ಜೋಕಾಲಿ ಆಡುವಾಗ ಬಾಲಕ ಸಾವು! | ಜನತಾ ನ್ಯೂಸ್
ಹಾಸನ : ಜೋಕಾಲಿ ಆಟವಾಡುವ ಸಂದರ್ಭದಲ್ಲಿ ಕುತ್ತಿಗೆಗೆ ಹಗ್ಗ ಸಿಲುಕಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.
ಮನೋಜ್ (8), ಮೃತಪಟ್ಟ ಬಾಲಕ, ಪೋಷಕರು ಕೃಷಿ ಕಾರ್ಯಕ್ಕೆಂದು ಮಗುವನ್ನು ಮನೆಯಲ್ಲಿ ಬಿಟ್ಟು ತೆರಳಿದ್ದರು.
ಈ ವೇಳೆ ಮನೆಯಲ್ಲಿ ಕಟ್ಟಿದ ಜೋಕಾಲಿಯಲ್ಲಿ ಮಗು ಆಟವಾಡುವ ಸಂದರ್ಭದಲ್ಲಿ, ಕುತ್ತಿಗೆಗೆ ಹಗ್ಗ ಸಿಲುಕಿಕೊಂಡು, ಮನೋಜ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
English summary :Hasan