ಬೈಕ್ ಉಳಿಸಿಕೊಳ್ಳಲು ಹೋದ ಯುವಕ ತಾನೇ ಕೊಚ್ಚಿಹೋದ! | ಜನತಾ ನ್ಯೂಸ್
ಬೆಳಗಾವಿ : ಬೈಕ್ ಸವಾರನೊಬ್ಬ ಬೈಕ್ ಅನ್ನು ಉಳಿಸಿಕೊಳ್ಳಲು ಹೋಗಿ ತಾನೇ ಕೊಚ್ಚಿಹೋದ ಘಟನೆ ಬೆಳಗಾವಿ ತಾಲೂಕಿನ ನಾನಾವಾಡಿಯಲ್ಲಿ ಸಂಭವಿಸಿದೆ.
ನಾನಾವಾಡಿ ಹೊರವಲಯದ ಹಳ್ಳ ದಾಟುವಾಗ ಬೈಕ್ ಸವಾರ ಅಪಾಯಕ್ಕೆ ಸಿಲುಕಿದ್ದ. ಕೂಡಲೇ ಸ್ಥಳೀಯರು ಯುವಕನ ರಕ್ಷಣೆಗೆ ಧಾವಿಸಿದ್ದರಾದರೂ ಬೈಕ್ ಜತೆಯೇ ಹಳ್ಳದ ದಡ ಹರಸಾಹಸ ಪಡುತ್ತಿದ್ದ ಯುವಕ ನೀರಿನ ರಭಸಕ್ಕೆ ನೀರಲ್ಲಿ ಕೊಚ್ಚಿಹೋದ ದೃಶ್ಯ ವೈರಲ್ ಆಗಿದೆ.
ಯುವಕನ ರಕ್ಷಣೆ ಮಾಡಲು ಸಹಾಯಕ್ಕೆಂದು ಯುವಕನೋರ್ವ ಮುಂದಾದನಾದರೂ ಕೈ ಜಾರಿ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ ಎನ್ನಲಾಗಿದೆ. ಯುವಕನಿಗಾಗಿ ಹುಡುಕಾಟ ಮುಂದುವರೆದಿದೆ.
English summary :Belagavi