ವಾಂತಿ ಮಾಡಲು ಹೋದ ಮಹಿಳೆ ಬಸ್​ನಿಂದ ಬಿದ್ದು ಸಾವು! | ಜನತಾ ನ್ಯೂಸ್

06 Aug 2021
472

ಚಾಮರಾಜನಗರ : ಕೆಎಸ್​ಆರ್​ಟಿಸಿ ಬಸ್ಸಿನ ಬಾಗಿಲು ಬಳಿ ನಿಂತು ವಾಂತಿ ಮಾಡಲು ಹೋದ ಮಹಿಳೆ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ಸಂಭವಿಸಿದೆ.

ತಾಲೂಕಿನ ಮಲೆ ಮಹದೇಶ್ವರಬೆಟ್ಟ ಸಮೀಪದ ಹಳೆಯೂರು ಗ್ರಾಮದ ಕುಳ್ಳಮಾದಿ(50) ಎಂಬಾಕೆ ಮೃತ ದುರ್ದೈವಿಯಾಗಿದ್ದು, ಈಕೆ ಗುರುವಾರ(ಆಗಸ್ಟ್ 5) ಸಂಜೆ ಮಲೆ ಮಹದೇಶ್ವರಬೆಟ್ಟದಿಂದ ವಡಕೆಹಳ್ಳ ಗ್ರಾಮದ ಸಂಬಂಧಿಕರ ಮನೆಯತ್ತ ಹೊರಡಲು ಕರಾರಸಾಸಂ ಬಸ್ಸು ಹತ್ತಿದ್ದರು.

ಈ ಬಸ್​ ಮೈಸೂರು ಹಾಗೂ ಕೆ.ಆರ್. ಪೇಟೆ ಮಾರ್ಗದತ್ತ ಹೊರಟಿತ್ತು. ಬಸ್​ ಸಂಚರಿಸುತ್ತಿರುವಾಗಲೇ ವಾಂತಿ ಬರುತ್ತಿದೆ ಎಂದು ಬಸ್​ನ ಬಾಗಿಲ ಬಳಿ ಹೋಗಿದ್ದಾಳೆ. ಬೆಟ್ಟದ ಶನೇಶ್ವರಸ್ವಾಮಿ ದೇವಸ್ಥಾನದ ತಿರುವಿನಲ್ಲಿ ಬಸ್​ನಿಂದ ಕೆಳಗೆ ಬಿದ್ದ ಕುಳ್ಳಮಾದಿ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಕೊನೆಯುಸಿರೆಳೆದರು.

ಆನಂತರ ಮೃತದೇಹವನ್ನು ಅದೇ ವಾಹನದಲ್ಲಿ ಕೊಂಡೊಯ್ದು ಮಲೆ ಮಹದೇಶ್ವರ ಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. ಬಳಿಕ ಆಕೆಯ ಜೊತೆಯಲ್ಲಿದ್ದ ಸಂಬಂಧಿ ಕೆಂಪಮಾದಮ್ಮ ನೀಡಿದ ದೂರಿನನ್ವಯ ಮ.ಬೆಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೃತದೇಹವನ್ನು ಶವಪರೀಕ್ಷೆ ನಡೆಸಿ ರಾತ್ರಿ ತಡವಾಗಿ ನೀಡಲಾಗಿದೆ. ಕಾಂಡಚಿನ ಭಾಗದಲ್ಲಿ ಇರುವ ಹಳೇಯೂರು ಗ್ರಾಮಕ್ಕೆ ಕೊಂಡು ಹೋಗಲು, ಮೃತನ ಸಂಬಂಧಿಕರು 108ಗೆ ಕರೆ ಮಾಡಿ ಕೇಳಿದಾಗ ಸೇವೆ ವಾಹನ ಲಭ್ಯವಾಗಿಲ್ಲ. ಪ್ರಾಥಮಿಕ ಆರೋಗ್ಯ ತುರ್ತುವಾಹನ ಇದ್ದರೂ‌ ಚಾಲಕನಿಲ್ಲದೆ ಉಪಯೋಗಕ್ಕೆ ಬಂದಿಲ್ಲ.

ಕೊನೆಗೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಮೃತದೇಹವನ್ನು ಬಟ್ಟೆಯ ನೆನೆಯಲ್ಲಿ ಜೋಕಲಿ ಕಟ್ಟಿಕೊಂಡು ಹೆಗಲ ಮೇಲೆ ಹೋತ್ತು ರಾತ್ರಿ ಸುಮಾರು 8 ಕಿ.ಮೀ ಸಾಗಿ ಗ್ರಾಮ ತಲುಪಿದರು.

ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉಂಟಾದ ಈ ಅವ್ಯವಸ್ಥೆಗೆ ಸಾರ್ವಜನಿಕವಾಗಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.

RELATED TOPICS:
English summary :Chamarajanagar

ವಿಚ್ಛೇದನ ಪಡೆದ ಪತ್ನಿಗೆ ಜೀವನಾಂಶ ಹಣ ನೀಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ! | ಜನತಾ ನ್ಯೂ&#
ವಿಚ್ಛೇದನ ಪಡೆದ ಪತ್ನಿಗೆ ಜೀವನಾಂಶ ಹಣ ನೀಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ! | ಜನತಾ ನ್ಯೂ&#
ರಾಜಧಾನಿ ಬೆಂಗಳೂರಿನಲ್ಲಿ ಸ್ಪೋಟ : ಕನಿಷ್ಠ 3 ಸಾವು, ಹಲವರಿಗೆ ಗಾಯ | ಜನತಾ ನ್ಯೂ&#
ರಾಜಧಾನಿ ಬೆಂಗಳೂರಿನಲ್ಲಿ ಸ್ಪೋಟ : ಕನಿಷ್ಠ 3 ಸಾವು, ಹಲವರಿಗೆ ಗಾಯ | ಜನತಾ ನ್ಯೂ&#
ಅಮೇರಿಕ ವಿಮಾನಯಾನದಲ್ಲಿ ಕಚೇರಿ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿ : ವೈರಲ್ ಚಿತ್ರ | ಜನತಾ ನ್ಯೂ&#
ಅಮೇರಿಕ ವಿಮಾನಯಾನದಲ್ಲಿ ಕಚೇರಿ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿ : ವೈರಲ್ ಚಿತ್ರ | ಜನತಾ ನ್ಯೂ&#
ಬೆಂಗಳೂರು ಕ್ಯಾಬ್ ಚಾಲಕನ ಮೇಲೆ ಅತ್ಯಾಚಾರ ಆರೋಪ: ಬಂಧನ | ಜನತಾ ನ್ಯೂ&#
ಬೆಂಗಳೂರು ಕ್ಯಾಬ್ ಚಾಲಕನ ಮೇಲೆ ಅತ್ಯಾಚಾರ ಆರೋಪ: ಬಂಧನ | ಜನತಾ ನ್ಯೂ&#
ನಮ್ಮ ಮೆಟ್ರೋ 3ನೇ ಹಂತಕ್ಕೆ ಶೀಘ್ರ ಚಾಲನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ | ಜನತಾ ನ್ಯೂ&#
ನಮ್ಮ ಮೆಟ್ರೋ 3ನೇ ಹಂತಕ್ಕೆ ಶೀಘ್ರ ಚಾಲನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ | ಜನತಾ ನ್ಯೂ&#
ಅಣ್ಣನ ಸಾವಿನ ಸುದ್ದಿ ಕೇಳಿ ತಂಗಿಯೂ ವಿಧಿವಶ! | ಜನತಾ ನ್ಯೂ&#
ಅಣ್ಣನ ಸಾವಿನ ಸುದ್ದಿ ಕೇಳಿ ತಂಗಿಯೂ ವಿಧಿವಶ! | ಜನತಾ ನ್ಯೂ&#
ಪ್ರಧಾನಿ ಮೋದಿ ಅಮೇರಿಕ ಪ್ರವಾಸ ಆರಂಭ : ಪಾಲ್ಗೊಳ್ಳುವ ಸಭೆಗಳ, ಕಾರ್ಯತಂತ್ರದ ಸಂಪೂರ್ಣ ವಿವರ | ಜನತಾ ನ್
ಪ್ರಧಾನಿ ಮೋದಿ ಅಮೇರಿಕ ಪ್ರವಾಸ ಆರಂಭ : ಪಾಲ್ಗೊಳ್ಳುವ ಸಭೆಗಳ, ಕಾರ್ಯತಂತ್ರದ ಸಂಪೂರ್ಣ ವಿವರ | ಜನತಾ ನ್
ಕಳಚಿ ಬಿದ್ದ ತಮ್ಮ ಪಂಚೆ ಬಗ್ಗೆ ಸಭೆಗೆ ತಿಳಿಸಿ, ನಗೆಗಡಲಲ್ಲಿ ತೇಲಿಸಿದ ಸಿದ್ದರಾಮಯ್ಯ | ಜನತಾ ನ್
ಕಳಚಿ ಬಿದ್ದ ತಮ್ಮ ಪಂಚೆ ಬಗ್ಗೆ ಸಭೆಗೆ ತಿಳಿಸಿ, ನಗೆಗಡಲಲ್ಲಿ ತೇಲಿಸಿದ ಸಿದ್ದರಾಮಯ್ಯ | ಜನತಾ ನ್
ಅಫ್ಘಾನಿಸ್ತಾನದ ಗಡಿ ಪ್ರವೇಶಿಸಿದ ಟ್ರಕ್ ಗಳ ಪಾಕಿಸ್ತಾನದ ಬಾವುಟ ಕಿತ್ತು ಹರಿದ ತಾಲಿಬಾನಿಗಳು | ಜನತಾ ನ್ಯೂ&#
ಅಫ್ಘಾನಿಸ್ತಾನದ ಗಡಿ ಪ್ರವೇಶಿಸಿದ ಟ್ರಕ್ ಗಳ ಪಾಕಿಸ್ತಾನದ ಬಾವುಟ ಕಿತ್ತು ಹರಿದ ತಾಲಿಬಾನಿಗಳು | ಜನತಾ ನ್ಯೂ&#
ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್! | ಜನತಾ ನ್ಯೂ&#
ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್! | ಜನತಾ ನ್ಯೂ&#
ರಾಜ್ಯದಲ್ಲಿಂದು 818 ಮಂದಿಗೆ ಕೋವಿಡ್ ಸೋಂಕು ದೃಢ, 1,414 ಡಿಸ್ಚಾರ್ಜ್! | ಜನತಾ ನ್ಯೂ&#
ರಾಜ್ಯದಲ್ಲಿಂದು 818 ಮಂದಿಗೆ ಕೋವಿಡ್ ಸೋಂಕು ದೃಢ, 1,414 ಡಿಸ್ಚಾರ್ಜ್! | ಜನತಾ ನ್ಯೂ&#
ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್​ ದಾಳಿ, ಲಾಡ್ಜ್‌ನಲ್ಲಿ ಸುರಂಗ! | ಜನತಾ ನ್ಯೂ&#
ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್​ ದಾಳಿ, ಲಾಡ್ಜ್‌ನಲ್ಲಿ ಸುರಂಗ! | ಜನತಾ ನ್ಯೂ&#

ನ್ಯೂಸ್ MORE NEWS...