ಕಾರವಾರದ ಯುವಕನಿಗೆ ನಿಫಾ ಸೋಂಕು ಶಂಕೆ! | ಜನತಾ ನ್ಯೂಸ್
ಕಾರವಾರ : ದಕ್ಷಿಣ ಕನ್ನಡ ಯುವಕನೋರ್ವನಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ. ನಿಫಾ ವೈರಸ್ ಟೆಸ್ಟಿಂಗ್ ಮಾಡುವ ಇಕ್ವಿಪ್‌ಮೆಂಟ್ ಕಿಟ್ ತಯಾರಿಸುತ್ತಿದ್ದ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದದ ಯುವಕನಿಗೆ ಈ ಭಯ ಕಾಡಿದೆ.
ಗೋವಾದಲ್ಲಿ ಖಾಸಗಿ ಲ್ಯಾಬೊಂದರಲ್ಲಿ ಮೈಕ್ರೋಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಕಾರವಾರ ಮೂಲದ ಯುವಕ ಕೆಲ ದಿನದ ಹಿಂದೆ ಬೈಕ್‌ನಲ್ಲಿ ಮನೆ ಬಂದಿದ್ದ. ಈ ವೇಳೆ ಮಳೆಯಲ್ಲಿ ಒದ್ದೆಯಾಗಿದ್ದು, ಸಹಜವಾಗಿ ಶೀತ, ಜ್ವರ ಬಾಧಿಸಿದೆ, ಇದರಿಂದ ಆತಂಕಿತನಾದ ಯುವಕ ತನಗೆ ನಿಫಾ ಬಂದಿದೆ ಎಂದು ಹೆದರಿ ಮಣಿಪಾಲದ ಆಸ್ಪತ್ರೆಗೆ ಬಂದಿದ್ದಾನೆ. ಅಲ್ಲಿಯೂ ಸಮಾಧಾನವಾಗದೆ ಮಂಗಳೂರಿಗೆ ಬಂದಿದ್ದಾನೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಯುವಕನ್ನು ತಪಾಸಣೆ ಮಾಡಿದ್ದಾರೆ, ಕೂಲಂಕಷವಾಗಿ ವಿಚಾರಿಸಿದ್ದಾರೆ, ಆತನಿಗೆ ನಿಫಾದ ಸೋಂಕು, ಲಕ್ಷಣ ಯಾವುದೂ ಇಲ್ಲ, ಲ್ಯಾಬ್‌ನಲ್ಲಿ ನಿಫಾ ವೈರಸ್ ಟೆಸ್ಟ್ ಕಿಟ್ ತಯಾರಿಸುವ ಸಂದರ್ಭ ಅದರಲ್ಲಿ ಆಯಕ್ಟೀವ್ ಕಂಟೆಟ್‌ಗಳನ್ನ ಹಾಕಲಾಗುತ್ತೆ. ಹೀಗಾಗಿ ಇಕ್ವಿಪ್‌ಮೆಂಟ್ ಕಿಟ್ ತಯಾರಿಸುವವರು ಪಿ.ಪಿ.ಇ ಕಿಟ್ ಧರಿಸುವುದು ಸೇರಿದಂತೆ ಎಲ್ಲಾ ಸುರಕ್ಷತಾ ಕ್ರಮವನ್ನು ಕೈಗೊಳ್ಳಲಾಗಿರುತ್ತದೆ.
ಆದರೂ ಸಹ ಯುವಕ ಆತಂಕ ವ್ಯಕ್ತಪಡಿಸಿರುವುದರಿಂದ ಯುವಕನನ್ನು ಈಗಾಗಲೇ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಲಾಗಿದೆ. ಆದರೆ ಯುವಕನಿಗೆ ಯಾವುದೇ ನಿಫಾ ಲಕ್ಷಣಗಳಿಲ್ಲ, ಆತ ಸ್ಥಿರವಾಗಿದ್ದಾನೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದ್ದಾರೆ.
ಈಗಾಗಲೇ ಯುವಕನ ಮನೆಯವರನ್ನು ಐಸೋಲೇಶನ್‌ನಲ್ಲಿ ಇಡಲಾಗಿದೆ. ಅವನು ಸಂಪರ್ಕ ಮಾಡಿದವರನ್ನು ಪತ್ತೆ ಹಚ್ಚಲಾಗಿದೆ. ಉಡುಪಿ ಮತ್ತು ಕಾರವಾರ ಜಿಲ್ಲಾಡಳಿತಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಚ್ಚರಿಕೆ ಸೂಚಿನೆ ನೀಡಲಾಗಿದೆ.