ನಾನು ಬಿಜೆಪಿ ಪಕ್ಷದ ಮಾಲೀಕನಲ್ಲ, ನಾನು ಪಕ್ಷದ ಕಾರ್ಯಕರ್ತ: ಸಿ.ಟಿ.ರವಿ | ಜನತಾ ನ್ಯೂಸ್

17 Jul 2021
449

ಚಿಕ್ಕಮಗಳೂರು : ನಾನು ಬಿಜೆಪಿ ಪಕ್ಷದ ಮಾಲೀಕನಲ್ಲ, ನಾನು ಪಕ್ಷದ ಕಾರ್ಯಕರ್ತ.‌ ನಾನು ಯಾವತ್ತೂ ಮಾಲೀಕನ ರೀತಿ ವರ್ತನೆ ಮಾಡಿಲ್ಲ, ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಶಾಸಕ ಸಿ.ಟಿ‌. ರವಿ ಮೂಗಿನ ನೇರಕ್ಕೆ ಎಲ್ಲವೂ ನೆಡೆಯುತ್ತಿದೆ ಎಂದು ನೇರವಾಗಿ ಆರೋಪ ಮಾಡಿದ್ದ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿಕೆಗೆ ಚಿಕ್ಕಮಗಳೂರಿನ ಕಲ್ಯಾಣ ನಗರದಲ್ಲಿ ಓಪನ್ ಜಿಮ್ ಉದ್ಘಾಟನಾ ಸಂದರ್ಭದಲ್ಲಿ ಸಿ.ಟಿ. ರವಿ ಮಾತನಾಡಿದರು.

ಕಾಂಗ್ರೆಸ್ ನವರಿಗೆ ದೂರುವುದಕ್ಕೆ ಮೋದಿ ಬೇಕು. ಒಳ್ಳೆಯದಕ್ಕಾದರೆ ಮೋದಿ ಬೇಡ. ಗೂಸುಂಬೆ ರಾಜಕಾರಣದಿಂದ ಕಾಂಗ್ರೆಸ್ ಗೆ ಈ ಸ್ಥಿತಿ ಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದರು.

ಈಗ ಲಸಿಕೆ ರಾಜಕಾರಣ ಮಾಡುವುದು ಬೇಡ. ಈ ಹಿಂದೆ ಕಾಂಗ್ರೆಸ್ ನವರು ಲಸಿಕೆ ತೆಗೆದುಕೊಂಡರೆ ಮಕ್ಕಳಾಗಲ್ಲ ಎಂದಿದ್ದರು. ಆ ಸಮಯದಲ್ಲಿ ಸಿದ್ದರಾಮಯ್ಯ ಏನು ಹೇಳಿದ್ದರೆಂದು ಹೇಳಬೇಕಾ, ಡಿ ಕೆ ಶಿವಕುಮಾರ್ ಟ್ವೀಟ್ ತೋರಿಸಬೇಕಾ? ಜಾರ್ಖಂಡ್ ಆರೋಗ್ಯ ಸಚಿವರ ಹೇಳಿಕೆ ನೆನಪು ಮಾಡಬೇಕಾ ಎಂದು ಹೇಳಿದರು.

ಅವತ್ತು ಲಸಿಕೆ ವಿರುದ್ಧ ರಾಜಕಾರಣ ಮಾಡಿದರು. ಈಗ ಕಾಂಗ್ರೆಸ್ ನವರ ಎಡಬಿಡಂಗಿತನ ಹೇಗೆ ಎಂದರೆ ಪ್ರಧಾನಿ ಎಲ್ಲರಿಗೂ ಉಚಿತ ವಾಕ್ಸಿನ್ ಘೋಷಣೆ ಮಾಡಿದಾಗ ಕಾಂಗ್ರೆಸ್ ನವರು ಥ್ಯಾಂಕ್ಯೂ ಸುಪ್ರೀಂ ಕೋರ್ಟ್ ಎಂದರು. ಉಚಿತ ಲಸಿಕೆಯ ಕ್ರೆಡಿಟ್ ಮೋದಿ, ಬಿಜೆಪಿಗೆ ಹೋಗಬಹುದು ಅಂತ ಥ್ಯಾಂಕ್ಯೂ ಸುಪ್ರೀಂ ಕೋರ್ಟ್ ಅಂತಾ ರಾಜಕಾರಣ ಮಾಡಿದರು ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ನಾನು ಬಿಜೆಪಿ ಪಕ್ಷದ ಮಾಲೀಕನಲ್ಲ. ಎಂ.ಪಿ ಕುಮಾರಸ್ವಾಮಿ ನಮ್ಮ ಮಾಲೀಕರು. ನಾನು ಸದಾ ಕಾಲ ಪಕ್ಷದ ನಿಷ್ಠೆಯಿಂದ ಕೆಲಸ ಮಾಡುವವನು. ಹಾಗೇ ಏನಾದರೂ ಮಾಲೀಕತ್ವ ಪ್ರಶ್ನೆ ಬಂದರೆ ಕುಮಾರಸ್ವಾಮಿಯೇ ಮಾಲೀಕರು, ‌ನಾನು ಯಾವತ್ತೂ ಸಹ ಮಾಲೀಕನ ರೀತಿ ವರ್ತನೆ ಮಾಡಿಲ್ಲ ಎಂದರು.

ವರ್ಗಾವಣೆ ಆದೇಶವನ್ನು ಮಾಡುವ ಅಧಿಕಾರ ನನಗಿಲ್ಲ. ವರ್ಗಾವಣೆ ಶಿಫಾರಸ್ಸು ಯಾರು ಬಂದರು ಮಾಡುತ್ತೇನೆ. ಒಳ್ಳೆಯ ಅಧಿಕಾರಿಗಳು ನಮ್ಮ ಜಿಲ್ಲೆಗೆ ಬರಬೇಕು ಎನ್ನುವುದಷ್ಟೇ ಉದ್ದೇಶ. ಎಂ.ಪಿ ಕುಮಾರಸ್ವಾಮಿಯವರ ಜೊತೆ ನಾನು ಮಾತನಾಡುತ್ತೇನೆ ಎಂದರು.

RELATED TOPICS:
English summary :CT Ravi

ಅಮೆಜಾನ್ ಗೋಡನ್ ಕಳ್ಳತನ: ₹10 ಲಕ್ಷ ಹಣವಿದ್ದ ಲಾಕರ್​ ಪತ್ತೆ ಹಚ್ಚಿದ ಡಾಗ್​ ಸ್ಕ್ವಾಡ್ | ಜನತಾ ನ್ಯೂ&#
ಅಮೆಜಾನ್ ಗೋಡನ್ ಕಳ್ಳತನ: ₹10 ಲಕ್ಷ ಹಣವಿದ್ದ ಲಾಕರ್​ ಪತ್ತೆ ಹಚ್ಚಿದ ಡಾಗ್​ ಸ್ಕ್ವಾಡ್ | ಜನತಾ ನ್ಯೂ&#
ಆಡುವ ವೇಳೆ ಗಣೇಶ ಮೂರ್ತಿಯನ್ನೇ ನುಂಗಿದ ಮೂರು ವರ್ಷದ ಮಗು! | ಜನತಾ ನ್ಯೂ&#
ಆಡುವ ವೇಳೆ ಗಣೇಶ ಮೂರ್ತಿಯನ್ನೇ ನುಂಗಿದ ಮೂರು ವರ್ಷದ ಮಗು! | ಜನತಾ ನ್ಯೂ&#
ಮನೆಯಲ್ಲಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಎಎಸ್​ಐ ಆತ್ಮಹತ್ಯೆಗೆ ಶರಣು! | ಜನತಾ ನ್ಯೂ&#
ಮನೆಯಲ್ಲಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಎಎಸ್​ಐ ಆತ್ಮಹತ್ಯೆಗೆ ಶರಣು! | ಜನತಾ ನ್ಯೂ&#
ಇರುವಕ್ಕಿ ನೂತನ ಕೃಷಿ ಮತ್ತು ತೋಟಗಾರಿಕಾ ವಿವಿಗೆ
ಇರುವಕ್ಕಿ ನೂತನ ಕೃಷಿ ಮತ್ತು ತೋಟಗಾರಿಕಾ ವಿವಿಗೆ "ಕೆಳದಿ ಶಿವಪ್ಪ ನಾಯಕ" ಹೆಸರು ಘೋಷಿಸಿದ ಬಿಎಸ್ ಯಡಿಯೂರಪ್ಪ | ಜನತಾ ನ್ಯೂ&#
ಯಡಿಯೂರಪ್ಪ ಬಳಿಕ ಮತ್ತೊಬ್ಬ ಭ್ರಷ್ಟ ಸಿಎಂ ಬರುತ್ತಾರೆ: ಸಿದ್ದರಾಮಯ್ಯ | ಜನತಾ ನ್ಯೂ&#
ಯಡಿಯೂರಪ್ಪ ಬಳಿಕ ಮತ್ತೊಬ್ಬ ಭ್ರಷ್ಟ ಸಿಎಂ ಬರುತ್ತಾರೆ: ಸಿದ್ದರಾಮಯ್ಯ | ಜನತಾ ನ್ಯೂ&#
ಕೇರಳದಲ್ಲಿ ಹೆಚ್ಚಿದ ಪ್ರಕರಣ, ಗಡಿ ಚೆಕ್ ಪೋಸ್ಟ್‌ಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದ ತಮಿಳುನಾಡು ಸರ್ಕಾರ | ಜನತಾ ನ್ಯೂ&#
ಕೇರಳದಲ್ಲಿ ಹೆಚ್ಚಿದ ಪ್ರಕರಣ, ಗಡಿ ಚೆಕ್ ಪೋಸ್ಟ್‌ಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದ ತಮಿಳುನಾಡು ಸರ್ಕಾರ | ಜನತಾ ನ್ಯೂ&#
Tokyo Olympics: ವೇಯ್ಟ್​​​ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು! | ಜನತಾ ನ್ಯೂ&#
Tokyo Olympics: ವೇಯ್ಟ್​​​ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು! | ಜನತಾ ನ್ಯೂ&#
ಗುರು ಪೂರ್ಣಿಮೆ 2021: ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ | ಜನತಾ ನ್ಯೂ&#
ಗುರು ಪೂರ್ಣಿಮೆ 2021: ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ | ಜನತಾ ನ್ಯೂ&#
ಪ್ರವಾಹ ಪರಿಸ್ಥಿತಿ ಅವಲೋಕನ: ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ‌ ಬೆಳಗಾವಿ ಪ್ರವಾಸ! | ಜನತಾ ನ್ಯೂ&#
ಪ್ರವಾಹ ಪರಿಸ್ಥಿತಿ ಅವಲೋಕನ: ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ‌ ಬೆಳಗಾವಿ ಪ್ರವಾಸ! | ಜನತಾ ನ್ಯೂ&#
ಬೈಕ್​ ಉಳಿಸಿಕೊಳ್ಳಲು ಹೋದ ಯುವಕ ತಾನೇ ಕೊಚ್ಚಿಹೋದ! | ಜನತಾ ನ್ಯೂ&#
ಬೈಕ್​ ಉಳಿಸಿಕೊಳ್ಳಲು ಹೋದ ಯುವಕ ತಾನೇ ಕೊಚ್ಚಿಹೋದ! | ಜನತಾ ನ್ಯೂ&#
ರಾಜ್ಯದಲ್ಲಿ ಇನ್ನೂ 3 ದಿನ ಮಳೆ:  9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್! | ಜನತಾ ನ್ಯೂ&#
ರಾಜ್ಯದಲ್ಲಿ ಇನ್ನೂ 3 ದಿನ ಮಳೆ: 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್! | ಜನತಾ ನ್ಯೂ&#
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಶವ ಪತ್ತೆ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ | ಜನತಾ ನ್ಯೂ&#
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಶವ ಪತ್ತೆ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ | ಜನತಾ ನ್ಯೂ&#

ನ್ಯೂಸ್ MORE NEWS...