ಒಂದು ದಿನದ ನವಜಾತ ಹೆಣ್ಣು ಶಿಶು ಮಾವಿನ ತೋಟದಲ್ಲಿ ಪತ್ತೆ! | Janata news
ಕೋಲಾರ: : ಮಾವಿನ ತೋಟದಲ್ಲಿ ನವಜಾತ ಶಿಶುವೊಂದನ್ನು ಹೆತ್ತವರು ಬಿಟ್ಟು ಹೋಗಿರುವ ಘಟನೆ ಕೋಲಾರ ತಾಲೂಕಿನ ಆಲೇರಿ ಗ್ರಾಮದ ಬಳಿ ನಡೆದಿದೆ.
ಒಂದು ದಿನದ ನವಜಾತ ಹೆಣ್ಣುಮಗುವೊಂದನ್ನು ಆಲೇರಿ ಗ್ರಾಮದ ಬಳಿಯ ಮಾವಿನ ತೋಪಿನಲ್ಲಿಟ್ಟು ಹೋಗಿದ್ದರು, ಮಗುವಿನ ಅಳುವಿನ ಧ್ವನಿಯಿಂದ ಸ್ಥಳೀಯರೊಬ್ಬರಿಗೆ ಗಮನಕ್ಕೆ ಬಂದಿದೆ. ಈ ವೇಳೆ ಸ್ಥಳೀಯರೊಬ್ಬರು ರಕ್ಷಣೆ ಮಾಡಿ ಸುಗಟೂರು ಆರೋಗ್ಯ ಕೇಂದ್ರಕ್ಕೆ ಒಪ್ಪಿಸಿದ್ದಾರೆ.
ಸುಗಟೂರು ಆರೋಗ್ಯ ಕೇಂದ್ರದ ವೈದ್ಯೆ ಕಾವ್ಯ ಮಗುವಿಗೆ ಆರೈಕೆ ಮಾಡಿದ್ದಾರೆ.
English summary :Kolar