ಸದ್ಯದಲ್ಲೇ ಕೆಜಿಎಫ್​ ಬಳಿ ತಲೆ ಎತ್ತಲಿರುವ ಬೃಹತ್ ಕೈಗಾರಿಕಾ ಟೌನ್ ಶಿಪ್! | ಜನತಾ ನ್ಯೂಸ್

11 Aug 2021
519

ನವದೆಹಲಿ : ಕೋಲಾರ ಜಿಲ್ಲೆ ಕೆಜಿಎಫ್ ನ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ವ್ಯಾಪ್ತಿಯಲ್ಲಿ ಬಳಕೆಯಾಗದೆ ಇರುವ ಜಮೀನಿನಲ್ಲಿ ಕೈಗಾರಿಕಾ ಟೌನ್‍ಶಿಪ್ ( ಇಂಡಸ್ಟ್ರಿಯಲ್ ಟೌನ್‍ಶಿಪ್) ಪ್ರಾರಂಭಿಸಲು ಅನುಮತಿ ನೀಡುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಸಂಬಂಧ ಬುಧವಾರ ನವದೆಹಲಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ನಿರಾಣಿಯವರು, ಕೆಜಿಎಪ್ ನಲ್ಲಿ ಟೌನ್‍ಶಿಪ್ ನಿರ್ಮಾಣದ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟರು.

ಕೆಜಿಎಪ್ ನ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ವ್ಯಾಪ್ತಿಗೆ ಬರುವ ಸುಮಾರು 3212 ಎಕರೆ ಪ್ರದೇಶದಲ್ಲಿ ಕೇಂದ್ರ ಸರ್ಕಾರವು ಡ್ರೋಣ್ ಮೂಲಕ ಸಮೀಕ್ಷೆ ನಡೆಸಿದ್ದುಘಿ, ಇಲ್ಲಿ ಗಣಿಗಾರಿಕೆ ನಡೆಸಲು ಸೂಕ್ತವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ಬಳಕೆಯಾಗದೆ ಉಳಿದಿರುವ ಜಮೀನಿನಲ್ಲಿ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣ ಮಾಡಲು ಅನುಮತಿ ನೀಡುವಂತೆ ಸಚಿವರಿಗೆ ವಸ್ತುಸ್ಥಿತಿಯನ್ನು ನಿರಾಣಿ ಅವರು ವಿವರಿಸಿದರು. ಟೌನ್‍ಶಿಪ್ ನಿರ್ಮಾಣವಾದರೆ ಈ ಭಾಗದಲ್ಲಿ ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಅನುಕೂಲವಾಗುತ್ತದೆ. ಅಲ್ಲದೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಸುತ್ತಮುತ್ತಲ ಭಾಗಗಳಲ್ಲಿ ಉದ್ಯೋಗ ಸೃಷ್ಟಿಸಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕೆಜಿಎಫ್ ನಗರವು ರಾಜಧಾನಿ ಬೆಂಗಳೂರಿನಿಂದ ಸುಮಾರು 100 ಕಿ.ಮೀ ವ್ಯಾಪ್ತಿಯಲ್ಲಿದ್ದು, ವಿಶ್ವದರ್ಜೆಯ ರಾಷ್ಟ್ರೀಯ ಹೆದ್ದಾರಿಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅತ್ಯುತ್ತಮ ರೈಲ್ವೆ ಸಂಪರ್ಕ ಹೊಂದಿದೆ. ಅಲ್ಲದೆ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಕೂಡ ಇಲ್ಲಿಯೇ ಹಾದು ಹೋಗುವುದರಿಂದ ಕೈಗಾರಿಕಾ ಬೆಳವಣಿಗೆಗೆ ಸಾಕಷ್ಟು ಸಹಕಾರಿಯಾಗಲಿದೆ. ಟೌನ್‍ಶಿಪ್ ನಿರ್ಮಾಣ ಮಾಡಲು ಯೋಗ್ಯವಾಗಿರುವುದರಿಂದ ನಮ್ಮ ಮನವಿಯನ್ನು ಪರಿಗಣಿಸಬೇಕೆಂದು ಕೋರಿದರು.

ಸಚಿವ ನಿರಾಣಿಯವರ ಕೋರಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ ಅವರು ಸದ್ಯದಲ್ಲಿಯೇ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ವಸ್ತುಸ್ಥಿತಿ ಅಧ್ಯಯನ ನಡೆಸುವಂತೆ ಸೂಚನೆ ನೀಡಲಾಗುವುದು. ಕೆಜಿಎಫ್​ನಲ್ಲಿ ಕೈಗಾರಿಕಾ ಟೌನ್‍ಶಿಪ್ ಸ್ಥಾಪನೆ ಮಾಡಲು ಕೇಂದ್ರದಿಂದ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ಭರವಸೆ ಕೊಟ್ಟರು.

RELATED TOPICS:
English summary :Industrial Township

ಅಫ್ಘಾನಿಸ್ತಾನದ ಗಡಿ ಪ್ರವೇಶಿಸಿದ ಟ್ರಕ್ ಗಳ ಪಾಕಿಸ್ತಾನದ ಬಾವುಟ ಕಿತ್ತು ಹರಿದ ತಾಲಿಬಾನಿಗಳು | ಜನತಾ ನ್ಯೂ&#
ಅಫ್ಘಾನಿಸ್ತಾನದ ಗಡಿ ಪ್ರವೇಶಿಸಿದ ಟ್ರಕ್ ಗಳ ಪಾಕಿಸ್ತಾನದ ಬಾವುಟ ಕಿತ್ತು ಹರಿದ ತಾಲಿಬಾನಿಗಳು | ಜನತಾ ನ್ಯೂ&#
ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್! | ಜನತಾ ನ್ಯೂ&#
ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್! | ಜನತಾ ನ್ಯೂ&#
ರಾಜ್ಯದಲ್ಲಿಂದು 818 ಮಂದಿಗೆ ಕೋವಿಡ್ ಸೋಂಕು ದೃಢ, 1,414 ಡಿಸ್ಚಾರ್ಜ್! | ಜನತಾ ನ್ಯೂ&#
ರಾಜ್ಯದಲ್ಲಿಂದು 818 ಮಂದಿಗೆ ಕೋವಿಡ್ ಸೋಂಕು ದೃಢ, 1,414 ಡಿಸ್ಚಾರ್ಜ್! | ಜನತಾ ನ್ಯೂ&#
ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್​ ದಾಳಿ, ಲಾಡ್ಜ್‌ನಲ್ಲಿ ಸುರಂಗ! | ಜನತಾ ನ್ಯೂ&#
ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್​ ದಾಳಿ, ಲಾಡ್ಜ್‌ನಲ್ಲಿ ಸುರಂಗ! | ಜನತಾ ನ್ಯೂ&#
ಚಿತ್ರದುರ್ಗ ಜಿಲ್ಲೆಯಲ್ಲಿ ಕ್ರೈಸ್ತ ಮಷನರಿಗಳಿಂದ ಮತಾಂತರ, ನನ್ನ ತಾಯಿಯನ್ನೇ ಮತಾಂತರ ಮಾಡಿದ್ದಾರೆ! | ಜನತಾ ನ್ಯೂ&#
ಚಿತ್ರದುರ್ಗ ಜಿಲ್ಲೆಯಲ್ಲಿ ಕ್ರೈಸ್ತ ಮಷನರಿಗಳಿಂದ ಮತಾಂತರ, ನನ್ನ ತಾಯಿಯನ್ನೇ ಮತಾಂತರ ಮಾಡಿದ್ದಾರೆ! | ಜನತಾ ನ್ಯೂ&#
ಬಿಎಸ್‌ಎಫ್‌ ಕ್ಯಾಂಪ್​ನ 51 ಯೋಧರಲ್ಲಿ ಕೋವಿಡ್ ಪಾಸಿಟಿವ್​! | ಜನತಾ ನ್ಯೂ&#
ಬಿಎಸ್‌ಎಫ್‌ ಕ್ಯಾಂಪ್​ನ 51 ಯೋಧರಲ್ಲಿ ಕೋವಿಡ್ ಪಾಸಿಟಿವ್​! | ಜನತಾ ನ್ಯೂ&#
ಫ್ಲ್ಯಾಟ್​ನಲ್ಲಿ ಸಿಲಿಂಡರ್​ ಸ್ಫೋಟಿಸಿ ಅಗ್ನಿ ಅವಘಡ, ಮಹಿಳೆಯೊಬ್ಬರ ಸಜೀವ ದಹನ | ಜನತಾ ನ್ಯೂ&#
ಫ್ಲ್ಯಾಟ್​ನಲ್ಲಿ ಸಿಲಿಂಡರ್​ ಸ್ಫೋಟಿಸಿ ಅಗ್ನಿ ಅವಘಡ, ಮಹಿಳೆಯೊಬ್ಬರ ಸಜೀವ ದಹನ | ಜನತಾ ನ್ಯೂ&#
ಗಣೇಶ ಮೂರ್ತಿ ವಿಸರ್ಜನೆಯಲ್ಲಿ ಭಾರಿ ಅಗೌರವ : 9 ನೌಕರರು ಕೆಲಸದಿಂದ ವಜಾ, 2 ಅಮಾನತು, ಎಫ್ಐಆರ್ ದಾಖಲು | ಜನತಾ ನ್ಯೂ&#
ಗಣೇಶ ಮೂರ್ತಿ ವಿಸರ್ಜನೆಯಲ್ಲಿ ಭಾರಿ ಅಗೌರವ : 9 ನೌಕರರು ಕೆಲಸದಿಂದ ವಜಾ, 2 ಅಮಾನತು, ಎಫ್ಐಆರ್ ದಾಖಲು | ಜನತಾ ನ್ಯೂ&#
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 26,115 ಪ್ರಕರಣ ಪತ್ತೆ, 252 ಮಂದಿ ಸಾವು! | ಜನತಾ ನ್ಯೂ&#
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 26,115 ಪ್ರಕರಣ ಪತ್ತೆ, 252 ಮಂದಿ ಸಾವು! | ಜನತಾ ನ್ಯೂ&#
ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ ಆರೋಪ: ತಹಶೀಲ್ದಾರ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲು | ಜನತಾ ನ್ಯೂ&#
ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ ಆರೋಪ: ತಹಶೀಲ್ದಾರ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲು | ಜನತಾ ನ್ಯೂ&#
ರೈತರ ಪ್ರತಿಭಟನೆಗಳಿಗೆ ಕಾಂಗ್ರೆಸ್ ಅಥವಾ ದೇಶದಲ್ಲಿರುವ ವಿದೇಶಿ ಏಜೆಂಟರೇ ಪ್ರಾಯೋಜಕರು - ಸಿಎಂ ಬೊಮ್ಮಾಯಿ | ಜನತಾ ನ್ಯೂ&#
ರೈತರ ಪ್ರತಿಭಟನೆಗಳಿಗೆ ಕಾಂಗ್ರೆಸ್ ಅಥವಾ ದೇಶದಲ್ಲಿರುವ ವಿದೇಶಿ ಏಜೆಂಟರೇ ಪ್ರಾಯೋಜಕರು - ಸಿಎಂ ಬೊಮ್ಮಾಯಿ | ಜನತಾ ನ್ಯೂ&#
ರಾಜ್ಯದಲ್ಲಿಂದು 677 ಮಂದಿಗೆ ಕೊರೊನಾ ದೃಢ! | ಜನತಾ ನ್ಯೂ&#
ರಾಜ್ಯದಲ್ಲಿಂದು 677 ಮಂದಿಗೆ ಕೊರೊನಾ ದೃಢ! | ಜನತಾ ನ್ಯೂ&#

ನ್ಯೂಸ್ MORE NEWS...