july24-20.jpeg

ಮಂಗಳೂರು ರ್‍ಯಾಗಿಂಗ್‌ ಪ್ರಕರಣ: 6 ವಿದ್ಯಾರ್ಥಿಗಳ ಬಂಧನ | ಜನತಾ ನ್ಯೂಸ್

16 Jul 2021
500

ಮಂಗಳೂರು : ನಗರದ ಫಳ್ನೀರ್‌ನ ಇಂದಿರಾ ಕಾಲೇಜಿನಲ್ಲಿ ರ್‍ಯಾಗಿಂಗ್‌ ಪ್ರಕರಣ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಗಳಾದ ಶ್ರೀಲಾಲ್, ಶಾಹಿದ್, ಅಮ್ಜದ್, ಜುರೈಜ್, ಹುಸೈನ್, ಲಿಮ್ಸ್ ಅವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಜು.14ರಂದು ರಾತ್ರಿ 8 ಗಂಟೆಗೆ ನಗರದ ಫಳ್ನೀರ್ ರಸ್ತೆಯ ಹೊಟೇಲ್‌ವೊಂದಕ್ಕೆ ರ್‍ಯಾಗಿಂಗ್‌ಗೆ ಒಳಗಾದ ಸಂತ್ರಸ್ತ ಮ್ಯಾನುಯಲ್ ಬಾಬು (21) ಎಂಬವರು ತನ್ನ ಸ್ನೇಹಿತರಾದ ಜೋಬಿನ್ ಹಾಗೂ ಶಾಕೀರ್ ಅವರ ಜೊತೆಗೆ ಊಟಕ್ಕಾಗಿ ತೆರಳಿದ್ದಾರೆ.

ಈ ಸಮಯ ಪರಿಚಯಸ್ಥರಾದ ಇಂದಿರಾ ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀಲಾಲ್, ಜುರೈಜ್, ರಸೆಲ್ ಅವರ ಪೈಕಿ ಶ್ರೀಲಾಲ್ ಸಂತ್ರಸ್ತ ಮ್ಯಾನುಯಲ್‌ನ್ನು ಉದ್ದೇಶಿಸಿ, "ಏನು ಮುಖ ನೋಡುತ್ತಿಯಾ, ನೀವು ಜೂನಿಯರ್‌ಗಳು, ನಾವು ಬರುವಾಗ ಎದ್ದು ನಿಂತು ಗೌರವ ಕೊಡಬೇಕು" ಎಂದು ರ್‍ಯಾಗಿಂಗ್‌ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ನಂತರ ರಾತ್ರಿ 10:30ರ ಸುಮಾರಿಗೆ ಅತ್ತಾವರದ ಅಪಾರ್ಟ್‌ಮೆಂಟ್‌ನ ರೂಮಿನಲ್ಲಿ ಮ್ಯಾನುಯಲ್ ಇದ್ದ ಸಂದರ್ಭ ಆರು ಆರೋಪಿಗಳು ಮಾರಕಾಯುಧ ಸಹಿತ ಆಗಮಿಸಿದ್ದಾರೆ.

ಏಕಾಏಕಿ ರೂಮನ್ನು ಪ್ರವೇಶಿಸಿದ ಆರೋಪಿಗಳು ಈತನಿಗೆ ಪುನಃ ನಿಂದಿಸಿದ್ದಾರೆ. ಬಳಿಕ ಬಟ್ಟೆಗಳನ್ನು ತೆಗೆದು ಒಳವಸ್ತ್ರದಲ್ಲಿ ನಿಲ್ಲಲು, ಪದೇಪದೇ ಕುಳಿತುಕೊಳ್ಳಲು, ಎದ್ದುನಿಲ್ಲಲು ಹೇಳಿದ್ದಾರೆ. ಇದಕ್ಕೆ ಒಪ್ಪದೇ ಇದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೈದಿದ್ದಾರೆ. ಅಲ್ಲದೆ, ಆರೋಪಿಗಳು ಜೀವ ಬೆದರಿಕೆಯನ್ನೂ ಒಡ್ಡಿದ್ದರು ಎನ್ನಲಾಗಿದೆ.

ಹಲ್ಲೆಯಿಂದ ಗಾಯಗೊಂಡಿದ್ದ ವಿದ್ಯಾರ್ಥಿಗಳು ವೆನ್ಲಾಕ್‌ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ಆರೋಪಿಗಳಿಗೆ ಹೆದರಿ ಆಸ್ಪತ್ರೆಯಿಂದ ತೆರಳಿದ್ದರು. ಮನೆಗೆ ಹೋಗಿ ತಿಳಿಸಿದಾಗ, ಪಾಲಕರು ದೂರು ಕೊಡುವಂತೆ ಸಲಹೆ ನೀಡಿದ್ದರು. ಅದರಂತೆ ರ್‍ಯಾಗಿಂಗ್‌ಗೆ ಒಳಗಾದ ವಿದ್ಯಾರ್ಥಿಗಳು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದರು.

logo
RELATED TOPICS:
English summary :Mangalore

ಕೋವಿಡ್-19 ನಿಂದ ರಾಜ್ಯಾದ್ಯಂತ 22 ಸಾವು, 1,001 ಹೊಸ ಪ್ರಕರಣ : ಬೆಂಗಳೂರಿನಲ್ಲಿ 165 | ಜನತಾ ನ್ಯೂ&#

ಹಿಮಾಚಲ ಪ್ರದೇಶದಲ್ಲಿ ಬಂಡೆಗಳೊಂದಿಗೆ ಭೂಕುಸಿತ : 9 ಪ್ರವಾಸಿಗಳ ಸಾವು, ಹಲವರಿಗೆ ಗಾಯ | ಜನತಾ ನ್ಯೂ&#

ಮೂರು ತಿಂಗಳಲ್ಲಿ 6 ಕೋಟಿ ಜನರಿಗೆ ಕೋವಿಡ್ ಲಸಿಕೆ: ಡಾ.ಕೆ.ಸುಧಾಕರ್  | ಜನತಾ ನ್ಯೂ&#

ಬಾಕಿ ಪರಿಹಾರ ಬಿಡುಗಡೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ | ಜನತಾ ನ್ಯೂ&#

ಬೆಳಗಾವಿ ಜಿಲ್ಲೆಯಲ್ಲಿ 1,240 ಮನೆಗಳಿಗೆ ಹಾನಿ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ | ಜನತಾ ನ್ಯೂ&#

ರಾಜ್ಯದಲ್ಲಿ ಭಾರೀ ಮಳೆ: ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಹದಿಂದ 81 ಗ್ರಾಮಗಳಿಗೆ ಹಾನಿ | ಜನತಾ ನ್ಯೂ&#

ನಾಯಕತ್ವ ಬದಲಾವಣೆ ವಿಚಾರ ಕೇವಲ ಊಹಾಪೋಹವಷ್ಟೆ : ಬೊಮ್ಮಾಯಿ | ಜನತಾ ನ್ಯೂ&#

ಮಾಸ್ಕ್ ಇಲ್ಲದೆ ಸೈಕಲ್ ತುಳಿದ ಸಂಸದ ತೇಜಸ್ವಿ ಸೂರ್ಯ: ಸಾಮಾಜಿಕ ಜಾಲತಾಣದಲ್ಲಿ ಜನರ ಪ್ರಶ್ನೆ | ಜನತಾ ನ್ಯೂ&#

ಹೈ ಕಮಾಂಡ್‍ನಿಂದ ಇನ್ನೂ ಸಂದೇಶ ಬಂದಿಲ್ಲ: ಸಿಎಂ ಯಡಿಯೂರಪ್ಪ | ಜನತಾ ನ್ಯೂ&#

ನಾನು ರಾಜಕಾರಣದಲ್ಲಿ ಖುಷಿ ಕಂಡವ ಅಲ್ಲ; ರಾಜಕೀಯಕ್ಕೆ ಬರುವ ಇಚ್ಛೆ ಇರಲಿಲ್ಲ: ಕಟೀಲ್ | ಜನತಾ ನ್ಯೂ&#

ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ: ಕೋಟ ಶ್ರೀನಿವಾಸ ಪೂಜಾರಿ | ಜನತಾ ನ್ಯೂ&#

ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗೋಣ ಬನ್ನಿ: ಬಿಜೆಪಿಗೆ ಡಿ.ಕೆ. ಶಿವಕುಮಾರ್ ಸವಾಲು | ಜನತಾ ನ್ಯೂ&#

ಟ್ರ್ಯಾಕ್ಟರ್ ನಲ್ಲಿ ಬಂದು ಪಾಲಿಕೆ ಆಯುಕ್ತರ ಮನೆ ಮುಂದೆ ಕಸ ಸುರಿದ ಬಿಜೆಪಿ ಶಾಸಕ! | ಜನತಾ ನ್ಯೂ&#

ಟೋಕಿಯೊ ಒಲಿಂಪಿಕ್ಸ್: ಪ್ರಿ ಕ್ವಾರ್ಟರ್ ಫೈನಲ್ ತಲುಪಿದ ಮೇರಿ ಕೋಮ್ | ಜನತಾ ನ್ಯೂ&#

ಪ್ರಧಾನಿ ಮೋದಿ ಯವರ ಮನ್ ಕಿ ಬಾತ್‌  ಮುಖ್ಯಾಂಶ | ಜನತಾ ನ್ಯೂ&#

ನ್ಯೂಸ್ MORE NEWS...