Thu,Mar28,2024
ಕನ್ನಡ / English

ನನಗೆ ಅಧಿಕಾರದ ಆಸೆ ಇಲ್ಲ, ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ: ಹೆಚ್. ಡಿ.ಕುಮಾರಸ್ವಾಮಿ | ಜನತಾ ನ್ಯೂಸ್

15 Jul 2021
1213

ಬೆಂಗಳೂರು : ನನಗೆ ಅಧಿಕಾರದ ಆಸೆ ಇಲ್ಲ. ಆದರೆ, ಸ್ವತಂತ್ರವಾಗಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪಕ್ಷದ ಕಚೇರಿ ಜೆ.ಪಿ ಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾವಾರು ಸಭೆಗೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷ ಜನರಿಗಾಗಿಯೇ ಇರುವ ಪಕ್ಷ. 2023 ರ ವಿಧಾನಸಭೆ ಚುನಾವಣೆಗೆ ಕನಿಷ್ಠ 150 ಜನ ಅಭ್ಯರ್ಥಿಗಳನ್ನು ಜನವರಿ 15ರ ಒಳಗೆ ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.

ಮುಂದಿನ ಚುನಾವಣೆಗೆ ಪಕ್ಷ ಸಂಘಟನೆ ಮಾಡುವುದು ನಮ್ಮ ಗುರಿ. ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದೇನೆ. ಕರೊನಾ ಸಂಪೂರ್ಣವಾಗಿ ಕಡಿಮೆಯಾಗಬೇಕಿದೆ. ಹಾಗಾಗಿ ಆಷಾಢ ಮಾಸದ ನಂತರ ಪ್ರವಾಸ ಮಾಡುತ್ತೇನೆ ಎಂದರು. ಪ್ರವಾಸದ ವೇಳೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ತಿಳಿಸಲಿದ್ದೇವೆ.

ಒಂದು ವಾರಗಳ ಕಾಲ ಪಕ್ಷದ ಜಿಲ್ಲಾವಾರು ಸಂಘಟನೆ ಸಭೆ ಕರೆದಿದ್ದೇನೆ. ಮುಂದಿನ ಐದು ದಿನಗಳ ಕಾಲ ಸಂಘಟನೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು. ತಾಲ್ಲೂಕು, ಜಿಲ್ಲಾ ಪಂಚಾಯಿತಿ, ಮುಂದಿನ ವಿಧಾನಸಭೆ ಚುನಾವಣೆ ಬಗ್ಗೆ ಚರ್ಚಿಸಲಿದ್ದೇವೆ ಎಂದು ಹೇಳಿದರು. ಕಾಂಗ್ರೆಸ್ ಪರಿಸ್ಥಿತಿ, ಬಿಜೆಪಿ ಅಧಿಕಾರ ಎಲ್ಲವನ್ನೂ ಜನತೆ ನೋಡಿದ್ದಾರೆ. ಜನತಾದಳ ಅಧಿಕಾರದಲ್ಲಿದ್ದಾಗ ಮಾತ್ರ ಅಭಿವೃದ್ಧಿ ಆಗಿದೆ ಎಂದರು.

"ಜನರ ಜೊತೆ ಮಾತುಕತೆ ನಡೆಸಲಿದ್ದೇನೆ. ಪ್ರಾದೇಶಿಕ ಪಕ್ಷದ ಅಗತ್ಯ. ಶಿಕ್ಷಣ, ರಾಜಕೀಯ, ರೈತರ ವಿಚಾರದಲ್ಲಿ ಪಕ್ಷದ ನಿಲುವು ಏನು ಎಂಬುದನ್ನು ಜನರಿಗೆ ತಿಳಿಸಿಕೊಡುತ್ತೇನೆ" ಎಂದು ಕುಮಾರಸ್ವಾಮಿ ವಿವರಣೆ ನೀಡಿದರು.

"ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯವೈಖರಿಯನ್ನು ಜನರು ನೋಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳು ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಅವರು ಲೂಟಿ ಮಾಡಲು ಬಳಕೆ ಮಾಡಿಕೊಳ್ಳುತ್ತಾರೆ" ಎಂದು ಕುಮಾರಸ್ವಾಮಿ ದೂರಿದರು.

ಜಲಮಿಷನ್ ಯೋಜನೆ ಬಗ್ಗೆ ತಿಳಿಸಲು ಕೇಂದ್ರ ಸಚಿವರು ರಾಜ್ಯಕ್ಕೆ ಬಂದಿದ್ದರು. ಆದರೆ, ಕೇಂದ್ರ ಸಚಿವರ ಸಭೆಗೆ ಈಶ್ವರಪ್ಪ ಹೋಗುವುದೇ ಇಲ್ಲ. 99 ಲಕ್ಷ ಕುಟುಂಬಕ್ಕೆ ನೀರು ಪೂರೈಸುವ ಬಗ್ಗೆ ಹೇಳಿದ್ದರು. ಅವರು ನೀರಾವರಿ ವಿಚಾರವಾಗಿ ಚರ್ಚೆ ಮಾಡಲು ಬಂದಿಲ್ಲ. ಮಹದಾಯಿ, ಮೇಕೇದಾಟು ವಿಚಾರ ಸಮಗ್ರವಾಗಿ ಚರ್ಚೆ ನಡೆಸಿಲ್ಲಅವರು ಟೋಪಿ ಹಾಕಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಪರಿಸ್ಥಿತಿ, ಬಿಜೆಪಿ ಅಧಿಕಾರ ಎಲ್ಲವನ್ನೂ ಜನತೆ ನೋಡಿದ್ದಾರೆ. ಈ ಹಿಂದೆ ಜನತಾದಳ ಅಧಿಕಾರದಲ್ಲಿದ್ದಾಗ ಮಾತ್ರ ಅಭಿವೃದ್ಧಿ ಆಗಿರುವುದು. ನಾನು ಕೃಷಿಯಲ್ಲಿ ತೊಡಗಿಕೊಂಡಿದ್ದರೂ, ಪಕ್ಷ ಸಂಘಟನೆಯನ್ನು ಮಾಡುತ್ತಿದ್ದೇನೆ. ಹೊಸದೊಂದು ಬದಲಾವಣೆಗೆ ಪ್ರಾದೇಶಿಕ ಪಕ್ಷದ ಪಾತ್ರದ ಬಗ್ಗೆ ಜನರಿಗೆ ತಿಳಿಸುತ್ತೇನೆ ಎಂದರು.

RELATED TOPICS:
English summary :HD Kumaraswamy

ಕಂಗನಾ ರಣಾವತ್ ಬಗ್ಗೆ ಅವಹೇಳನಕಾರಿ ಪೋಸ್ಟ್ : ಕಾಂಗ್ರೆಸ್ ನ ಸುಪ್ರಿಯಾ ಶ್ರೀನಾಟೆ ವಿರುದ್ಧ ಚುನಾವಣಾ ಆಯೋಗಕ್ಕೆ ಎನ್‌ಸಿಡಬ್ಲ್ಯೂ ಪತ್ರ
ಕಂಗನಾ ರಣಾವತ್ ಬಗ್ಗೆ ಅವಹೇಳನಕಾರಿ ಪೋಸ್ಟ್ : ಕಾಂಗ್ರೆಸ್ ನ ಸುಪ್ರಿಯಾ ಶ್ರೀನಾಟೆ ವಿರುದ್ಧ ಚುನಾವಣಾ ಆಯೋಗಕ್ಕೆ ಎನ್‌ಸಿಡಬ್ಲ್ಯೂ ಪತ್ರ
ಭಯೋತ್ಪಾದಕನ ಬಿಡುಗಡೆಗೆ, ಖಲಿಸ್ತಾನಿ ಗುಂಪುಗಳಿಂದ $16 ಮಿಲಿಯನ್ ಹಣ ಪಡೆದ ದೆಹಲಿ ಸಿಎಂ ಕೇಜ್ರಿವಾಲ್
ಭಯೋತ್ಪಾದಕನ ಬಿಡುಗಡೆಗೆ, ಖಲಿಸ್ತಾನಿ ಗುಂಪುಗಳಿಂದ $16 ಮಿಲಿಯನ್ ಹಣ ಪಡೆದ ದೆಹಲಿ ಸಿಎಂ ಕೇಜ್ರಿವಾಲ್
ಮಾಸ್ಕೋ ವಿನಾಶಕಾರಿ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡ ಇಸ್ಲಾಮಿಕ್ ಸ್ಟೇಟ್
ಮಾಸ್ಕೋ ವಿನಾಶಕಾರಿ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡ ಇಸ್ಲಾಮಿಕ್ ಸ್ಟೇಟ್
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧಿಸಿದ ಇಡಿ : ಇಂದು ವಿಶೇಷ ನ್ಯಾಯಾಲಯಕ್ಕೆ ಹಾಜರು
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧಿಸಿದ ಇಡಿ : ಇಂದು ವಿಶೇಷ ನ್ಯಾಯಾಲಯಕ್ಕೆ ಹಾಜರು
ಮೆಟ್ರೋ ಹಳಿ ಮೇಲೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ : ನೇರಳೆ ಮಾರ್ಗದ ಸೇವೆ ಕೆಲಕಾಲ ಸ್ಥಗಿತ
ಮೆಟ್ರೋ ಹಳಿ ಮೇಲೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ : ನೇರಳೆ ಮಾರ್ಗದ ಸೇವೆ ಕೆಲಕಾಲ ಸ್ಥಗಿತ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತ್ರತ್ವದ ಐ.ಎನ್.ಡಿ.ಐ ಅಲಾಯನ್ಸ್ ಒಕ್ಕೂಟ ಗೆದ್ದರೆ ಮೇಕೆದಾಟು ಯೋಜನೆಗೆ ತಡೆ?
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತ್ರತ್ವದ ಐ.ಎನ್.ಡಿ.ಐ ಅಲಾಯನ್ಸ್ ಒಕ್ಕೂಟ ಗೆದ್ದರೆ ಮೇಕೆದಾಟು ಯೋಜನೆಗೆ ತಡೆ?
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕದಲ್ಲಿ ಹನುಮಾನ್ ಚಾಲೀಸಾ ನಿಷೇಧಿಸಲಾಗಿದೆಯೇ? - ಕೇಂದ್ರ ಸಚಿವರ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕದಲ್ಲಿ ಹನುಮಾನ್ ಚಾಲೀಸಾ ನಿಷೇಧಿಸಲಾಗಿದೆಯೇ? - ಕೇಂದ್ರ ಸಚಿವರ ಪ್ರಶ್ನೆ
 ರಷ್ಯಾದ ಅಧ್ಯಕ್ಷರಾಗಿ ಮತ್ತೊಮ್ಮೆ ವ್ಲಾಡಿಮಿರ್ ಪುಟಿನ್ ಆಯ್ಕೆ : ಪ್ರಧಾನಿ ಮೋದಿಯಿಂದ ಶುಭಾಶಯ
ರಷ್ಯಾದ ಅಧ್ಯಕ್ಷರಾಗಿ ಮತ್ತೊಮ್ಮೆ ವ್ಲಾಡಿಮಿರ್ ಪುಟಿನ್ ಆಯ್ಕೆ : ಪ್ರಧಾನಿ ಮೋದಿಯಿಂದ ಶುಭಾಶಯ
ನಮಾಜ್ ಟೈಂನಲ್ಲಿ ಹನುಮಾನ್ ಚಾಲೀಸ್ ಹಾಕಿದ್ದಕ್ಕೆ ಮೊಬೈಲ್ ಅಂಗಡಿಯ ಯುವಕನ ಮೇಲೆ ಹಲ್ಲೆ ನಡೆಸಿದ ಮುಸ್ಲಿಂ ತೀವ್ರಗಾಮಿಗಳು
ನಮಾಜ್ ಟೈಂನಲ್ಲಿ ಹನುಮಾನ್ ಚಾಲೀಸ್ ಹಾಕಿದ್ದಕ್ಕೆ ಮೊಬೈಲ್ ಅಂಗಡಿಯ ಯುವಕನ ಮೇಲೆ ಹಲ್ಲೆ ನಡೆಸಿದ ಮುಸ್ಲಿಂ ತೀವ್ರಗಾಮಿಗಳು
ಮೇರಾ ಕಾಶ್ಮೀರ ಬದಲ್ ರಹಾ ಹೈ : ಮೊಟ್ಟಮೊದಲ ಫಾರ್ಮುಲಾ-4 ಕಾರ್ ಶೋ ಇಂದು ದಾಲ್ ಲೇಕ್ ಶ್ರೀನಗರ
ಮೇರಾ ಕಾಶ್ಮೀರ ಬದಲ್ ರಹಾ ಹೈ : ಮೊಟ್ಟಮೊದಲ ಫಾರ್ಮುಲಾ-4 ಕಾರ್ ಶೋ ಇಂದು ದಾಲ್ ಲೇಕ್ ಶ್ರೀನಗರ
ಏಪ್ರಿಲ್ 19 ರಿಂದ ಜೂನ್ 1 ರವರೆಗೆ 7 ಹಂತಗಳಲ್ಲಿ ಲೋಕಸಭೆ ಚುನಾವಣೆ : ಜೂನ್ 4 ಫಲಿತಾಂಶ
ಏಪ್ರಿಲ್ 19 ರಿಂದ ಜೂನ್ 1 ರವರೆಗೆ 7 ಹಂತಗಳಲ್ಲಿ ಲೋಕಸಭೆ ಚುನಾವಣೆ : ಜೂನ್ 4 ಫಲಿತಾಂಶ
ಲೈಂಗಿಕ ದೌರ್ಜನ್ಯ : ಬಿ.ಎಸ್.ಯಡಿಯೂರಪ್ಪ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು
ಲೈಂಗಿಕ ದೌರ್ಜನ್ಯ : ಬಿ.ಎಸ್.ಯಡಿಯೂರಪ್ಪ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು

ನ್ಯೂಸ್ MORE NEWS...