ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರಕ್ಕೆ ಅನುಮತಿ, ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಅವಕಾಶ! | ಜನತಾ ನ್ಯೂಸ್
ಹಾಸನ : ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರಕ್ಕೆ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಿ ಹಾಸನ ಜಿಲ್ಲಾಧಿಕಾರಿ ಆರ್ ಗಿರೀಶ್ ಆದೇಶಿಸಿದ್ದಾರೆ.
ಕಾರು, ಜೀಪು, ಮಿನಿ ವ್ಯಾನ್, ದ್ವಿಚಕ್ರ ವಾಹನ, ಸಾರಿಗೆ ಬಸ್, 20 ಟನ್ ಸಾಮರ್ಥ್ಯದ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು, ಬುಲೆಟ್ ಟ್ಯಾಂಕರ್ಸ್, ಕಂಟೇನರ್ ಹಾಗೂ ಬೃಹತ್ ವಾಹನಗಳಿಗೆ ಸಂಚಾರ ನಿರ್ಬಂಧ ಮುಂದುವರಿದಿದೆ.
ಆದರೆ ಬುಲೆಟ್ ಟ್ಯಾಂಕರ್ಸ್, ಕಂಟೇನರ್ ಹಾಗು ಬೃಹತ್ ವಾಹನಗಳಿಗೆ ಸಂಚಾರ ನಿಷೇಧ ಮುಂದುವರೆಯಲಿದೆ. ಭಾರಿ ಮಳೆಯಿಂದ ದೋಣಿಗಾಲ್ ಬಳಿ ರಾಷ್ಟ್ರೀಯ ಹೆದ್ದಾರಿ75 ರಲ್ಲಿ ರಸ್ತೆ ಕುಸಿತವಾಗಿತ್ತು. ಈ ಕಾರಣದಿಂದ ಕಳೆದ ಒಂದು ತಿಂಗಳಿನಿಂದ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರಕ್ಕೆ ನಿಷೇಧ ವಿಧಿಸಲಾಗಿತ್ತು.
RELATED TOPICS:
English summary :Hasan