ. ಈ ಸಂಬಂಧ ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

RELATED TOPICS:
English summary :Shangeri

ಕೆರೆಗೆ ಉರುಳಿದ ಕೆಎಸ್‌ಆರ್​ಟಿಸಿ ಬಸ್; ಇಬ್ಬರು ಮೃತಪಟ್ಟ ಶಂಕೆ | ಜನತಾ ನ್ಯೂ&#
ಕೆರೆಗೆ ಉರುಳಿದ ಕೆಎಸ್‌ಆರ್​ಟಿಸಿ ಬಸ್; ಇಬ್ಬರು ಮೃತಪಟ್ಟ ಶಂಕೆ | ಜನತಾ ನ್ಯೂ&#
ಪ್ರಮಾಣವಚನ ಬಳಿಕ ಮೊದಲ ಬಾರಿ ದೆಹಲಿಗೆ ಸಿಎಂ: ಪ್ರಧಾನಿ ಭೇಟಿಯಾಗಲಿರುವ ಬೊಮ್ಮಾಯಿ | ಜನತಾ ನ್ಯೂ&#
ಪ್ರಮಾಣವಚನ ಬಳಿಕ ಮೊದಲ ಬಾರಿ ದೆಹಲಿಗೆ ಸಿಎಂ: ಪ್ರಧಾನಿ ಭೇಟಿಯಾಗಲಿರುವ ಬೊಮ್ಮಾಯಿ | ಜನತಾ ನ್ಯೂ&#
ಕ್ಯಾಮ್ಸ್​​ ಪ್ರಧಾನ ಕಾರ್ಯದರ್ಶಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ | ಜನತಾ ನ್ಯೂ&#
ಕ್ಯಾಮ್ಸ್​​ ಪ್ರಧಾನ ಕಾರ್ಯದರ್ಶಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ | ಜನತಾ ನ್ಯೂ&#
ನೆರೆರಾಜ್ಯ ಕೇರಳದಲ್ಲಿ 22,000 ಪ್ರಕರಣ ಪ್ರತಿದಿನ : ರಾಜ್ಯಕ್ಕೆ ಎಚ್ಚರಿಕೆಯ ಗಂಟೆ? | ಜನತಾ ನ್ಯೂ&#
ನೆರೆರಾಜ್ಯ ಕೇರಳದಲ್ಲಿ 22,000 ಪ್ರಕರಣ ಪ್ರತಿದಿನ : ರಾಜ್ಯಕ್ಕೆ ಎಚ್ಚರಿಕೆಯ ಗಂಟೆ? | ಜನತಾ ನ್ಯೂ&#
ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯತಮನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! | ಜನತಾ ನ್ಯೂ&#
ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯತಮನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! | ಜನತಾ ನ್ಯೂ&#
ನಾಳೆ ದೆಹಲಿಗೆ ಸಿಎಂ ಪ್ರವಾಸ: ಸಿಎಂ ದೆಹಲಿಗೆ ತೆರಳುವ ಮುನ್ನವೇ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿ ಪ್ರವಾಸ! | ಜನತಾ ನ್ಯೂ&#
ನಾಳೆ ದೆಹಲಿಗೆ ಸಿಎಂ ಪ್ರವಾಸ: ಸಿಎಂ ದೆಹಲಿಗೆ ತೆರಳುವ ಮುನ್ನವೇ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿ ಪ್ರವಾಸ! | ಜನತಾ ನ್ಯೂ&#
ತಮ್ಮ ನೆಚ್ಚಿನ ನಾಯಿಯ ಸಾವಿಗೆ ಕಣ್ಣಿರು ಸುರಿಸಿದ ಪ್ರಾಣಿಪ್ರಿಯ ಸಿಎಂ ಬಸವರಾಜ್ ಬೊಮ್ಮಾಯಿ - ವೀಡಿಯೊ ವೈರಲ್ | ಜನತಾ ನ್
ತಮ್ಮ ನೆಚ್ಚಿನ ನಾಯಿಯ ಸಾವಿಗೆ ಕಣ್ಣಿರು ಸುರಿಸಿದ ಪ್ರಾಣಿಪ್ರಿಯ ಸಿಎಂ ಬಸವರಾಜ್ ಬೊಮ್ಮಾಯಿ - ವೀಡಿಯೊ ವೈರಲ್ | ಜನತಾ ನ್
ಮಾದಕ ವಸ್ತು ದಂಧೆ ಮಾಡುತ್ತಿದ್ದವರು ಅಂದರ್: 20 ಲಕ್ಷ ಮೌಲ್ಯದ ಅಫೀಮು ವಶ | ಜನತಾ ನ್ಯೂ&#
ಮಾದಕ ವಸ್ತು ದಂಧೆ ಮಾಡುತ್ತಿದ್ದವರು ಅಂದರ್: 20 ಲಕ್ಷ ಮೌಲ್ಯದ ಅಫೀಮು ವಶ | ಜನತಾ ನ್ಯೂ&#
ಡಿಸಿಎಂ, ಸಚಿವ ಸ್ಥಾನ ಯಾವುದು ಕೊಟ್ಟರೂ ಬೇಡ ಅನ್ನಲ್ಲ: ಕೆ.ಎಸ್. ಈಶ್ವರಪ್ಪ | ಜನತಾ ನ್ಯೂ&#
ಡಿಸಿಎಂ, ಸಚಿವ ಸ್ಥಾನ ಯಾವುದು ಕೊಟ್ಟರೂ ಬೇಡ ಅನ್ನಲ್ಲ: ಕೆ.ಎಸ್. ಈಶ್ವರಪ್ಪ | ಜನತಾ ನ್ಯೂ&#
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಎರಡು ವರ್ಷದ ಸಾಧನೆ ಭ್ರಷ್ಟಾಚಾರ: ಸಿದ್ದರಾಮಯ್ಯ | ಜನತಾ ನ್ಯೂ&#
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಎರಡು ವರ್ಷದ ಸಾಧನೆ ಭ್ರಷ್ಟಾಚಾರ: ಸಿದ್ದರಾಮಯ್ಯ | ಜನತಾ ನ್ಯೂ&#
ಗಾಂಧಿಯ ಮಗ ಕುಡುಕನಾದ: ಇಂದಿರಾ ಗಾಂಧಿ ಪುತ್ರನ ಬಗ್ಗೆಯೋ ಅಥವಾ ಸೋನಿಯಾ ಗಾಂಧಿಯ ಪುತ್ರನ ಬಗ್ಗೆಯೋ? | ಜನತಾ ನ್ಯೂ&#
ಗಾಂಧಿಯ ಮಗ ಕುಡುಕನಾದ: ಇಂದಿರಾ ಗಾಂಧಿ ಪುತ್ರನ ಬಗ್ಗೆಯೋ ಅಥವಾ ಸೋನಿಯಾ ಗಾಂಧಿಯ ಪುತ್ರನ ಬಗ್ಗೆಯೋ? | ಜನತಾ ನ್ಯೂ&#
60 ಕ್ಕೂ ಹೆಚ್ಚು ಮಂಗಗಳಿಗೆ ವಿಷಪ್ರಾಶನ ಮಾಡಿ, ಗೋಣಿಚೀಲದಲ್ಲಿ ಕಟ್ಟಿ ಎಸೆದ ದುಷ್ಕರ್ಮಿಗಳು | ಜನತಾ ನ್ಯೂ&#
60 ಕ್ಕೂ ಹೆಚ್ಚು ಮಂಗಗಳಿಗೆ ವಿಷಪ್ರಾಶನ ಮಾಡಿ, ಗೋಣಿಚೀಲದಲ್ಲಿ ಕಟ್ಟಿ ಎಸೆದ ದುಷ್ಕರ್ಮಿಗಳು | ಜನತಾ ನ್ಯೂ&#

ನ್ಯೂಸ್ MORE NEWS...