ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ, ಯಾವುದೇ ಸಂದರ್ಭದಲ್ಲಿ ಪತನವಾಗಬಹುದು! | ಜನತಾ ನ್ಯೂಸ್

14 Aug 2021
482

ಬೆಂಗಳೂರು : ಈ ಸರ್ಕಾರ ಅವಧಿ ಪೂರ್ಣಗೊಳಿಸುವುದು ಡೌಟ್ ಯಾವ ಟೈಮನಲ್ಲಿ ಬೇಕಿದ್ದರೂ ಬೀಳಬಹುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನ ಶಿವಾನಂದ ವೃತ್ತದ ಬಳಿಯಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಸವನಗೌಡ ಪಾಟೀಲ್ ಯತ್ನಾಳ, ಅರವಿಂದ ಬೆಲ್ಲದ್, ರಾಮದಾಸ ಮತ್ತಿತರ ಶಾಸಕರು ದೆಹಲಿಗೆ ಹೋಗಿ ಬಂದು ಮಾಡುತ್ತಿದ್ದಾರೆ. ಹೀಗಾಗಿ ಈ ಸರ್ಕಾರ ಬಹಳ ದಿನ ಬಾಳುವುದಿಲ್ಲ ಎಂದರು.

ನಾಳೆ 75 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ. ಅನೇಕ ಜನರ ಹೋರಾಟದ ಫಲದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು, ನಾವು ಸ್ವಾತಂತ್ರ್ಯದ ಫಲಾನುಭವಿಗಳಾಗಿದ್ದೇವೆ. ಮಹಾತ್ಮ ಗಾಂಧೀಜಿ, ಮೌಲಾನಾ, ಸುಭಾಶ್ಚಂದ್ರ ಬೋಸ್, ತಿಲಕರು ಸೇರಿದಂತೆ ಹಲವಾರು ಜನರು ಯಾವುದೇ ಅಧಿಕಾರದ ಆಸೆಯಿಲ್ಲದೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಅವರೆಲ್ಲರಿಗೂ ನಾನು ನಮನಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಕೋವಿಡ್ ಮೂರನೇ ಅಲೆ ಆರಂಭವಾಗುತ್ತಿದೆ. ಕೊಡಗು, ದಕ್ಷಿಣ ಕನ್ನಡ, ಮೈಸೂರು ಸೇರಿದಂತೆ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಮೂರನೇ ಅಲೆಯಿಂದ ಜನ ತೊಂದರೆಗೆ ಒಳಗಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ವಾರಾಂತ್ಯದ ಲಾಕ್‌ ಡೌನ್ ಘೋಷಣೆ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಸೋಂಕು ಹರಡದಂತೆ ಮುಂಜಾಗ್ರತೆ ವಹಿಸುವುದು ಉತ್ತಮ ಎಂದು ಅವರು ಹೇಳಿದರು.

ಕೊರೊನಾ ನಿಯಂತ್ರಣಕ್ಕೆ ಬಾರದಿದ್ದರೆ ಶಾಲೆ ಓಪನ್ ಮಾಡುವುದು ಬೇಡ. ಕೊರೊನಾ ಕಡಿಮೆ ಆದರೆ ಶಾಲೆ ಓಪನ್ ಮಾಡಿ, ಇಲ್ಲದಿದ್ದರೆ ಬೇಡ. ಗುಂಪು ಸೇರುವ ಕಾರ್ಯಕ್ರಮಗಳಿಗೆ ಅನುಮತಿ ಕೊಡಬೇಡಿ. ಹಬ್ಬ - ಜಾತ್ರೆಗಳನ್ನ ಒಂದು ವರ್ಷ ಮಾಡದಿದ್ದರೆ ಏನು ಸಮಸ್ಯೆ ಆಗಲ್ಲ. ಈ ಬಾರಿ ಮನೆಯಲ್ಲಿಯೇ ಗಣಪತಿ ಕೂರಿಸಿ, ಹಬ್ಬ ಆಚರಿಸಿ ಎಂದು ಜನತೆಗೆ ಸಲಹೆ ನೀಡಿದರು.

RELATED TOPICS:
English summary :Siddaramaiah

ಅಫ್ಘಾನಿಸ್ತಾನದ ಗಡಿ ಪ್ರವೇಶಿಸಿದ ಟ್ರಕ್ ಗಳ ಪಾಕಿಸ್ತಾನದ ಬಾವುಟ ಕಿತ್ತು ಹರಿದ ತಾಲಿಬಾನಿಗಳು | ಜನತಾ ನ್ಯೂ&#
ಅಫ್ಘಾನಿಸ್ತಾನದ ಗಡಿ ಪ್ರವೇಶಿಸಿದ ಟ್ರಕ್ ಗಳ ಪಾಕಿಸ್ತಾನದ ಬಾವುಟ ಕಿತ್ತು ಹರಿದ ತಾಲಿಬಾನಿಗಳು | ಜನತಾ ನ್ಯೂ&#
ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್! | ಜನತಾ ನ್ಯೂ&#
ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್! | ಜನತಾ ನ್ಯೂ&#
ರಾಜ್ಯದಲ್ಲಿಂದು 818 ಮಂದಿಗೆ ಕೋವಿಡ್ ಸೋಂಕು ದೃಢ, 1,414 ಡಿಸ್ಚಾರ್ಜ್! | ಜನತಾ ನ್ಯೂ&#
ರಾಜ್ಯದಲ್ಲಿಂದು 818 ಮಂದಿಗೆ ಕೋವಿಡ್ ಸೋಂಕು ದೃಢ, 1,414 ಡಿಸ್ಚಾರ್ಜ್! | ಜನತಾ ನ್ಯೂ&#
ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್​ ದಾಳಿ, ಲಾಡ್ಜ್‌ನಲ್ಲಿ ಸುರಂಗ! | ಜನತಾ ನ್ಯೂ&#
ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್​ ದಾಳಿ, ಲಾಡ್ಜ್‌ನಲ್ಲಿ ಸುರಂಗ! | ಜನತಾ ನ್ಯೂ&#
ಚಿತ್ರದುರ್ಗ ಜಿಲ್ಲೆಯಲ್ಲಿ ಕ್ರೈಸ್ತ ಮಷನರಿಗಳಿಂದ ಮತಾಂತರ, ನನ್ನ ತಾಯಿಯನ್ನೇ ಮತಾಂತರ ಮಾಡಿದ್ದಾರೆ! | ಜನತಾ ನ್ಯೂ&#
ಚಿತ್ರದುರ್ಗ ಜಿಲ್ಲೆಯಲ್ಲಿ ಕ್ರೈಸ್ತ ಮಷನರಿಗಳಿಂದ ಮತಾಂತರ, ನನ್ನ ತಾಯಿಯನ್ನೇ ಮತಾಂತರ ಮಾಡಿದ್ದಾರೆ! | ಜನತಾ ನ್ಯೂ&#
ಬಿಎಸ್‌ಎಫ್‌ ಕ್ಯಾಂಪ್​ನ 51 ಯೋಧರಲ್ಲಿ ಕೋವಿಡ್ ಪಾಸಿಟಿವ್​! | ಜನತಾ ನ್ಯೂ&#
ಬಿಎಸ್‌ಎಫ್‌ ಕ್ಯಾಂಪ್​ನ 51 ಯೋಧರಲ್ಲಿ ಕೋವಿಡ್ ಪಾಸಿಟಿವ್​! | ಜನತಾ ನ್ಯೂ&#
ಫ್ಲ್ಯಾಟ್​ನಲ್ಲಿ ಸಿಲಿಂಡರ್​ ಸ್ಫೋಟಿಸಿ ಅಗ್ನಿ ಅವಘಡ, ಮಹಿಳೆಯೊಬ್ಬರ ಸಜೀವ ದಹನ | ಜನತಾ ನ್ಯೂ&#
ಫ್ಲ್ಯಾಟ್​ನಲ್ಲಿ ಸಿಲಿಂಡರ್​ ಸ್ಫೋಟಿಸಿ ಅಗ್ನಿ ಅವಘಡ, ಮಹಿಳೆಯೊಬ್ಬರ ಸಜೀವ ದಹನ | ಜನತಾ ನ್ಯೂ&#
ಗಣೇಶ ಮೂರ್ತಿ ವಿಸರ್ಜನೆಯಲ್ಲಿ ಭಾರಿ ಅಗೌರವ : 9 ನೌಕರರು ಕೆಲಸದಿಂದ ವಜಾ, 2 ಅಮಾನತು, ಎಫ್ಐಆರ್ ದಾಖಲು | ಜನತಾ ನ್ಯೂ&#
ಗಣೇಶ ಮೂರ್ತಿ ವಿಸರ್ಜನೆಯಲ್ಲಿ ಭಾರಿ ಅಗೌರವ : 9 ನೌಕರರು ಕೆಲಸದಿಂದ ವಜಾ, 2 ಅಮಾನತು, ಎಫ್ಐಆರ್ ದಾಖಲು | ಜನತಾ ನ್ಯೂ&#
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 26,115 ಪ್ರಕರಣ ಪತ್ತೆ, 252 ಮಂದಿ ಸಾವು! | ಜನತಾ ನ್ಯೂ&#
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 26,115 ಪ್ರಕರಣ ಪತ್ತೆ, 252 ಮಂದಿ ಸಾವು! | ಜನತಾ ನ್ಯೂ&#
ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ ಆರೋಪ: ತಹಶೀಲ್ದಾರ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲು | ಜನತಾ ನ್ಯೂ&#
ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ ಆರೋಪ: ತಹಶೀಲ್ದಾರ್ ಸೇರಿ ಐವರ ವಿರುದ್ಧ ಪ್ರಕರಣ ದಾಖಲು | ಜನತಾ ನ್ಯೂ&#
ರೈತರ ಪ್ರತಿಭಟನೆಗಳಿಗೆ ಕಾಂಗ್ರೆಸ್ ಅಥವಾ ದೇಶದಲ್ಲಿರುವ ವಿದೇಶಿ ಏಜೆಂಟರೇ ಪ್ರಾಯೋಜಕರು - ಸಿಎಂ ಬೊಮ್ಮಾಯಿ | ಜನತಾ ನ್ಯೂ&#
ರೈತರ ಪ್ರತಿಭಟನೆಗಳಿಗೆ ಕಾಂಗ್ರೆಸ್ ಅಥವಾ ದೇಶದಲ್ಲಿರುವ ವಿದೇಶಿ ಏಜೆಂಟರೇ ಪ್ರಾಯೋಜಕರು - ಸಿಎಂ ಬೊಮ್ಮಾಯಿ | ಜನತಾ ನ್ಯೂ&#
ರಾಜ್ಯದಲ್ಲಿಂದು 677 ಮಂದಿಗೆ ಕೊರೊನಾ ದೃಢ! | ಜನತಾ ನ್ಯೂ&#
ರಾಜ್ಯದಲ್ಲಿಂದು 677 ಮಂದಿಗೆ ಕೊರೊನಾ ದೃಢ! | ಜನತಾ ನ್ಯೂ&#

ನ್ಯೂಸ್ MORE NEWS...