ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ! | Janata news
ಬೆಂಗಳೂರು : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ(ಕೆಎಸ್‌ಪಿ)ಯಲ್ಲಿ ಖಾಲಿ ಇರುವ 218 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಸೇರ ಬಯಸುವ ಆಸಕ್ತ ಪುರುಷ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. 24-06-2019ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ(ರಾಜ್ಯ ಬೋರ್ಡ್, ಸಿಬಿಎಸ್ ಇ, ಐಸಿಎಸ್ ಇ, ಕೆಒಎಸ್, ಎನ್ ಐಒಎಸ್) ಅಥವಾ ತತ್ಸಮಾನ ಅರ್ಹತೆ.
ವಯೋಮಿತಿ: ಸಾಮಾನ್ಯ ಅಭ್ಯರ್ಥಿ: 18 ರಿಂದ 25 ವರ್ಷ ಎಸ್ ಸಿ/ ಎಸ್ಟಿ/ ಕೆಟಗೆರಿ 01, 2ಎ, 3ಎ, 3ಬಿ : 18 ರಿಂದ 27 ವರ್ಷ ಬುಡಕಟ್ಟು ಜನಾಂಗ: 18 ರಿಂದ 30 ವರ್ಷ
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈಯಕ್ತಿಕ ಸಂದರ್ಶನ.
ಹೆಚ್ಚಿನ ಮಾಹಿತಿಗಾಗಿ: ಇಲ್ಲಿ ಕ್ಲಿಕ್ ಮಾಡಿ
English summary :KSP recruitment 2019 for 218 Special Reserve PoliceConstable