20ಕ್ಕೂ ಅಧಿಕ ಹಸುಗಳನ್ನು ಬಾಳೆಹಣ್ಣಿನಲ್ಲಿ ವಿಷ ಬೆರೆಸಿ ಹತ್ಯೆ? | Janata news

ಕೊಡಗು: : 20ಕ್ಕೂ ಅಧಿಕ ಹಸುಗಳನ್ನು ಅಮಾನವೀಯವಾಗಿ ಕೊಂದುಹಾಕಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಕಾಫಿ ತೋಟಕ್ಕೆ ಬಂದಿರುವ ಹಸುಗಳಿಗೆ ಬಾಳೆ ಹಣ್ಣಿನಲ್ಲಿ ವಿಷ ಬೆರೆಸಿ ಸುಮಾರು ಏಳಕ್ಕೂ ಅಧಿಕ ಹಸುಗಳನ್ನು ಕೊಂದಿರುವ ಶಂಕೆ ಸಾರ್ವಜನಿಕರಲ್ಲಿ ಮೂಡಿದೆ.
ಹಸುಗಳ ಮೃತದೇಹಗಳನ್ನು ಟ್ರಾಕ್ಟರ್ ಸಹಾಯದಿಂದ ಎಸ್ಟೇಟ್ ಒಳಗೆ ಇರುವ ಚರಂಡಿಗೆ ಹಾಕಲಾಗಿದೆ. ತೋಟದೊಳಗೆ ಹಸುಗಳು ಸತ್ತು ಬಿದ್ದಿದ್ದು ಅವನ್ನು ಗುಂಡಿಗೆ ಹಾಕಿದ್ದೇವೆ ಎಂದು ತೋಟದ ವ್ಯವಸ್ಥಾಪಕರು ಸ್ಪಷ್ಟನೆ ನೀಡಿದ್ದಾರೆ.
ಕೊಡಗು ಜಿಲ್ಲೆ ಐಗೂರಿನ ಟಾಟಾ ಎಸ್ಟೇಟ್ನಲ್ಲಿ ಘಟನೆ ನಡೆದಿದ್ದು, 7 ಹಸುಗಳ ಕಳೇಬರ ಪತ್ತೆಯಾಗಿದೆ. 20ಕ್ಕೂ ಅಧಿಕ ಹಸುಗಳನ್ನು ಸಾಯಿಸಿರುವ ಶಂಕೆ ವ್ಯಕ್ತವಾಗಿದೆ. ಹಸುಗಳಿಗೆ ಬಾಳೆಹಣ್ಣಿನಲ್ಲಿ ವಿಷ ಹಾಕಿ ನೀಡಿರಬಹುದು ಎಂದು ಹೇಳಲಾಗುತ್ತಿದೆ. ಇದರ ಅರಿವೇ ಇಲ್ಲದ ಹಸುಗಳು ಅವುಗಳನ್ನು ತಿಂದು ಮೃತಪಟ್ಟಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಆದರೆ ಈ ಕೃತ್ಯ ಯಾರು ಮಾಡಿದ್ದು, ಏಕೆ ಮಾಡಿದ್ದು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.