ಸಿಹಿ ಪೊಂಗಲ್ ತಯಾರಿಸುವ ಸರಳ ವಿಧಾನ.... | Janata news

14 Jan 2020
7418
Sakkarai Pongal (Sweet Pongal) recipe

ಬೆಂಗಳೂರು : ಜನತಾ ನ್ಯೂಸ್ ಓದುಗರಿಗೆ ಸಂಕ್ರಾತಿಯ ಶುಭಾಶಯಗಳು. ಸುಗ್ಗಿ ಹಬ್ಬವಾದ ಸಂಕ್ರಾಂತಿಗೆ ಎಳ್ಳು ಬೆಲ್ಲ, ಸಕ್ಕರೆ ಅಚ್ಛು ಮತ್ತು ಈ ಹುಗ್ಗಿ ಅಥವ ಪೊಂಗಲ್ ವಿಶೇಷ ವಾಗಿದೆ. ಆದ್ದರಿಂದ ನಿಮಗಾಗಿ ಸಿಹಿ ಪೊಂಗಲ್ ಮಾಡುವ ವಿಧಾನ ಇಂದು ತಿಳಿದುಕೊಳ್ಳೋಣ ....

ಬೇಕಾಗುವ ಸಾಮಗ್ರಿಗಳು:
* ಹೆಸರುಬೇಳೆ – 1 ಕಪ್
* ಅಕ್ಕಿ – 1 ಕಪ್
* ಪುಡಿ ಮಾಡಿದ ಬೆಲ್ಲ/ ಸಕ್ಕರೆ – 1 ಕಪ್
* ಏಲಕ್ಕಿ – 1 to 2
* ದ್ರಾಕ್ಷಿ ,ಗೋಡಂಬಿ- 50 ಗ್ರಾಂ
* ತುಪ್ಪ – 4 to 6 ಚಮಚ
* 1/4 cup ಕೊಬ್ಬರಿ ತುರಿ

ಮಾಡುವ ವಿಧಾನ:
* ಮೊದಲಿಗೆ ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು ಹಾಕಿ ಅದು ಕೆಂಪಾಗುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ.

* ನಂತರ ಬೇಳೆ ಮತ್ತು ಅಕ್ಕಿಯನ್ನು ಚೆನ್ನಾಗಿ ತೊಳೆದು ಕುಕ್ಕರಿನಲ್ಲಿ ಮೂರರಿಂದ ನಾಲ್ಕು ಸಿಟಿ ಕೂಗಿಸಿ ಸ್ವಲ್ಪ ತಣ್ಣಗಾಗಲು ಬಿಡಿ.

* ಒಂದು ಚಮಚ ತುಪ್ಪವನ್ನು ಬಿಸಿ ಮಾಡಿ ಗೋಡಂಬಿ ಮತ್ತು ದ್ರಾಕ್ಷಿಯನ್ನು ಬೇರೆ ಬೇರೆಯಾಗಿ ಹುರಿದು ಇಟ್ಟುಕೊಳ್ಳಿ .

* ಮತ್ತೊಂದು ಪ್ಯಾನ್ ನಲ್ಲಿ ಪುಡಿಮಾಡಿದ ಬೆಲ್ಲ ಹಾಕಿ ಕರಗಿಸಿ ಅದನ್ನು ಸೋಸಿ ಕಸ ತೆಗೆದು ಇಟ್ಟುಕೊಳ್ಳಿ.

* ಸೋಸಿದ ಬೆಲ್ಲವನ್ನು ಒಂದು ದಪ್ಪ ತಳದ ಪಾತ್ರೆಯಲ್ಲಿ ಕುದಿಯಲು ಇಡಿ. ಗಟ್ಟಿಯಾದ ಮೇಲೆ ಅದಕ್ಕೆ ಬೆಂದ ಅಕ್ಕಿ ಬೇಳೆಯನ್ನು ಸ್ವಲ್ಪ ತುಪ್ಪದೊಂದಿಗೆ ಹಾಕಿ ಚೆನ್ನಗಿ ಕಲಕಿ 5 ನಿಮಿಷ ಸಣ್ಣ ಉರಿಯಲ್ಲಿ ಹಾಗೆ ಬೇಯಲು ಬಿಡಿ.

* ಈಗ ಕೊಬ್ಬರಿ, ಏಲಕ್ಕಿ ಪುಡಿಯನ್ನು ಹಾಕಿ ಕಲಕಿ ಸಣ್ಣ ಉರಿಯಲ್ಲಿ ಒಂದು ನಿಮಿಷ ಬೇಯಲು ಬಿಡಿ ನಂತರ ಒಲೆಯನ್ನು ಆರಿಸಿ.

* ಹುರಿದಿಟ್ಟ ದ್ರಾಕ್ಷಿ ಗೋಡಂಬಿಯನ್ನು ಹಾಕಿ ಕಲಸಿ, ಸಿಹಿ ಹುಗ್ಗಿಯನ್ನು ಬಿಸಿಯಾಗಿ ಸವಿಯಿರಿ.

ಎಲ್ಲರಿಗೂ ಮತ್ತೊಮ್ಮೆ ಸಂಕ್ರಾತಿಯ ಹಬ್ಬದ ಶುಭಾಶಯಗಳು

sweet-pongal-recipe_2020.jpg

English summary :Sakkarai Pongal (Sweet Pongal) recipe

ರಾಮಲಿಂಗ ರೆಡ್ಡಿ ಅವರು ನನಗೆ ರಾಜೀನಾಮೆ ಸ್ವೀಕಾರ ಮಾಡಲ್ಲ -ಸಿಎಂ ಡಿಕೆ.ಶಿವಕುಮಾರ್
ರಾಮಲಿಂಗ ರೆಡ್ಡಿ ಅವರು ನನಗೆ ರಾಜೀನಾಮೆ ಸ್ವೀಕಾರ ಮಾಡಲ್ಲ -ಸಿಎಂ ಡಿಕೆ.ಶಿವಕುಮಾರ್
ಅಂಡಮಾನ್ ದ್ವೀಪದ ಸಮೀಪ ತೈಲ ನಿಕ್ಷೇಪ : ಆಯಿಲ್ ಇಂಡಿಯಾ ಲಿಮಿಟೆಡ್ ಗೆ ಅಭಿನಂದನೆ ಸಲ್ಲಿಸಿದ ಪೆಟ್ರೋಲಿಯಂ ಸಚಿವ ಸಿಂಗ್
ಅಂಡಮಾನ್ ದ್ವೀಪದ ಸಮೀಪ ತೈಲ ನಿಕ್ಷೇಪ : ಆಯಿಲ್ ಇಂಡಿಯಾ ಲಿಮಿಟೆಡ್ ಗೆ ಅಭಿನಂದನೆ ಸಲ್ಲಿಸಿದ ಪೆಟ್ರೋಲಿಯಂ ಸಚಿವ ಸಿಂಗ್
ರಾಮಲಿಂಗಾ ರೆಡ್ಡಿ ರಾಜೀನಾಮೆ: ಖಾತೆ ಹಂಚಿಕೆ ನಂತರ ಸಂಪುಟ ಬಿಕ್ಕಟ್ಟು
ರಾಮಲಿಂಗಾ ರೆಡ್ಡಿ ರಾಜೀನಾಮೆ: ಖಾತೆ ಹಂಚಿಕೆ ನಂತರ ಸಂಪುಟ ಬಿಕ್ಕಟ್ಟು
ಸಿಎಂ ಡಿಕೆ.ಶಿವಕುಮಾರ ನೇತ್ರತ್ವದಲ್ಲಿ ಕರ್ನಾಟಕ ಸಂಪುಟ ಖಾತೆ ಹಂಚಿಕೆ
ಸಿಎಂ ಡಿಕೆ.ಶಿವಕುಮಾರ ನೇತ್ರತ್ವದಲ್ಲಿ ಕರ್ನಾಟಕ ಸಂಪುಟ ಖಾತೆ ಹಂಚಿಕೆ
ಬಿಕೆ.ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ
ಬಿಕೆ.ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ
ಕರ್ನಾಟಕ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದರು
ಕರ್ನಾಟಕ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದರು
ಪ್ರಮಾಣ ವಚನ ಸಮಾರಂಭಕ್ಕೆ ದೇವೇಗೌಡ, ಯಡಿಯೂರಪ್ಪ, ಸಿದ್ದರಾಮಯ್ಯ ಅವರನ್ನು  ಆಹ್ವಾನಿಸಿದ ಡಿಕೆ ಶಿವಕುಮಾರ್
ಪ್ರಮಾಣ ವಚನ ಸಮಾರಂಭಕ್ಕೆ ದೇವೇಗೌಡ, ಯಡಿಯೂರಪ್ಪ, ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ ಡಿಕೆ ಶಿವಕುಮಾರ್
ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭ : ವಿಧಾನಸೌಧದ ಸುತ್ತಮುತ್ತ ಅರ್ಧ ದಿನ ರಜೆ ಘೋಷಣೆ
ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭ : ವಿಧಾನಸೌಧದ ಸುತ್ತಮುತ್ತ ಅರ್ಧ ದಿನ ರಜೆ ಘೋಷಣೆ
ರುದ್ರಮ್-2 ಗಾಳಿಯಿಂದ ನೆಲಕ್ಕೆ ವಿಕಿರಣ ವಿರೋಧಿ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆ
ರುದ್ರಮ್-2 ಗಾಳಿಯಿಂದ ನೆಲಕ್ಕೆ ವಿಕಿರಣ ವಿರೋಧಿ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆ
ರಾಜೀನಾಮೆ ಊಹಾಪೋಹಗಳ ನಡುವೆಯೇ ಬಿಜೆಪಿ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿದ ಅಣ್ಣಾಮಲೈ
ರಾಜೀನಾಮೆ ಊಹಾಪೋಹಗಳ ನಡುವೆಯೇ ಬಿಜೆಪಿ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿದ ಅಣ್ಣಾಮಲೈ
ಪ್ರಧಾನಿ ಮೋದಿ ಮನ್ ಕಿ ಬಾತ್‌ನಲ್ಲಿ ಸೇವೆ, ನಾವೀನ್ಯತೆ ಮತ್ತು ರಾಷ್ಟ್ರೀಯ ಪ್ರಗತಿಯನ್ನು ಎತ್ತಿ ತೋರಿಸಿದರು
ಪ್ರಧಾನಿ ಮೋದಿ ಮನ್ ಕಿ ಬಾತ್‌ನಲ್ಲಿ ಸೇವೆ, ನಾವೀನ್ಯತೆ ಮತ್ತು ರಾಷ್ಟ್ರೀಯ ಪ್ರಗತಿಯನ್ನು ಎತ್ತಿ ತೋರಿಸಿದರು
ಜೂನ್ 3 ರಂದು ಸಂಜೆ 04:05 ಕ್ಕೆ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ
ಜೂನ್ 3 ರಂದು ಸಂಜೆ 04:05 ಕ್ಕೆ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ

ಜನತಾ ರುಚಿ MORE RECIPE...