ಅಪಘಾತವಾದರೂ ಆಂಬುಲೆನ್ಸ್ನಲ್ಲಿ ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು! | ಜನತಾ ನ್ಯೂಸ್
ಉಡುಪಿ : ಅಪಘಾತದಲ್ಲಿ ಗಾಯಗೊಂಡರೂ ವಿದ್ಯಾರ್ಥಿಗಳಿಬ್ಬರು ಆಂಬುಲೆನ್ಸ್ನಲ್ಲಿ ಕಾಲೇಜಿಗೆ ತೆರಳಿ ಪರೀಕ್ಷೆ ಬರೆದಿದ್ದಾರೆ.
ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳಾದ ಮಸಾಯಿದ್ ಹಾಗೂ ವಾಜಿದ್ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೊಡಪಾಡಿಯಲ್ಲಿ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದರು.
ಪ್ರಥಮ ವರ್ಷದ ಪದವಿ ಪರೀಕ್ಷೆ ಬರೆಯಲು ಶಿರೂರಿನಿಂದ ಬೈಕ್ನಲ್ಲಿ ಬಂದಿದ್ದ ಮಸಾಯಿದ್, ಗಂಗೊಳ್ಳಿಗೆ ತೆರಳಿ ಅಲ್ಲಿಂದ ಸ್ನೇಹಿತ ವಾಜಿದ್ ಅವರನ್ನು ಕರೆದುಕೊಂಡು ಕಾಲೇಜಿಗೆ ತೆರಳುತ್ತಿದ್ದರು.
ಇದೇ ವೇಳೆ ಎದುರಿನಿಂದ ಬರುತ್ತಿದ್ದ ಇನ್ನೊಂದು ಬೈಕಿಗೆ ವಿದ್ಯಾರ್ಥಿಗಳಿದ್ದ ಬೈಕ್ ಢಿಕ್ಕಿಯಾಗಿದೆ. ವಿದ್ಯಾರ್ಥಿಗಳಿಗೆ ಅಪಘಾತವಾಗಿರುವುದನ್ನು ಗಮನಿಸಿದ ಗಂಗೊಳ್ಳಿಯ ಆಪತ್ಬಾಂಧವ ಎಂದೇ ಖ್ಯಾತರಾದ ಆಂಬುಲೆನ್ಸ್ ನಿರ್ವಾಹಕ ಇಬ್ರಾಹಿಂ ಗಂಗೊಳ್ಳಿ ಮತ್ತು ತಂಡ ತೀವ್ರ ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆನಂತರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಆಂಬುಲೆನ್ಸ್ನಲ್ಲಿಯೇ ಭಂಡಾರ್ಕರ್ ಕಾಲೇಜು ವಿದ್ಯಾರ್ಥಿಗಳು ತೆರಳಿದ್ದಾರೆ. ಇಬ್ಬರೂ ಪದವಿ ವಿದ್ಯಾರ್ಥಿಗಳು ಪರೀಕ್ಷೆ ಬರೆದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.