ರಾಜ್ಯಕ್ಕೆ ಸಾಗಿಸುತ್ತಿದ್ದ 7 ಕೋಟಿ ರೂ. ಮೌಲ್ಯದ ಅಡಿಕೆ ವಶಕ್ಕೆ! | ಜನತಾ ನ್ಯೂಸ್
ಬೆಳಗಾವಿ : ದೆಹಲಿ ಮತ್ತು ಅಹಮದಾಬಾದ್ಗೆ 7 ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಡಿಕೆಯನ್ನು ಮಂಗಳೂರು ವಲಯದ ಅಧಿಕಾರಿಗಳು ನೀಡಿದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಬೆಳಗಾವಿಯ ಕೇಂದ್ರ ವಾಣಿಜ್ಯ ಮತ್ತು ಅಬಕಾರಿ ಆಯುಕ್ತಾಲಯದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಜಿಎಸ್ಟಿ ಇಲ್ಲದೇ ಸಾಗಿಸಲಾಗುತ್ತಿದ್ದ ಸುಮಾರು 7 ಕೋಟಿ ರೂ. ಮೊತ್ತದ ಅಡಿಕೆ ತುಂಬಿದ 7 ಲಾರಿಗಳನ್ನು ಬೆಳಗಾವಿಯ ಕೇಂದ್ರೀಯ ಜಿಎಸ್ಟಿ ಮತ್ತು ಕೇಂದ್ರೀಯ ಅಬಕಾರಿ ಆಯುಕ್ತಾಲಯ ಜಪ್ತಿ ಮಾಡಿ 7 ಜನರನ್ನು ಬಂಧಿಸಿದೆ.
ಅಡಿಕೆಗೆ ಶೇ.5 ರಷ್ಟು ಜಿಎಸ್ಟಿ ನೀಡಬೇಕು. ಆದರೆ ಜಿಎಸ್ಟಿಯನ್ನು ತುಂಬದೇ ಬಹುದೊಡ್ಡ ತೆರಿಗೆ ವಂಚನೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ.
ಕೇಂದ್ರಿಯ ಜಿಎಸ್ಟಿ ಇಲಾಖೆಯ ಸಹಾಯಕ ಆಯುಕ್ತ ಅಜಿಂಕ್ಯ ಕಾಟಕರ ಅವರ ನೇತೃತ್ವದ ತಂಡ ನಡೆಸಿದ ಸಿನೀಮಿಯ ರೀತಿಯ ಕಾರ್ಯಾಚರಣೆಯಲ್ಲಿ ರಾಜೀವ್ ಹೆಗ್ಗಡೆ, ರಿಯಾಜ್ ಬೆಳಗಾಂವಕರ್, ಎಸ್ಪಿ ನಾಯಿಕ್, ಆಬೀದ್ಹುಸೇನ್ ನೇಸರಗಿ, ವಿಶ್ವನಾಥ್ ನಿಡಗುಂದಿ ಇನ್ನುಳಿದವರು ಭಾಗಿಯಾಗಿದ್ದರು.