ಶಿವಲಿಂಗ ಆಕಾರದ ರುದ್ರಾಕ್ಷ್-ಅಂತರರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರ ಉದ್ಘಾಟಿಸಿದ ಪ್ರಧಾನಿ ಮೋದಿ | ಜನತಾ ನ್ಯೂಸ್

15 Jul 2021
318

ವಾರಾಣಸಿ : ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಾಧುನಿಕ ಸ್ಟೇಟ್-ಆಫ್-ಆರ್ಟ್ ಸಮಾವೇಶ ಕೇಂದ್ರವನ್ನು ಇಂದು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ತಮ್ಮ ಸಂಸದೀಯ ಕ್ಷೇತ್ರವಾದ ವಾರಣಾಸಿಯನ್ನು ಸಮ್ಮೇಳನಗಳಿಗೆ ಆಕರ್ಷಕ ತಾಣವನ್ನಾಗಿ ಮಾಡಲಿದೆ ಮತ್ತು ಪ್ರವಾಸಿಗರು ಮತ್ತು ಉದ್ಯಮಿಗಳನ್ನು ನಗರಕ್ಕೆ ಎಳೆದು ತರಲಿದೆ, ಎಂದು ಅವರು ಹೇಳಿದ್ದಾರೆ.

"ರುದ್ರಾಕ್ಷ್" ಎಂದು ಹೆಸರಿಸಲಾಗಿರುವ ಅಂತರರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರವು ಪ್ರಾಚೀನ ನಗರದ ಸಾಂಸ್ಕೃತಿಕ ಶ್ರೀಮಂತಿಕೆಯ ಒಂದು ನೋಟವನ್ನು ನೀಡುತ್ತದೆ.

ಈ ಕೇಂದ್ರದ ಚಿತ್ರಣವನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ವಾರಣಾಸಿಯಲ್ಲಿ ರುದ್ರಾಕ್ಷ್ ಎಂಬ ಸಮಾವೇಶ ಕೇಂದ್ರವನ್ನು ಉದ್ಘಾಟಿಸುತ್ತಿರುವುದು ನನಗೆ ಖುಷಿ ತಂದಿದೆ. ಜಪಾನಿನ ನೆರವಿನೊಂದಿಗೆ ನಿರ್ಮಿಸಲಾಗಿರುವ ಈ ಅತ್ಯಾಧುನಿಕ ಕೇಂದ್ರವು ವಾರಣಾಸಿಯನ್ನು ಸಮ್ಮೇಳನಗಳಿಗೆ ಆಕರ್ಷಕ ತಾಣವನ್ನಾಗಿ ಮಾಡುತ್ತದೆ ಇದರಿಂದ ನಗರಕ್ಕೆ ಹೆಚ್ಚಿನ ಪ್ರವಾಸಿಗರು ಮತ್ತು ಉದ್ಯಮಿಗಳನ್ನು ಸೆಳೆಯುತ್ತದೆ, ಎಂದು ತಮ್ಮ ಸಾಮಾಜಿಕ ಮದ್ಯಮಗಳಲ್ಲಿ ಪ್ರಕಟಿಸಿದ್ದಾರೆ.

ಕೇಂದ್ರದಲ್ಲಿ 108 ರುದ್ರಾಕ್ಷವನ್ನು ಸ್ಥಾಪಿಸಲಾಗಿದೆ, ಇದರ ಮೇಲ್ಛಾವಣಿಯು ಶಿವಲಿಂಗವನ್ನು ಹೋಲುತ್ತದೆ, ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಕಟ್ಟಡದಾದ್ಯಂತ ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದೆ .

"ಈಗ ಕಾಶಿಯನ್ನು ಕಳೆದ 7 ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಂದ ಅಲಂಕರಿಸಲಾಗುತ್ತಿದೆ, ರುದ್ರಾಕ್ಷಾ ಇಲ್ಲದೆ ಈ ಅಲಂಕರಣವನ್ನು ಹೇಗೆ ಪೂರ್ಣಗೊಳಿಸಬಹುದು? ಈಗ ಕಾಶಿ ಈ ರುದ್ರಾಕ್ಷವನ್ನು ಧರಿಸಿದ್ದರಿಂದ, ಕಾಶಿಯ ಅಭಿವೃದ್ಧಿ ಹೆಚ್ಚು ಹೊಳೆಯುತ್ತದೆ, ಮತ್ತು ಕಾಶಿಯ ಸೌಂದರ್ಯವು ಹೆಚ್ಚಾಗುತ್ತದೆ, ಎಂದು ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಹೇಳಿದರು.

"ನಾನು ಇಂದು ಉಲ್ಲೇಖಿಸಲು ಮರೆಯಲಾಗದ ಇನ್ನೊಬ್ಬ ವ್ಯಕ್ತಿ ಇದ್ದಾನೆ. ಜಪಾನ್‌ನ ನನ್ನ ಇನ್ನೊಬ್ಬ ಸ್ನೇಹಿತ - ಶಿಂಜೊ ಅಬೆ. ಅವರು ಕಾಶಿಗೆ ಪ್ರಧಾನ ಮಂತ್ರಿಯಾಗಿ ಬಂದಾಗ, ರುದ್ರಾಕ್ಷರ ವಿಚಾರದ ಕುರಿತು ನಾನು ಅವರೊಂದಿಗೆ ಚರ್ಚಿಸಿದೆ. ಅವರು ತಕ್ಷಣವೇ ತಮ್ಮ ಅಧಿಕಾರಿಗಳಿಗೆ ಈ ಯೋಜನೆಯಲ್ಲಿ ಕೆಲಸ ಮಾಡಲು ಸೂಚನೆ ನೀಡಿದ್ದರು" ಎಂದು ಪ್ರಧಾನಿ ಮೋದಿ ನೆನೆದಿದ್ದಾರೆ.

RELATED TOPICS:
English summary :Rudraksha : PM Modi inaugurates international cooperative and convention center

ಒಲಂಪಿಕ್ಸ್ : 49 ವರ್ಷಗಳ ನಂತರ ಪುರುಷರ ಹಾಕಿ ಸೆಮಿಫೈನಲ್ ತಲುಪಿದ ಭಾರತೀಯ ತಂಡ | ಜನತಾ ನ್ಯೂ&#
ಒಲಂಪಿಕ್ಸ್ : 49 ವರ್ಷಗಳ ನಂತರ ಪುರುಷರ ಹಾಕಿ ಸೆಮಿಫೈನಲ್ ತಲುಪಿದ ಭಾರತೀಯ ತಂಡ | ಜನತಾ ನ್ಯೂ&#
ಒಲಂಪಿಕ್ಸ್ : ಕಂಚು ಗೆದ್ದ ಪಿ.ವಿ.ಸಿಂಧು, 2 ಪದಕ ಗೆದ್ದ ಪ್ರಥಮ ಭಾರತೀಯ ಮಹಿಳೆ | ಜನತಾ ನ್ಯೂ&#
ಒಲಂಪಿಕ್ಸ್ : ಕಂಚು ಗೆದ್ದ ಪಿ.ವಿ.ಸಿಂಧು, 2 ಪದಕ ಗೆದ್ದ ಪ್ರಥಮ ಭಾರತೀಯ ಮಹಿಳೆ | ಜನತಾ ನ್ಯೂ&#
ವಿಹಾರಕ್ಕೆ ಬಂದಿದ್ದ ಸ್ನೇಹಿತರ ತಂಡ, ಯುವತಿಯೋರ್ವಳು ನೀರುಪಾಲು, ಮೂವರ ರಕ್ಷಣೆ | ಜನತಾ ನ್ಯೂ&#
ವಿಹಾರಕ್ಕೆ ಬಂದಿದ್ದ ಸ್ನೇಹಿತರ ತಂಡ, ಯುವತಿಯೋರ್ವಳು ನೀರುಪಾಲು, ಮೂವರ ರಕ್ಷಣೆ | ಜನತಾ ನ್ಯೂ&#
ರಾಜಕೀಯ ಮುಖ್ಯವಲ್ಲ, ಜನರ ಹಿತವೇ ನನಗೆ ಮುಖ್ಯ: ಎಂ.ಪಿ.ರೇಣುಕಾಚಾರ್ಯ | ಜನತಾ ನ್ಯೂ&#
ರಾಜಕೀಯ ಮುಖ್ಯವಲ್ಲ, ಜನರ ಹಿತವೇ ನನಗೆ ಮುಖ್ಯ: ಎಂ.ಪಿ.ರೇಣುಕಾಚಾರ್ಯ | ಜನತಾ ನ್ಯೂ&#
ಪ್ರವಾಹ: ರಾಜ್ಯ ಸರ್ಕಾರದಿಂದ 510 ಕೋಟಿ ರೂ. ಬಿಡುಗಡೆ, ಸಿಎಂ ಬೊಮ್ಮಾಯಿ ಘೋ‍ಷಣೆ | ಜನತಾ ನ್ಯೂ&#
ಪ್ರವಾಹ: ರಾಜ್ಯ ಸರ್ಕಾರದಿಂದ 510 ಕೋಟಿ ರೂ. ಬಿಡುಗಡೆ, ಸಿಎಂ ಬೊಮ್ಮಾಯಿ ಘೋ‍ಷಣೆ | ಜನತಾ ನ್ಯೂ&#
ವಿದ್ಯಾರ್ಥಿನಿಯರಿಗೆ ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ ಆರೋಪ! | ಜನತಾ ನ್ಯೂ&#
ವಿದ್ಯಾರ್ಥಿನಿಯರಿಗೆ ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ ಆರೋಪ! | ಜನತಾ ನ್ಯೂ&#
ಮುಖ್ಯಮಂತ್ರಿ ಆಗಬೇಕೆಂದು ಗಡ್ಡಬಿಟ್ಟಿದ್ದಲ್ಲ: ಸಿ.ಟಿ.ರವಿ | ಜನತಾ ನ್ಯೂ&#
ಮುಖ್ಯಮಂತ್ರಿ ಆಗಬೇಕೆಂದು ಗಡ್ಡಬಿಟ್ಟಿದ್ದಲ್ಲ: ಸಿ.ಟಿ.ರವಿ | ಜನತಾ ನ್ಯೂ&#
2022ರ ಮಾರ್ಚ್​ನಲ್ಲಿ
2022ರ ಮಾರ್ಚ್​ನಲ್ಲಿ "ಗಡ್ಡಧಾರಿ ವ್ಯಕ್ತಿ" ರಾಜ್ಯದ ಸಿಎಂ ಆಗ್ತಾರೆ: ಕುತೂಹಲ ಮೂಡಿಸಿದ ಭವಿಷ್ಯವಾಣಿ | ಜನತಾ ನ್ಯೂ&#
ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಷ್ಟಕಾಲ ಬಂದ್ರೆ ನನ್ನ ಸಪೋರ್ಟ್ ಇದೆ : ಹೆಚ್​​ಡಿಡಿ | ಜನತಾ ನ್ಯೂ&#
ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಷ್ಟಕಾಲ ಬಂದ್ರೆ ನನ್ನ ಸಪೋರ್ಟ್ ಇದೆ : ಹೆಚ್​​ಡಿಡಿ | ಜನತಾ ನ್ಯೂ&#
ಬೊಮ್ಮಾಯಿಗೆ ಹೈಕಮಾಂಡ್ ದಿಢೀರ್ ಬುಲಾವ್: ಮತ್ತೆ ದೆಹಲಿಗೆ ತೆರಳಿದ ಸಿಎಂ ಬೊಮ್ಮಾಯಿ | ಜನತಾ ನ್ಯೂ&#
ಬೊಮ್ಮಾಯಿಗೆ ಹೈಕಮಾಂಡ್ ದಿಢೀರ್ ಬುಲಾವ್: ಮತ್ತೆ ದೆಹಲಿಗೆ ತೆರಳಿದ ಸಿಎಂ ಬೊಮ್ಮಾಯಿ | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 37 ಸಾವು, 1,987 ಹೊಸ ಪ್ರಕರಣ : ಬೆಂಗಳೂರಿನಲ್ಲಿ 450 | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 37 ಸಾವು, 1,987 ಹೊಸ ಪ್ರಕರಣ : ಬೆಂಗಳೂರಿನಲ್ಲಿ 450 | ಜನತಾ ನ್ಯೂ&#
ಕೋವಿಡ್ 3ನೇ ಅಲೆ: ಗಡಿಗಳಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ! | ಜನತಾ ನ್
ಕೋವಿಡ್ 3ನೇ ಅಲೆ: ಗಡಿಗಳಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ! | ಜನತಾ ನ್

ನ್ಯೂಸ್ MORE NEWS...