ಎಚ್‍ಎಎಲ್ ನಲ್ಲಿ ಅಪ್ರೆಂಟಿಸ್‍ಶಿಪ್‍ಗೆ ಅವಕಾಶ | Janata news
ಕಾರವಾರ : ಹಿಂದುಸ್ಥಾನ ಏರೊನಾಟಿಕ್ಸ್ ಲಿಮಿಟೆಡ್‍ನ ಟ್ರೇನಿಂಗ್ ಸಂಸ್ಥೆಯವರು ಫಿಟ್ಟರ್, ಟರ್ನರ್, ಮಶಿನಿಷ್ಟ ಇಲೆಕ್ಟ್ರಿಶಿಯನ್, ವೆಲ್ಡರ್, ಪಾಸಾ, ಕಾರ್ಪೆಂಟರ್, ಫೌಂಡರಿಮೆನ್ ಹಾಗೂ ಶೀಟ್‍ಮೆಟಲ್, ವರ್ಕರ್, ಅಪ್ರೆಂಟಿಸ್ ತರಬೇತಿಗಳಿಗಾಗಿ ಆಯ್ಕೆ ಮಾಡಲಿರುವರು.
ಎಸ್.ಎಸ್.ಎಲ್.ಸಿ. ಮತ್ತು ರಾಷ್ಟ್ರೀಯ ವೃತ್ತಿ ತರಬೇತಿ ಕೌನ್ಸಿಲ್‍ನಿಂದ ಅಂಗೀಕೃತವಾದ ಸಂಸ್ಥೆಯಿಂದ ಐ.ಟಿ.ಐ. ಪ್ರಮಾಣ ಪತ್ರ ಪಡೆದ ಆಸಕ್ತ ಅಭ್ಯರ್ಥಿಗಳು ಖುದ್ದಾಗಿ ಆನ್‍ಲೈನ್ ವಿಳಾಸ : www.apprenticeship.gov.in ನಲ್ಲಿ ನೋಂದಣಿ ಮಾಡಿ, ಆ ನೋಂದಣಿ ಸಂಖ್ಯೆಯನ್ನು ಯೋಜನಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಗಳಿಗೆ ತೋರಿಸಿ ಅರ್ಜಿ ನಮೂನೆಯನ್ನು ಪಡೆಯಬಹುದು. ನಂತರ ಯೋಜನಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಯಿಂದ ಪಡೆದ ಅರ್ಜಿಯನ್ನು ಭರ್ತಿ ಮಾಡಿ ಸಪ್ಟೆಂಬರ್ 15 ರೊಳಗಾಗಿ ಉದ್ಯೋಗಾಧಿಕಾರಿಯವರಿಗೆ ಸಲ್ಲಿಸಲು ತಿಳಿಸಿದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08382-226386 ಅಥವಾ ಮೊಬೈಲ್ ಸಂಖ್ಯೆ +91-9481274298 ಸಂಪರ್ಕಿಸಲು ಉದ್ಯೋಗಾಧಿಕಾರಿ, ಯೋಜನಾ ಉದ್ಯೋಗ ವಿನಿಮಯ ಕಚೇರಿ ಪ್ರಕಟಣೆಯಲ್ಲಿ ಕೋರಿದ್ದಾರೆ.