ಮೇಕೆದಾಟು ಯೋಜನೆ ನಿಲ್ಲುವುದಿಲ್ಲ: ಅಶ್ವತ್ಥನಾರಾಯಣ | ಜನತಾ ನ್ಯೂಸ್

15 Aug 2021
582

ರಾಮನಗರ : ರಾಮನಗರ ಜಿಲ್ಲೆಯೂ ಸೇರಿ ರಾಜ್ಯದ ಪಾಲಿನ ಜೀವನಾಡಿ ಆಗಲಿರುವ ಮೇಕೆದಾಟು ಅಣೆಕಟ್ಟು ಯೋಜನೆಯಿಂದ ರಾಜ್ಯ ಸರಕಾರ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಉನ್ನತ ಶಿಕ್ಷಣ ಮತ್ತು ಐ.ಟಿ. ಬಿ.ಟಿ. ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಬೆಳಗ್ಗೆ 75ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರೆವೇರಿಸಿ ಭಾಷಣ ಮಾಡಿದ ಅವರು, "ಕುಡಿಯುವ ನೀರಿನ ಉದ್ದೇಶಕ್ಕಾಗಿ ಅನುಷ್ಠಾನವಾಗುತ್ತಿರುವ ಈ ಯೋಜನೆ ನಿಲ್ಲುವುದಿಲ್ಲ. ಈಗಾಗಲೇ ಯೋಜನೆಯ ಸಮಗ್ರ ಯೋಜನಾ ವರದಿ (ಡಿಪಿಆರ್)ಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ,' ಎಂದರು.

"ಆಯೋಗದಿಂದ ಒಪ್ಪಿಗೆ ಸಿಕ್ಕಿದ ಕೂಡಲೇ ಯೋಜನೆ ಕಾಮಗಾರಿ ಆರಂಭ ಮಾಡಲಾಗುವುದು ಎಂದ ಅವರು, ಈ ಯೋಜನೆಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಕೆಗೆ ಇದು ಅಗತ್ಯವಾದ ಯೋಜನೆ. ಈ ಯೋಜನೆಯನ್ನು ನೆರೆ ರಾಜ್ಯ ವಿರೋಧಿಸುವುದು ಸರಿಯಲ್ಲ. ಯಾರು ವಿರೋಧ ಮಾಡಿದರೂ ಯೋಜನೆ ನಿಲ್ಲುವುದೂ ಇಲ್ಲ," ಎಂದು ಸ್ಪಷ್ಟಪಡಿಸಿದರು.

ಮಿಳುನಾಡು ಸಹ ಕೇಂದ್ರ ಸರ್ಕಾರ ಕರ್ನಾಟಕದ ಪರ ಇದ್ದು, ನಮಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆರೋಪಿಸಿದೆ. ಯೋಜನೆಯಿಂದ ತಮಿಳುನಾಡಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅವರಿಗೆ ಸಲ್ಲಬೇಕಾದ ನೀರನ್ನು ಕಾಲಕಾಲಕ್ಕೆ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಹಕ್ಕು ನಾವು ಪಡೆದುಕೊಳ್ಳಲು ಯಾವ ಸಮಸ್ಯೆಯೂ ಇಲ್ಲ. ಈ ಬಗ್ಗೆ ಇರುವ ಕಾನೂನು ತೊಡಕನ್ನು ನಿವಾರಿಸಿಕೊಳ್ಳಲಾಗುವುದು ಎಂದರು.

ಯೋಜನೆಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಕೆಗೆ ಇದು ಅಗತ್ಯವಾದ ಯೋಜನೆ. ಈ ಯೋಜನೆಯನ್ನು ನೆರೆ ರಾಜ್ಯ ವಿರೋಧಿಸುವುದು ಸರಿಯಲ್ಲ. ಯಾರು ವಿರೋಧ ಮಾಡಿದರೂ ಯೋಜನೆ ನಿಲ್ಲುವುದೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

"ರಾಜ್ಯ ಸರಕಾರವು ಉನ್ನತ ಶಿಕ್ಷಣದಲ್ಲಿ ಶಿಕ್ಷಣ ನೀತಿಯನ್ನು ಇದೇ 2021- 22ನೇ ಶೈಕ್ಷಣಿಕ ಸಾಲಿನಿಂದಲೇ ಜಾರಿಗೊಳಿಸಲು ಆದೇಶ ಹೊರಡಿಸಿದೆ. ನೂತನ ನೀತಿಯಿಂದಾಗಿ ಮುಂಚೆ ಇದ್ದ ಬಿಗುವಿನ ಕಟ್ಟುಪಾಡುಗಳು ಹೊರಟು ಹೋಗಲಿವೆ. ಶಿಕ್ಷಣ ನೀತಿಯು ಬಹುಶಿಸ್ತುಗಳ ಕಲಿಕೆಯನ್ನು ಉತ್ತೇಜಿಸಲಿದೆ. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ವಿಷಯಗಳನ್ನು ಓದಿ- ಕಲಿತು ಮುಂದೆ ಬರಬಹುದಾಗಿದೆ" ಎಂದರು.

RELATED TOPICS:
English summary :Ashwath Narayan

ವಿಚ್ಛೇದನ ಪಡೆದ ಪತ್ನಿಗೆ ಜೀವನಾಂಶ ಹಣ ನೀಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ! | ಜನತಾ ನ್ಯೂ&#
ವಿಚ್ಛೇದನ ಪಡೆದ ಪತ್ನಿಗೆ ಜೀವನಾಂಶ ಹಣ ನೀಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ! | ಜನತಾ ನ್ಯೂ&#
ರಾಜಧಾನಿ ಬೆಂಗಳೂರಿನಲ್ಲಿ ಸ್ಪೋಟ : ಕನಿಷ್ಠ 3 ಸಾವು, ಹಲವರಿಗೆ ಗಾಯ | ಜನತಾ ನ್ಯೂ&#
ರಾಜಧಾನಿ ಬೆಂಗಳೂರಿನಲ್ಲಿ ಸ್ಪೋಟ : ಕನಿಷ್ಠ 3 ಸಾವು, ಹಲವರಿಗೆ ಗಾಯ | ಜನತಾ ನ್ಯೂ&#
ಅಮೇರಿಕ ವಿಮಾನಯಾನದಲ್ಲಿ ಕಚೇರಿ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿ : ವೈರಲ್ ಚಿತ್ರ | ಜನತಾ ನ್ಯೂ&#
ಅಮೇರಿಕ ವಿಮಾನಯಾನದಲ್ಲಿ ಕಚೇರಿ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿ : ವೈರಲ್ ಚಿತ್ರ | ಜನತಾ ನ್ಯೂ&#
ಬೆಂಗಳೂರು ಕ್ಯಾಬ್ ಚಾಲಕನ ಮೇಲೆ ಅತ್ಯಾಚಾರ ಆರೋಪ: ಬಂಧನ | ಜನತಾ ನ್ಯೂ&#
ಬೆಂಗಳೂರು ಕ್ಯಾಬ್ ಚಾಲಕನ ಮೇಲೆ ಅತ್ಯಾಚಾರ ಆರೋಪ: ಬಂಧನ | ಜನತಾ ನ್ಯೂ&#
ನಮ್ಮ ಮೆಟ್ರೋ 3ನೇ ಹಂತಕ್ಕೆ ಶೀಘ್ರ ಚಾಲನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ | ಜನತಾ ನ್ಯೂ&#
ನಮ್ಮ ಮೆಟ್ರೋ 3ನೇ ಹಂತಕ್ಕೆ ಶೀಘ್ರ ಚಾಲನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ | ಜನತಾ ನ್ಯೂ&#
ಅಣ್ಣನ ಸಾವಿನ ಸುದ್ದಿ ಕೇಳಿ ತಂಗಿಯೂ ವಿಧಿವಶ! | ಜನತಾ ನ್ಯೂ&#
ಅಣ್ಣನ ಸಾವಿನ ಸುದ್ದಿ ಕೇಳಿ ತಂಗಿಯೂ ವಿಧಿವಶ! | ಜನತಾ ನ್ಯೂ&#
ಪ್ರಧಾನಿ ಮೋದಿ ಅಮೇರಿಕ ಪ್ರವಾಸ ಆರಂಭ : ಪಾಲ್ಗೊಳ್ಳುವ ಸಭೆಗಳ, ಕಾರ್ಯತಂತ್ರದ ಸಂಪೂರ್ಣ ವಿವರ | ಜನತಾ ನ್
ಪ್ರಧಾನಿ ಮೋದಿ ಅಮೇರಿಕ ಪ್ರವಾಸ ಆರಂಭ : ಪಾಲ್ಗೊಳ್ಳುವ ಸಭೆಗಳ, ಕಾರ್ಯತಂತ್ರದ ಸಂಪೂರ್ಣ ವಿವರ | ಜನತಾ ನ್
ಕಳಚಿ ಬಿದ್ದ ತಮ್ಮ ಪಂಚೆ ಬಗ್ಗೆ ಸಭೆಗೆ ತಿಳಿಸಿ, ನಗೆಗಡಲಲ್ಲಿ ತೇಲಿಸಿದ ಸಿದ್ದರಾಮಯ್ಯ | ಜನತಾ ನ್
ಕಳಚಿ ಬಿದ್ದ ತಮ್ಮ ಪಂಚೆ ಬಗ್ಗೆ ಸಭೆಗೆ ತಿಳಿಸಿ, ನಗೆಗಡಲಲ್ಲಿ ತೇಲಿಸಿದ ಸಿದ್ದರಾಮಯ್ಯ | ಜನತಾ ನ್
ಅಫ್ಘಾನಿಸ್ತಾನದ ಗಡಿ ಪ್ರವೇಶಿಸಿದ ಟ್ರಕ್ ಗಳ ಪಾಕಿಸ್ತಾನದ ಬಾವುಟ ಕಿತ್ತು ಹರಿದ ತಾಲಿಬಾನಿಗಳು | ಜನತಾ ನ್ಯೂ&#
ಅಫ್ಘಾನಿಸ್ತಾನದ ಗಡಿ ಪ್ರವೇಶಿಸಿದ ಟ್ರಕ್ ಗಳ ಪಾಕಿಸ್ತಾನದ ಬಾವುಟ ಕಿತ್ತು ಹರಿದ ತಾಲಿಬಾನಿಗಳು | ಜನತಾ ನ್ಯೂ&#
ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್! | ಜನತಾ ನ್ಯೂ&#
ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್! | ಜನತಾ ನ್ಯೂ&#
ರಾಜ್ಯದಲ್ಲಿಂದು 818 ಮಂದಿಗೆ ಕೋವಿಡ್ ಸೋಂಕು ದೃಢ, 1,414 ಡಿಸ್ಚಾರ್ಜ್! | ಜನತಾ ನ್ಯೂ&#
ರಾಜ್ಯದಲ್ಲಿಂದು 818 ಮಂದಿಗೆ ಕೋವಿಡ್ ಸೋಂಕು ದೃಢ, 1,414 ಡಿಸ್ಚಾರ್ಜ್! | ಜನತಾ ನ್ಯೂ&#
ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್​ ದಾಳಿ, ಲಾಡ್ಜ್‌ನಲ್ಲಿ ಸುರಂಗ! | ಜನತಾ ನ್ಯೂ&#
ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್​ ದಾಳಿ, ಲಾಡ್ಜ್‌ನಲ್ಲಿ ಸುರಂಗ! | ಜನತಾ ನ್ಯೂ&#

ನ್ಯೂಸ್ MORE NEWS...