ಹಿಂದೂ ಹಿಂದೂ ಎನ್ನುವ ಬಿಜೆಪಿಯವರು ದೇವಸ್ಥಾನ ಒಡೆಯುತ್ತಿದ್ದಾರೆ: ರೇವಣ್ಣ | ಜನತಾ ನ್ಯೂಸ್
ಬೆಂಗಳೂರು : ಹಿಂದೂ ಹಿಂದೂ ಅಂತಾರೆ, ಇದೀಗ ಹಿಂದೂ ದೇವಸ್ಥಾನ ಒಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.
ನಂಜನಗೂಡಿನ ದೇವಸ್ಥಾನಕ್ಕೆ ತನ್ನದೇ ಆದ ಇತಿಹಾಸ ಇದೆ. ಪುರಾತನ ಕಾಲದಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ. ಸುಪ್ರೀಂಕೋರ್ಟ್ ಆದೇಶ ಪಾಲನೆ ಬೇಡ ಎಂದು ಹೇಳಲ್ಲ. ಆದರೆ ದೇವಸ್ಥಾನ ಸಮಿತಿ ಜೊತೆ ಚರ್ಚಿಸಬೇಕು ಮತ್ತು ಪರ್ಯಾಯ ದೇವಸ್ಥಾನ ನಿರ್ಮಿಸಿ ನಂತರ ತೆರವು ಮಾಡಲಿ ಎಂದು ಹೇಳಿದರು.
ಜೆಡಿಎಸ್ ಮುಳಗುವ ದೋಣಿ ಎನ್ನುತ್ತಿದ್ದರು. ಮುಳುಗುವಾಗ ಹೇಗೆ ಮೇಲೆತ್ತುವುದು ಎನ್ನುವುದು ಗೊತ್ತಿದೆ. ಸಮುದ್ರದ ಸಬ್ಮೆರಿನ್ ಮೆಷಿನ್ ನಮ್ಮ ಬಳಿ ಇದೆ. ಯಾವಾಗ ಹಡಗು ಮೇಲೆತ್ತುವುದು ಗೊತ್ತಿದೆ. ಯಾವಾಗ ಮೇಲೆತ್ತಬೇಕು, ಯಾವಾಗ ಮುಳುಗಿಸಬೇಕು ಗೊತ್ತಿದೆ ಎಂದರು.
English summary :Revanna