ಸೆ. 13 ರಿಂದ 24 ಮುಂಗಾರು ಅಧಿವೇಶನ, 10 ದಿನಗಳ ಕಾಲ ವಿಧಾನಸಭೆ ಅಧಿವೇಶನ | ಜನತಾ ನ್ಯೂಸ್

08 Sep 2021
433

ಬೆಂಗಳೂರು : ಸೆಪ್ಟೆಂಬರ್ 13 ರಿಂದ 24 ರವರೆಗೆ ಹತ್ತು ದಿನಗಳ ಕಾಲ ಕರ್ನಾಟಕದ 15ನೇ ವಿಧಾನಸಭೆಯ 10ನೇ ಅಧಿವೇಶನ ನಡೆಯಲಿದೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

15ನೇ ವಿಧಾನಸಭೆಯ 10ನೇ ಅಧಿವೇಶನ ಸೆಪ್ಟೆಂಬರ್ 13 ರಿಂದ 24ರ ವರೆಗೆ ನಡೆಯಲಿದ್ದು, ಕಲಾಪ ನಡೆಯುವ ವೇಳೆ ಸಿಎಂ ಒಳಗೊಂಡಂತೆ ಎಲ್ಲಾ ಸಚಿವರು, ಶಾಸಕರು ಕಡ್ಡಾಯವಾಗಿ ಹಾಜರಿರಬೇಕೆಂದು ಮನವಿ ಮಾಡಿರುವುದಾಗಿ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಅಧಿವೇಶನ ಯಶಸ್ವಿಯಾಗಿ ನಡೆಯಲು ಆಡಳಿತ ಹಾಗೂ ಪ್ರತಿಪಕ್ಷದವರ ಸಹಕಾರ ಕೋರುತ್ತೇನೆ ಎಂದರು.

ಅಧಿವೇಶನದಲ್ಲಿ ಚರ್ಚೆಯಾಗಲು ಇದುವರೆಗೂ 18 ಬಿಲ್‌ಗಳು ಬಂದಿವೆ. ನಾಲ್ಕು ಪೆಂಡಿಂಗ್​ ಇರುವ ಬಿಲ್​ಗಳಿವೆ. ಕಾರ್ಯದರ್ಶಿಗಳಿಗೆ ಪತ್ರ ಬರೆದು ಎಲ್ಲಾ ಸದಸ್ಯರಿಗೂ ಬಿಲ್ ಕಾಪಿ ಕೊಡಲು ಹೇಳಿದ್ದೇನೆ. ಇನ್ನು ಮೇಲೆ ಬರುವ ಬಿಲ್‌ಗಳ ಬಗ್ಗೆ ಏನು ಮಾಡಬೇಕು ಅಂತ ಸಂಬಂಧಿಸಿದವರ ಜೊತೆ ಚರ್ಚಿಸುತ್ತೇನೆ ಎಂದರು. ಸಭಾಧ್ಯಕ್ಷನಾಗಿ ಮೊದಲೇ ಬರಬೇಕು. ಎಲ್ಲಾ ವಿಧೇಯಕಗಳು ಸದನದಲ್ಲಿ ಮಂಡನೆಯಾಗುವಂತೆ ಮಾಡಬೇಕು. ಸರ್ಕಾರವೂ ಸಹ ಅಷ್ಟೇ ಕಾಳಜಿಯಿಂದ ಸ್ಪಂದಿಸಬೇಕು ಎಂದರು.

ಅಧಿವೇಶನ 10 ದಿನ ಇರಲಿದೆ. ಬಜೆಟ್ ಅಧಿವೇಶನದ ಬಳಿಕ ನಡೆಯುತ್ತಿದೆ. ಸದನವನ್ನು ಗಂಭೀರವಾಗಿ ನಡೆಸಲು ನಿರ್ಧರಿಸಿದ್ದು, ಸಿಎಂ, ವಿಪಕ್ಷ ನಾಯಕರು ಹಾಗೂ ಎಲ್ಲಾ ಶಾಸಕರಿಗೆ ಮನವಿ ಮಾಡಿದ್ದೇನೆ. ಯಾರೂ ಗೈರಾಗದೆ ಕಡ್ಡಾಯವಾಗಿ ಭಾಗಿಯಾಗಬೇಕು ಎಂದು ಸೂಚಿಸಿದರು.

ಸಾರ್ವಜನಿಕರ ವೀಕ್ಷಣೆಗೆ ಅವಕಾಶ: ಕೋವಿಡ್‌ ಕಾರಣದಿಂದ ವಿಧಾನಸಭೆಯ ಕಲಾಪ ವೀಕ್ಷಣೆಗೆ ಸಾರ್ವಜನಿಕರು ಬರುವುದನ್ನು ನಿರ್ಬಂಧಿಸಲಾಗಿತ್ತು. ಈ ಬಾರಿ ಸಾರ್ವಜನಿಕರ ವೀಕ್ಷಣೆಗೆ ಅನುಮತಿ ನೀಡಲಾಗಿದೆ ಎಂದು ಸ್ಪೀಕರ್‌ ತಿಳಿಸಿದರು.

RELATED TOPICS:
English summary :Bangalore

ವಿಚ್ಛೇದನ ಪಡೆದ ಪತ್ನಿಗೆ ಜೀವನಾಂಶ ಹಣ ನೀಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ! | ಜನತಾ ನ್ಯೂ&#
ವಿಚ್ಛೇದನ ಪಡೆದ ಪತ್ನಿಗೆ ಜೀವನಾಂಶ ಹಣ ನೀಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ! | ಜನತಾ ನ್ಯೂ&#
ರಾಜಧಾನಿ ಬೆಂಗಳೂರಿನಲ್ಲಿ ಸ್ಪೋಟ : ಕನಿಷ್ಠ 3 ಸಾವು, ಹಲವರಿಗೆ ಗಾಯ | ಜನತಾ ನ್ಯೂ&#
ರಾಜಧಾನಿ ಬೆಂಗಳೂರಿನಲ್ಲಿ ಸ್ಪೋಟ : ಕನಿಷ್ಠ 3 ಸಾವು, ಹಲವರಿಗೆ ಗಾಯ | ಜನತಾ ನ್ಯೂ&#
ಅಮೇರಿಕ ವಿಮಾನಯಾನದಲ್ಲಿ ಕಚೇರಿ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿ : ವೈರಲ್ ಚಿತ್ರ | ಜನತಾ ನ್ಯೂ&#
ಅಮೇರಿಕ ವಿಮಾನಯಾನದಲ್ಲಿ ಕಚೇರಿ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿ : ವೈರಲ್ ಚಿತ್ರ | ಜನತಾ ನ್ಯೂ&#
ಬೆಂಗಳೂರು ಕ್ಯಾಬ್ ಚಾಲಕನ ಮೇಲೆ ಅತ್ಯಾಚಾರ ಆರೋಪ: ಬಂಧನ | ಜನತಾ ನ್ಯೂ&#
ಬೆಂಗಳೂರು ಕ್ಯಾಬ್ ಚಾಲಕನ ಮೇಲೆ ಅತ್ಯಾಚಾರ ಆರೋಪ: ಬಂಧನ | ಜನತಾ ನ್ಯೂ&#
ನಮ್ಮ ಮೆಟ್ರೋ 3ನೇ ಹಂತಕ್ಕೆ ಶೀಘ್ರ ಚಾಲನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ | ಜನತಾ ನ್ಯೂ&#
ನಮ್ಮ ಮೆಟ್ರೋ 3ನೇ ಹಂತಕ್ಕೆ ಶೀಘ್ರ ಚಾಲನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ | ಜನತಾ ನ್ಯೂ&#
ಅಣ್ಣನ ಸಾವಿನ ಸುದ್ದಿ ಕೇಳಿ ತಂಗಿಯೂ ವಿಧಿವಶ! | ಜನತಾ ನ್ಯೂ&#
ಅಣ್ಣನ ಸಾವಿನ ಸುದ್ದಿ ಕೇಳಿ ತಂಗಿಯೂ ವಿಧಿವಶ! | ಜನತಾ ನ್ಯೂ&#
ಪ್ರಧಾನಿ ಮೋದಿ ಅಮೇರಿಕ ಪ್ರವಾಸ ಆರಂಭ : ಪಾಲ್ಗೊಳ್ಳುವ ಸಭೆಗಳ, ಕಾರ್ಯತಂತ್ರದ ಸಂಪೂರ್ಣ ವಿವರ | ಜನತಾ ನ್
ಪ್ರಧಾನಿ ಮೋದಿ ಅಮೇರಿಕ ಪ್ರವಾಸ ಆರಂಭ : ಪಾಲ್ಗೊಳ್ಳುವ ಸಭೆಗಳ, ಕಾರ್ಯತಂತ್ರದ ಸಂಪೂರ್ಣ ವಿವರ | ಜನತಾ ನ್
ಕಳಚಿ ಬಿದ್ದ ತಮ್ಮ ಪಂಚೆ ಬಗ್ಗೆ ಸಭೆಗೆ ತಿಳಿಸಿ, ನಗೆಗಡಲಲ್ಲಿ ತೇಲಿಸಿದ ಸಿದ್ದರಾಮಯ್ಯ | ಜನತಾ ನ್
ಕಳಚಿ ಬಿದ್ದ ತಮ್ಮ ಪಂಚೆ ಬಗ್ಗೆ ಸಭೆಗೆ ತಿಳಿಸಿ, ನಗೆಗಡಲಲ್ಲಿ ತೇಲಿಸಿದ ಸಿದ್ದರಾಮಯ್ಯ | ಜನತಾ ನ್
ಅಫ್ಘಾನಿಸ್ತಾನದ ಗಡಿ ಪ್ರವೇಶಿಸಿದ ಟ್ರಕ್ ಗಳ ಪಾಕಿಸ್ತಾನದ ಬಾವುಟ ಕಿತ್ತು ಹರಿದ ತಾಲಿಬಾನಿಗಳು | ಜನತಾ ನ್ಯೂ&#
ಅಫ್ಘಾನಿಸ್ತಾನದ ಗಡಿ ಪ್ರವೇಶಿಸಿದ ಟ್ರಕ್ ಗಳ ಪಾಕಿಸ್ತಾನದ ಬಾವುಟ ಕಿತ್ತು ಹರಿದ ತಾಲಿಬಾನಿಗಳು | ಜನತಾ ನ್ಯೂ&#
ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್! | ಜನತಾ ನ್ಯೂ&#
ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್! | ಜನತಾ ನ್ಯೂ&#
ರಾಜ್ಯದಲ್ಲಿಂದು 818 ಮಂದಿಗೆ ಕೋವಿಡ್ ಸೋಂಕು ದೃಢ, 1,414 ಡಿಸ್ಚಾರ್ಜ್! | ಜನತಾ ನ್ಯೂ&#
ರಾಜ್ಯದಲ್ಲಿಂದು 818 ಮಂದಿಗೆ ಕೋವಿಡ್ ಸೋಂಕು ದೃಢ, 1,414 ಡಿಸ್ಚಾರ್ಜ್! | ಜನತಾ ನ್ಯೂ&#
ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್​ ದಾಳಿ, ಲಾಡ್ಜ್‌ನಲ್ಲಿ ಸುರಂಗ! | ಜನತಾ ನ್ಯೂ&#
ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್​ ದಾಳಿ, ಲಾಡ್ಜ್‌ನಲ್ಲಿ ಸುರಂಗ! | ಜನತಾ ನ್ಯೂ&#

ನ್ಯೂಸ್ MORE NEWS...